ದೊಡ್ಡಬಳ್ಳಾಪುರ (Doddaballapura): ಪ್ರೀತಿಸಿದವಳಿಗಾಗಿ ಇಬ್ಬರು ಯುವಕರ ನಡುವೆ ನಗರದ ಶಾಂತಿನಗರದ ಭಾರ್ಗವಿ ಬಾರ್ನಲ್ಲಿ ಸಿನಿಮೀಯ ರೀತಿಯಲ್ಲಿ ಮಚ್ಚು, ಲಾಂಗ್ಗಳಿಂದ ನಡೆದ ಹಲ್ಲೆ ಪ್ರಕರಣ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಗರದ ಸೋಮಶೇಖರ ಎಂಬುವವನ ಮೇಲೆ ನಾಹೀದ್ ಎಂಬುವವನಿಂದ ಹಲ್ಲೆ ನಡೆದಿದೆ. ಹಲವು ದಿನಗಳಿಂದ ಹುಡುಗಿಯನ್ನು ಪ್ರೀತಿಸುತ್ತಿದ್ದ ಸೋಮಶೇಖರ್, ಮೊದಲು ಪ್ರೀತಿ ಮಾಡುತ್ತಿದ್ದ ಯುವತಿ ನಂತರ ಸೋಮಶೇಖರನನ್ನು ಬಿಟ್ಟು ನಾಹೀದ್ ಎಂಬುವವನ ಜೊತೆ ಓಡಾಟ ನಡೆಸುತ್ತಿದ್ದ ಆರೋಪ ಕೇಳಿ ಬಂದಿದೆ.
ಇದೇ ವಿಚಾರವಾಗಿ ಸೋಮಶೇಖರ್ ಹುಡುಗಿಯನ್ನು ಪ್ರಶ್ನಿಸಿದಕ್ಕೆ ನಾಹೀದ್ ಗ್ಯಾಂಗ್ ಕಟ್ಟಿಕೊಂಡು ಬಂದು ಲಾಂಗುಗಳಿಂದ ಹಲ್ಲೆ ನಡೆಸಿದ್ದಾನೆ ಎಂದು ಬಾರ್ನಲ್ಲಿನ ಇತರೆ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗುಂಪುಗಳ ನಡುವಿನ ಕಂಡು ಬೆಚ್ಚಿ ಬಿದ್ದ ಜನರು. ದೊಡ್ಡಬಳ್ಳಾಪುರ ನಗರದಲ್ಲಿ ಇತ್ತೀಚೆಗೆ ಪುಂಡರ ಹಾವಳಿ ಮೀತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.