ದೊಡ್ಡಬಳ್ಳಾಪುರ (Harithalekhani): ಸುಮಾರು 35ರಿಂದ 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನಂದಿಮೋರಿ ಮೇಲ್ಸೇತುವೆ ಬಳಿ ಸಂಭವಿಸಿದೆ.
ಈ ಕುರಿತಂತೆ ಯಶವಂತಪುರ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.
ಚಹರೆ: 168 ಸೆಂ.ಮೀ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, ತಲೆಯಲ್ಲಿ ಸುಮಾರು 2.5 ಇಂಚು ಉದ್ದದ ಕಪ್ಪು ತಲೆ ಕೂದಲು ಇದ್ದು , ಕಪ್ಪನೆಯ ಗಡ್ಡ ಮೀಸೆ ಬಿಟ್ಟಿದ್ದು ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ಬಟ್ಟೆಗಳು: ಕಪ್ಪು ಬಣ್ಣದ ರೌಂಡ್ ನೆಕ್ ಟೀ-ಶರ್ಟ್, ಕಡುಆಕಾಶ್ ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ.
ಮೃತನ ವಾರಸುದಾರರು ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ ಮೊಬೈಲ್ ಸಂಖ್ಯೆ 9480802143, 9902193960, ರೈಲ್ವೆ PSI 9480802118 ಸಂಪರ್ಕಿಸಲು ರೈಲ್ವೆ ಪೊಲೀಸರು ಮನವಿ ಮಾಡಿದ್ದಾರೆ.