ದೊಡ್ಡಬಳ್ಳಾಪುರ (Harithalekhani): ಇಂದು ಸಂಜೆ ಸುರಿದ ತೀವ್ರ ಗಾಳಿ ಮಿಶ್ರಿತ ಅಶ್ವಿನಿ ಮಳೆಗೆ ತಾಲೂಕಿನ ಆರೂಢಿ ಗ್ರಾಮದಲ್ಲಿ ಬೃಹತ್ ಬಿಲ್ವಪತ್ರೆ ಮರವೊಂದು ನೆಲಕ್ಕೊರಗಿದೆ.
ಸಂಜೆ 4.30 ರ ಸುಮಾರಿಗೆ 15 ನಿಮಿಷಗಳ ಕಾಲ ಸುರಿದ ಬಿರುಗಾಳಿ ಮಿಶ್ರಿತ ಭಾರಿ ಮಳೆ ಸುರಿದ್ದು, ಈ ವೇಳೆ 45 ವರ್ಷಗಳ ಹಳೆಯದಾದ ಬೃಹತ್ ಬಿಲ್ವಪತ್ರೆ ಮರ ಉರುಳಿ ಬಿದ್ದಿದೆ.
ಬಿಲ್ವಪತ್ರೆ ಮರ ವಿದ್ಯುತ್ ಕಂಬಿಗಳ ಮೇಲೆ ಬಿದ್ದ ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಪಾರಾಗಿವೆ. ಬೆಸ್ಕಾಂ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ತೆರಳಿ ಮರದ ಕೊಂಬೆಗಳನ್ನು ತೆರವುಗೊಳಿಸಬೇಕಿದ್ದು, ಇಲ್ಲವಾದಲ್ಲಿ ವಿದ್ಯುತ್ ಕಂಬಗಳ ಸಹಿತ ಮರ ನೆಲಕ್ಕೆ ಬೀಳುವ ಆತಂಕ ಎದುರಾಗಿದೆ.
ಘಟನೆಯಿಂದಾಗಿ ಈ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.