ಕೊರಟಗೆರೆ (Harithalekhani): ಗುಡುಗು ಮಿಂಚು ಸಹಿತ ಬಿಳುಗಾಳಿಗೆ ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಚೀಲಗಾನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗಮಧ್ಯೆ ಸಂಭವಿಸಿದೆ.
ದ್ವೀಚಕ್ರ ವಾಹನ ಸವಾರ ಚೀಲಗಾನಹಳ್ಳಿ ಗ್ರಾಮದ ಯೋಗೀಸ್ (33 ವರ್ಷ) ಮೃತ ದುರ್ದೈವಿ. ಹಿಂಬದಿ ಸವಾರ ನರಸಿಂಹಮೂರ್ತಿ ಅವರನ್ನು ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ವಡ್ಡಗೆರೆಯಿಂದ ಚೀಲಗಾನಹಳ್ಳಿ ಗ್ರಾಮಕ್ಕೆ ಹೋಗುವ ವೇಳೆ ಬಿರುಗಾಳಿ ಹೆಚ್ಚಾಗಿ ವಿದ್ಯುತ್ ಕಟ್ಟಾಗಿ ದ್ವೀಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚರಂಡಿಗೆ ಬಿದ್ದ ಒದ್ದಾಡುತ್ತಿದ್ದ ಹಿಂಬದಿ ಸವಾರ ನರಸಿಂಹಮೂರ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಬೆಸ್ಕಾಂ ಇಲಾಖೆ ಎಇಇ ಪ್ರಸನ್ನಕುಮಾರ್, ಸಿಪಿಐ ಅನಿಲ್ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.