ಗದಗ (Harithalekhani): ಗೆಳೆಯನ ಬ್ಲಾಕ್ ಮೇಲ್‌ಗೆ ಬೇಸತ್ತ ದೈಹಿಕ ಶಿಕ್ಷಕಿ ಯೋರ್ವರು ಆತ್ಮಹತ್ಯೆ (Suicide) ಮಾಡಿಕೊಂಡಿರೋ ಘಟನೆ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು 29 ವರ್ಷದ ದೈಹಿಕ ಶಿಕ್ಷಣ ಶಿಕ್ಷಕಿ ಸೈರಾಬಾನು ನದಾಫ್ ಎಂದು ಗುರುತಿಸಲಾಗಿದೆ.
ಮದುವೆಗೆ ಇನ್ನೂ 8 ದಿನ ಬಾಕಿ ಇರುವಾಗಲೇ ಮನೆಯಲ್ಲಿ ನೇಣು ಬಿಗಿದುಕೊಂಡು ದೈಹಿಕ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಒಂದು ಕಡೆ ಮನೆಯಲ್ಲಿ ಮದುವೆಗಾಗಿ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಮದುವೆ ಸಾಮಗ್ರಿಗಳನ್ನು ತರಲು ಹೋಗಿದ್ದ ಪೋಷಕರು ಮರಳಿ ಬರುವಷ್ಟರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಸೈರಾಬಾನು ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಮಾಡ್ತಿದ್ದರು. ನ್ಯಾಷನಲ್ ಲೇವಲ್ ಕುಸ್ತಿಪಟು ಆಗಿ ಹೆಸರು ಮಾಡಿದ್ದರು. ಹತ್ತಾರು ಮೆಡಲ್, ಕಪ್ ಗೆದ್ದು ಸಾಕಷ್ಟು ಹೆಸರು ಮಾಡಿದ್ದರು.
ಅಲ್ಲದೇ ಇಡೀ ಮನೆ ಜವಾಬ್ದಾರಿ ಸೈರಾಬಾನು ಹೊತ್ತಿದ್ದಳು. ಗಂಡು ಮಕ್ಕಳು ಇಲ್ಲದಿದ್ದಕ್ಕೆ ತಾನೇ ಮನೆಯ ಜವಾಬ್ದಾರಿ ನಿರ್ವಹಣೆ ಮಾಡ್ತಿದ್ದಳು. ಈಗ ಗೆಳೆಯನ ಟಾರ್ಚರ್ಗೆ ಬೇಸತ್ತು ಬದುಕು ಅಂತ್ಯಗೊಳಿಸಿದ್ದಾರೆ ಎನ್ನಲಾಗಿದೆ.
ಮಗಳನ್ನು ಕಳೆದುಕೊಂಡ ಪೋಷಕರ ಮದುವೆ ಮನೆಯಲ್ಲಿ ಈಗ ಸೂತಕದ ಛಾಯೆ ಮೂಡಿದೆ. ಕೊನೆ ಮಗಳು ಅಂತ ಭರ್ಜರಿ ಮದುವೆ ಮಾಡಿಕೊಡಲು ಸಿದ್ಧತೆ ಮಾಡಿಕೊಂಡಿದ್ದ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.
ತನ್ನ ಮಗಳಿಗೆ ಟಾರ್ಚರ್ ನೀಡಿರೋ ಯುವಕನಿಗೆ ತಕ್ಕ ಶಿಕ್ಷೆಯಾಗಬೇಕು ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆತನಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.