ದೊಡ್ಡಬಳ್ಳಾಪುರ: ತಾಲೂಕಿನ ತಳಗವಾರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸೇವಾ ಸಮಿತಿ ವತಿಯಿಂದ ವಿಶ್ವ ಗುರು ಜಗಜ್ಯೋತಿ ಬಸವಣ್ಣನವರ (Basava Jayanti) ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವೀರಗಾಸೆ ಕುಣಿತ ಮತ್ತು ಧ್ವಜ ಕಂಬ ಕುಣಿತದೊಂದಿಗೆ ಗ್ರಾಮದ ಬೀದಿಗಳಲ್ಲಿ ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಗ್ರಾಮದ ಮುಖಂಡರಾದ ಚಂದ್ರಮೌಳಿ, ನಾಗರಾಜು, ಮೈಲಾರಪ್ಪ, ವೀರಭದ್ರಪ್ಪ, ಭೂದೇವ, ಹಚ್ಚಿ ರುದ್ರಪ್ಪ, ಚಂದ್ರಶೇಖರ್, ಶಿವಾನಂದ್, ಮಹದೇವಪ್ಪ, ಪ್ರಸನ್ನ ಕುಮಾರ್, ಲಿಂಗಪ್ಪ, ಯುವ ಮುಖಂಡರಾದ ರೋಹಿತ್ಣ ವಿನಯ್, ವಿನೋದ್, ಗಣೇಶ್, ರಾಹುಲ್, ವಿಜಯ್ ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.