ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ನರಸಿಂಹಸ್ವಾಮಿ ದೇವಾಲಯಗಳಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ (Lakshmi Narasimhaswamy) ಜಯಂತ್ಯುತ್ಸವವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.
ತಾಲೂಕಿನ ಪ್ರಸಿದ್ಧ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಕಾರದಿಂದ ಶ್ರೀ ನರಸಿಂಹ ಸ್ವಾಮಿ ಜಯಂತಿ ಅಂಗವಾಗಿ ರಥೋತ್ಸವ ನಡೆಯಿತು.
ಲಕ್ಷ್ಮೀ ನರಸಿಂಹಸ್ವಾಮಿ ಜಯಂತಿ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯ್ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ದೇವಾಲಯದ ಕಾರ್ಯದರ್ಶಿ ಎಂ ನಾರಾಯಣಸ್ವಾಮಿ, ನಗರಸಭೆಯ ಪೋರಾಯುಕ್ತ ಕಾರ್ತಿಕೇಶ್ವರ್, ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜೆ.ಎಸ್.ರಂಗಪ್ಪ, ಕೆ.ಎಸ್.ರವಿ, ಲಕ್ಷ್ಮಣಾಯಕ್, ಆರ್ ವಿ ಮಹೇಶ್ ಕುಮಾರ್, ಹೇಮಲತಾ ರಮೇಶ್, ಪ್ರಧಾನ ಅರ್ಚಕ ಆರ್ ಸುಬ್ರಹ್ಮಣ್ಯ, ಸುಬ್ಬ ಶಾಸ್ತ್ರಿ, ಶ್ರೀನಿಧಿ, ಶಂಕರ್, ಪೊಲೀಸ್ ಸಿಬ್ಬಂದಿ ರಂಗನಾಥ್ ಮತ್ತಿತರರಿದ್ದರು.
ಅರ್ಕಾವತಿ ಕ್ಷೇತ್ರ
ನಗರದ ಅರ್ಕಾವತಿ ಬಡಾವಣೆಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಜಯಂತ್ಯುತ್ಸವ ವಾರ್ಷಿಕ ಮಹೋತ್ಸವ ಶ್ರದ್ದಾ ಭಕ್ತಿಗಳಿಂದ ನೆರವೇರಿತು.
ಕಾರ್ಯಿಕ್ರಮದ ಅಂಗವಾಗಿ ಸುಪ್ರಭಾತ ಸೇವೆ ನಂತರ ಕಳಶಾರಾಧನೆ, ನಂತರ ಪ್ರಧಾನ ಹೋಮ, ಮೂರ್ತಿ ಹೋಮ, ಮಹಾಕುಂಭ ಪ್ರೋಕ್ಷಣೆ, ಅಲಂಕಾರ ಸೇವೆ ಹಾಗೂ ಪ್ರಾಕಾರೋತ್ಸವ ನಡೆಯಿತು.
ಮೇ 12ರಂದು ಬೆಳಿಗ್ಗೆ ಸತ್ಯನಾರಾಯಣಸ್ವಾಮಿ ವ್ರತ ನಡೆಯಲಿದೆ.
ನಗರದ ಕುಚ್ಚಪ್ಪನ ಪೇಟೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀ ನರಸಿಂಹಸ್ವಾಮಿ ಜಯಂತಿ ಅಂಗವಾಗಿ ವಿಶೇಷ ಅಲಂಕಾರ, ಉಯ್ಯಾಲೋತ್ಸವ ಪೂಜಾ ಕಾರ್ಯಗಕ್ರಮಗಳು ಜರುಗಿದವು.
ಮೇ.12ರಂದು ನಡೆಯಲಿರುವ ವೇಣುಗೋಪಾಲಸ್ವಾಮಿ ರಥೋತ್ಸವದ ಅಂಗವಾಗಿ ವೇಣುಗೋಪಾಲಸ್ವಾಮಿಗೆ 120ನೇ ವರ್ಷದ ಕಲ್ಯಾಣೋತ್ಸವ ಶ್ರದ್ಧಾಭಕ್ತಿಗಳಿಂದ ನೆರವೇರಿತು.