ದೊಡ್ಡಬಳ್ಳಾಪುರ; ನಗರದ ಶ್ರೀ ಪ್ರಭುದೇವ ಯೋಗ ಕೇಂದ್ರದ (Prabhudeva Yoga Centre) ವತಿಯಿಂದ ಅಭಿನಂದನಾ ದಿನ, ಬೆಳದಿಂಗಳ ಊಟ, ವಿಶ್ವ ತಾಯಂದಿರ ದಿನವನ್ನು ಭಾನುವಾರ ರಾತ್ರಿ ಆಚರಿಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಭುದೇವ ಯೋಗ ಕೇಂದ್ರದ ಸೀತಾರಾಮ್, ಶ್ರೀನಿವಾಸ್, ವಿಜಯ ಕುಮಾರ್, ಗಿರೀಶ್ ಉದ್ಘಾಟಿಸಿದರು.

ಯೋಗ ಮಹಿಳಾ ಸದಸ್ಯರಿಂದ ಜಾನಪದ ನೃತ್ಯಗಳು, ಗೀತೆ ಗಾಯನ ಕಾರ್ಯಕ್ರಮ ವಿಶೇಷವಾಗಿತ್ತು.
ಯೋಗ ಸದಸ್ಯರು ಚಂದಮಾಮನ ಚಿತ್ರಗಳನ್ನು ಬಿತ್ತರಿಸಿದರು. ಉತ್ತಮ ಚಂದಮಾಮನ ಚಿತ್ರಕ್ಕೆ ಮೂರು ಬಹುಮಾನಗಳನ್ನು ನೀಡಲಾಯಿತು.

ಬೆಳದಿಂಗಳ ಅಂಗಳದಲ್ಲಿ ಚಂದಮಾಮನನ್ನು ನೋಡುತ್ತಾ ಅಮ್ಮನ ಕೈ ತುತ್ತನ್ನು ಸವಿದರು.