ರಾಯಚೂರು: ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರ ಬೆನ್ನಲ್ಲೆ ಭಾರತ ಸೇನಾ ರಕ್ಷಣಾ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಮಂತ್ರಾಲಯದ ರಾಯರ ಮಠದ (Mantralaya Rayar mata) ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಘೋಷಣೆ ಮಾಡಿದ್ದಾರೆ.
ಮಂತ್ರಾಲಯದ ರಾಯರ ಮಠದ ಆವರಣ ದಲ್ಲಿ ನಡೆದ ಸುಬುದೇಂದ್ರ ತೀರ್ಥ ಸ್ವಾಮಿ ಅವರ 13ನೇ ಪಟ್ಟಾಭಿಷೇಕ ಉತ್ಸವದ ವೇಳೆ ಈ ಘೋಷಣೆ ಮಾಡಿದರು.
ದೇಶದಲ್ಲಿ ಉದ್ವಿಗ್ನ ಉಂಟಾಗಿದೆ. ತಾತ್ಕಾಲಿಕವಾಗಿ ಯುದ್ಧ ವಿರಾಮ ದೊರಕಿದೆ. ರಾತ್ರಿ ಹಗಲು, ಮಳೆ-ಬಿಸಿಲು, ಪ್ರಾಣವನ್ನು ಲೆಕ್ಕಿಸದೇ ದೇಶದ ರಕ್ಷಣೆಗಾಗಿ ಯೋಧರು ಶ್ರಮಿಸುತ್ತಿದ್ದಾರೆ. ಕೇಂದ್ರ ಸರಕಾರವು ದೇಶದ ರಕ್ಷಣೆ, ಭದ್ರತೆಗೆ ಶ್ರಮಿಸುತ್ತಿದೆ.
ದೇಶದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಸರಳವಾಗಿ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.
ಇದಕ್ಕೂ ಮೊದಲು ಸುಬುಧೇಂದ್ರ ತೀರ್ಥ ಸ್ವಾಮಿಗಳ 13 ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವನ್ನು ಶ್ರೀಗಳ ಶಿಷ್ಯರು ಮತ್ತು ಭಕ್ತರು ಆಚರಿಸಿದರು.

ಶ್ರೀಗಳಿಗೆ ತುಲಾಭಾರ ಮಾಡಿದರು. ಸಮಾರಂಭದಲ್ಲಿ ಶ್ರೀಮಠದ ಸಿಬ್ಬಂದಿ ಸಾವಿರಾರು ಭಕ್ತರು ಭಾಗಿಯಾಗಿದ್ದರು.