Harithalekhani story: Revenge for injustice

ಹರಿತಲೇಖನಿ ದಿನಕ್ಕೊಂದು ಕಥೆ: ಅನ್ಯಾಯಕ್ಕೆ ಪ್ರತೀಕಾರ

Harithalekhani story: ಸಂತರ ದಯೆ-ಕರುಣೆಗೆ ಮಿತಿಯಿಲ್ಲ ಎಂದು ನಿಮಗೆಲ್ಲ ತಿಳಿದಿದೆ. ಆದರೆ ಅವರು ಅನ್ಯಾಯದ ವಿರುದ್ಧ ಪ್ರತೀಕಾರ ಸಹ ಮಾಡುತ್ತಾರೆ ಮತ್ತು ಅನ್ಯಾಯ ಮಾಡುವವರಿಗೆ ಶಿಕ್ಷೆಯನ್ನೂ ವಿಧಿಸುತ್ತಾರೆ ಎಂದು ಈ ಕಥೆಯಿಂದ ನಮಗೆ ಕಲಿಯಲು ಸಿಗಲಿದೆ.

ಸಮರ್ಥ ರಾಮದಾಸ ಸ್ವಾಮಿ ಒಬ್ಬ ಶ್ರೇಷ್ಠ ಸಂತರು ಮತ್ತು ಶಿವಾಜಿ ಮಹಾರಾಜರ ಗುರುಗಳೂ ಆಗಿದ್ದರು. ಸಮರ್ಥ ರಾಮದಾಸ ಸ್ವಾಮಿಯವರ ಶಿಷ್ಯರು ಪ್ರಚಾರಕ್ಕಾಗಿ ಎಲ್ಲೆಡೆ ಪ್ರಯಾಣಿಸುತ್ತಿದ್ದರು. ಇದು ಶಿವಾಜಿ ಮಹಾರಾಜರು ಉದಯಕ್ಕೆ (ಪ್ರವರ್ಧಮಾನಕ್ಕೆ) ಬರುತ್ತಿದ್ದಂತಹ ಕಾಲವಾಗಿತ್ತು. ಹಿಂಸಾಚಾರಿ ಮೊಘಲರು ಭಾರತದ ವಿವಿಧ ಸ್ಥಳಗಳಲ್ಲಿ ಜನರನ್ನು ಪೀಡಿಸುತ್ತಿದ್ದರು. ಮಹಾರಾಷ್ಟ್ರದ ಸತಾರಾ ಪ್ರದೇಶವು ವಿಜಾಪುರದ ಆದಿಲಶಾಹ ನ ನಿಯಂತ್ರಣದಲ್ಲಿತ್ತು. ಅವನ ಮೊಘಲ್ ಠಾಣೇದಾರನೊಬ್ಬನು ಸಂಗಮ ಮಾಹುಲಿ ಎಂಬ ಊರಿನಲ್ಲಿ ವಾಸಿಸುತ್ತಿದ್ದನು. ಈ ಠಾಣೇದಾರನು ಕ್ರೂರ ಅತ್ಯಾಚಾರಿಯಾಗಿದ್ದನು. ಅವನು ಯಾವಾಗಲೂ ಸಜ್ಜನ ಬ್ರಾಹ್ಮಣರು, ಸಾಧುಗಳು, ಸನ್ಯಾಸಿಗಳು, ತಪಸ್ವಿಗಳನ್ನು ಹಿಂಸಿಸುತ್ತಿದ್ದನು. ಅವನು ಬ್ರಾಹ್ಮಣರ ಸ್ನಾನ-ಸಂಧ್ಯಾ, ಯಜ್ಞ ಮತ್ತು ಯಾಗಗಳನ್ನು ನಿಲ್ಲಿಸಿ ಬಿಟ್ಟಿದ್ದನು. ಪುರಾಣ-ಓದುವುದು ಮತ್ತು ಕೀರ್ತನೆ ಮಾಡುವುದನ್ನು ಸಹ ನಿಲ್ಲಿಸಿದ್ದನು.

ಅದೇ ಸಮಯದಲ್ಲಿ ಶ್ರೀ ಸಮರ್ಥ ರಾಮದಾಸ ಸ್ವಾಮಿಯವರ ಶಿಷ್ಯ ಉದ್ಧವ ಸ್ವಾಮಿ ಮಾಹುಲಿಯಲ್ಲಿ ನೆಲೆಸಿದ್ದರು. ಅವರು ತಮ್ಮ ಭಕ್ತರೊಂದಿಗೆ ಸ್ನಾನ, ಸಂಧ್ಯಾ, ಪೂಜೆಯನ್ನು ಪ್ರಾರಂಭಿಸಿದರು. ಕೃಷ್ಣ ನದಿಯ ಘಟ್ಟಗಳಲ್ಲಿ ಪ್ರವಚನವನ್ನು ಪ್ರಾರಂಭಿಸಲಾಯಿತು. ಈ ವಿಷಯವನ್ನು ತಿಳಿದ ಠಾಣೇದಾರನು, ತಕ್ಷಣವೇ ಕೃಷ್ಣಾ ನದಿಯ ಘಟ್ಟಕ್ಕೆ ತಲುಪಿ ಉದ್ಧವ ಸ್ವಾಮಿಜಿಯನ್ನು ಹಿಡಿದು ಅವರನ್ನು ಥಳಿಸಿ ಉದ್ಧವ ಸ್ವಾಮಿಜಿ ಮತ್ತು ಅವರ ನಾಲ್ಕು ಶಿಷ್ಯರನ್ನು ಬಂಧಿಸಿ ಕತ್ತಲ ಕೋಣೆಯಲ್ಲಿ ಕೂಡಿಹಾಕಿದನು. ಎಲ್ಲ ಜನರು ಭಯಭೀತರಾಗಿ ಓಡಲು ಪ್ರಾರಂಭಿಸಿದರು. ಸಮರ್ಥ ರಾಮದಾಸ ಸ್ವಾಮೀಜಿಯವರ ಒಬ್ಬ ಶಿಷ್ಯನು ಅವಕಾಶ ಸಿಕ್ಕಿದ ತಕ್ಷಣ ಓಡಿಹೋದನು.

ಆ ಸಮಯದಲ್ಲಿ ಶ್ರೀ ಸಮರ್ಥರು ಚಾಫಳ ಎಂಬ ಗ್ರಾಮದಲ್ಲಿದ್ದರು. ಆ ಶಿಷ್ಯನು ಓಡಿಹೋಗಿ ಮರುದಿನ ಬೆಳಗ್ಗೆ ಚಾಫಳ ತಲುಪಿದನು. ನಡೆದ ಘಟನೆಯನ್ನು ಶ್ರೀ ಸಮರ್ಥ ರಾಮದಾಸಸ್ವಾಮಿಜಿಯವರಿಗೆ ತಿಳಿಸಿದನು. ಸಮರ್ಥರು ಕೋಪದಿಂದ ಕೆಂಡಾಮಂಡಲವಾದರು. ಅವರು ತಮ್ಮ ಎರಡನೆಯ ಶಿಷ್ಯ ಕಲ್ಯಾಣಸ್ವಾಮಿಗೆ ಬೆತ್ತವನ್ನು ತರಲು ಆದೇಶಿಸಿ ಪೀಠದಿಂದ ಎದ್ದರು ಮತ್ತು ನೇರವಾಗಿ ಮಾಹುಲಿಯತ್ತ ಪ್ರಯಾಣ ಬೆಳೆಸಿದರು. ಸಮರ್ಥರು ಏನನ್ನೂ ತಿನ್ನದೇ ಕುಡಿಯದೆ ಹೊರಟಿದ್ದರು.

ಸೂರ್ಯಾಸ್ತದ ಒಂದು ಗಂಟೆ ಮೊದಲು ಅವರು ಮಾಹುಲಿಯನ್ನು ತಲುಪಿ ನೇರವಾಗಿ ಠಾಣೆದಾರನ ಮನೆ ಪ್ರವೇಶಿಸಿದರು. ಆ ಸಮಯದಲ್ಲಿ ಠಾಣೆದಾರನು ಹುಕ್ಕಾ ಸೇದುತ್ತಾ ಕುಳಿತಿದ್ದನು. ಅವರು ಠಾಣೇದಾರನ ಕುತ್ತಿಗೆಯನ್ನು ಹಿಡಿದು ಅವನನ್ನು ಎಳೆದು ಅರ್ಧ ಜೀವವಾಗುವ ತನಕ ತಮ್ಮ ಕೈಯಲ್ಲಿದ್ದ ಬೆತ್ತದಿಂದ ಹೊಡೆದರು. ಸಮರ್ಥರು ಅವನನ್ನು ಎಳೆದುಕೊಂಡು ರಸ್ತೆಗೆ ಕರೆತಂದರು. ಠಾಣೇದಾರನ ಚೀರಾಟವು ವಾತಾವರಣದಲ್ಲಿ ಪ್ರತಿಧ್ವನಿಸುತ್ತಿತ್ತು. ಠಾಣೆದಾರನ ಸೇವಕರೋ, ಒಂದೇ ಒಂದು ಶಬ್ದ ಬಾಯಿಂದ ಹೊರ ತೆಗೆಯದೆ ನಿಂತಿದ್ದರು. ಸಮರ್ಥ ಸ್ವಾಮೀಜಿಯವರ ಉಗ್ರನರಸಿಂಹನ ಕೋಪದ ರೂಪವನ್ನು ನೋಡಿ ಎಲ್ಲರೂ ಗಾಬರಿಗೊಂಡರು. ಠಾಣೆದಾರನನ್ನು ಬಿಡಿಸುವ ಧೈರ್ಯ ಯಾರಲ್ಲಿಯೂ ಇರಲಿಲ್ಲ.

ಠಾಣೇದಾರನ ದೇಹದಿಂದ ರಕ್ತ ಹರಿಯುತ್ತಿತ್ತು. ಅವನು ಕರುಣೆಗಾಗಿ ಬೇಡಿಕೊಳ್ಳುತ್ತ ಸಮರ್ಥ ಮಹಾರಾಜರ ಚರಣಗಳಲ್ಲಿ ಎರಗಿದನು. ಕತ್ತಲು ಕೋಣೆಯಲಿರುವವರನ್ನು ಮೊದಲು ಬಿಡುಗಡೆ ಮಾಡು ಎಂದು ಶ್ರೀ ಸಮರ್ಥ ಮಹಾರಾಜರು ಗರ್ಜಿಸಿದರು. ಠಾಣೆದಾರನು ಜೀವ ಉಳಿಸಲು ತನ್ನ ಸೇವಕರಿಗೆ ಆದೇಶಿಸಿದನು. ಕತ್ತಲು ಕೋಣೆಯನ್ನು ತೆರೆಯಲಾಯಿತು. ಉದ್ಧವಸ್ವಾಮಿ ಮತ್ತು ಅವರ ಭಕ್ತರು ಸಮರ್ಥರ ಚರಣಗಳಲ್ಲಿ ಬಿದ್ದರು. ಠಾಣೆದಾರನು ಶ್ರೀ ಸಮರ್ಥ ಮಹಾರಾಜರಿಂದ ಬಹಳ ಪ್ರಭಾವಿತನಾದನು. ಅವನು ಸಮರ್ಥ ಮಹಾರಾಜರ ಚರಣಗಳನ್ನು ಹಿಡಿದು ಕ್ಷಮೆಯಾಚಿಸಿದನು ಮತ್ತು ಭವಿಷ್ಯದಲ್ಲಿ ಯಾರನ್ನೂ ಹಿಂಸಿಸುವುದಿಲ್ಲ, ಭಜನೆ-ಕೀರ್ತನೆ ಮತ್ತು ಪುರಾಣ ಓದುವುದನ್ನು ನಿಲ್ಲಿಸುವುದಿಲ್ಲ ಮತ್ತು ಯಾರಿಗೂ ಅನ್ಯಾಯ ಮಾಡುವುದಿಲ್ಲ , ಎಂದು ಆಣೆ ಮಾಡಿದನು.

ಅನಂತರ, ದಯಾಮಯ ಅಂತಃಕರಣದಿಂದ ಶ್ರೀ ಸಮರ್ಥ ರಾಮದಾಸ್ವಾಮಿಯವರು ಅವನನ್ನು ಕ್ಷಮಿಸಿದರು ಮತ್ತು ಅವನ ಗಾಯಗಳಿಗೆ ಔಷಧಿ ಗಿಡಮೂಲಿಕೆಗಳ ಲೇಪ ಹಚ್ಚಿಸಿ ಚಿಕಿತ್ಸೆ ನೀಡಿದರು. ಶ್ರೀ ಸಮರ್ಥ ಮಹಾರಾಜರು ದಿನವಿಡಿ ಏನನ್ನೂ ತಿನ್ನಲಿಲ್ಲ ಎಂದು ಗ್ರಾಮಸ್ಥರಿಗೆ ತಿಳಿದಾಗ, ಗ್ರಾಮದ ಜನರು ಸಮರ್ಥ ರಾಮದಾಸ್ವಾಮಿ ಮತ್ತು ಉದ್ಧವಸ್ವಾಮಿ ಮತ್ತು ಇತರ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಹ ಮಾಡಿದರು.

ಆ ರಾತ್ರಿ ಶ್ರೀ ಸಮರ್ಥ ಸ್ವಾಮೀಜಿಯವರು ಮಾಹುಲಿಯ ಘಟ್ಟದಲ್ಲಿ ವಿವಿಧ ದೃಷ್ಟಾಂತ ಹಾಗೂ ಉದಾಹರಣೆಗಳೊಂದಿಗೆ ಪ್ರವಚನವನ್ನು ನೀಡಿದರು. ಈ ಪ್ರವಚನವನ್ನು ಕೇಳಿದ ಮಾಹುಲಿಯ ಜನರು ತೃಪ್ತರಾದರು.
ಕೃಪೆ: ಹಿಂದೂ ಜಾಗೃತಿ (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ (Dandupalya gang) ಚಿಕ್ಕ ಹನುಮಂತಪ್ಪ (ಅಲಿಯಾಸ್ ಕೆ.ಕೃಷ್ಣಪ್ಪ) ಎಂಬಾತನನ್ನು ಆಂಧ್ರಪ್ರದೇಶದ ಮದನಪಳ್ಳೆ ಗ್ರಾಮದಲ್ಲಿ ಬಂಧಿಸಲಾಗಿದೆ.

[ccc_my_favorite_select_button post_id="118778"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!