ದೆಹಲಿ: ಭಾರತ-ಪಾಕ್ ಸೇನಾ ಸಂಘರ್ಷ ವೇಳೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಕೊಟ್ಟು, ಸೈನಿಕರನ್ನು ಕಳುಹಿಸಿ ನೆರವಾದ ‘ಟರ್ಕಿ’ ದೇಶದ ವಿರುದ್ಧ ಭಾರತದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ‘ಬಾಯ್ಕಾಟ್ ಟರ್ಕಿ’ (ಟರ್ಕಿ ಬಹಿಷ್ಕರಿಸಿ) ಅಭಿಯಾನವೂ ಶುರುವಾಗಿದೆ. (Boycott Turkey)
ಪಾಕ್ ಜತೆ ಕೈಜೋಡಿಸಿ ಭಾರತದ ಮೇಲೆ ಡೋನ್ ದಾಳಿ ಮಾಡಿದ ಟರ್ಕಿ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಭಾರತ ವಿರೋಧಿ ಸುದ್ದಿ ಪ್ರಸಾರ ಮಾಡುತ್ತಿದ್ದ ಟರ್ಕಿಯ ‘ಟಿಆರ್‌ಟಿ ವರ್ಡ್’ ಮಾಧ್ಯಮದ ‘ಎಕ್ಸ್’ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಟರ್ಕಿ, ಅಜರ್ ಬೈಜಾನ್ ಪ್ರವಾಸ ಕೈಬಿಡುವಂತೆ ಭಾರತೀಯರಲ್ಲಿ ಜಾಗೃತಿ ಮೂಡಿಸುವ ಅಭಿಯಾನವೂ ಜಾಲತಾಣದಲ್ಲಿ ನಡೆದಿದೆ.
ಭೂಕಂಪದಲ್ಲಿ ನೂರಾರು ಜನರನ್ನು ಕಳೆದುಕೊಂಡು, ಅಪಾರ ನಷ್ಟ ಅನುಭವಿಸಿ ಕಷ್ಟದಲ್ಲಿದ್ದ ಟರ್ಕಿಗೆ ಭಾರತ ಮಾನವೀಯ ದೃಷ್ಟಿಯಿಂದ ನೆರವು ನೀಡಿದ್ದನ್ನೇ ಟರ್ಕಿ ಮತ್ತು ಅಜರ್‌ಬೈಜಾನ್ ಮರೆತಿವೆ. ಆದೇಶಗಳ ಜತೆಗಿನ ಸಂಬಂಧ ಕಡಿತಗೊಳಿಸ ಬೇಕೆಂಬ ಕೂಗು ಕೇಳಿಬರುತ್ತಿದೆ.
‘ಬಾಯ-ಟ್ ಟರ್ಕಿ’ ತೀವ್ರಗೊಳ್ಳುತ್ತಿದೆ. ಭಾರತೀಯರು ಟರ್ಕಿ ಪ್ರವಾಸ ರದ್ದು ಮಾಡುತ್ತಿದ್ದಾರೆ. ಟರ್ಕಿ ಒಣಹಣ್ಣು, ಅಮೃತಶಿಲೆ ಆಮದು ಸ್ಥಗಿತಗೊಳಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣವನ್ನೂ ಕೈಬಿಡುತ್ತಿದ್ದಾರೆ.