ದೊಡ್ಡಬಳ್ಳಾಪುರ: ಟ್ರಾನ್ಸ್ಫಾರ್ಮರ್ ಬಳಿ ಫ್ಯೂಸ್ ಹಾಕಲು ತೆರಳಿದ್ದ ವೇಳೆ ವಿದ್ಯುತ್ ಸ್ವರ್ಷಿಸಿ (Electric shock) ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬೆಳವಂಗಲ ಹೋಬಳಿಯ ಕಂಗಳಾಪುರದಲ್ಲಿ ಸಂಭವಿಸಿದೆ.
ಮೃತ ದುರ್ದೈವಿ ರೈತನನ್ನು 42 ವರ್ಷದ ರಂಗಪ್ಪ ಎಂದು ಗುರುತಿಸಲಾಗಿದೆ.
ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಗಳಾಪುರದಲ್ಲಿ ಸೋಮವಾರ ರಾತ್ರಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು, ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿ ಟ್ರಾನ್ಸ್ಫಾರ್ಮರ್ ಹತ್ತಿ ರಿಪೇರಿ ಮಾಡಲು ಮುಂದಾಗಿದ್ದಾನೆ, ಈ ವೇಳೆ ವಿದ್ಯುತ್ ತಂತಿ ತಗಲಿ ಟ್ರಾನ್ಸ್ಫಾರ್ಮರ್ ಬಳಿಯೇ ಬಿದ್ದು ಜೀವಬಿಟ್ಟಿದ್ದಾನೆ.
ಮೃತ ವ್ಯಕ್ತಿಗೆ ಮಡದಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.