ದೇವನಹಳ್ಳಿ: ಪತ್ನಿಯನ್ನು ಭೀಕರವಾಗಿ ಕೊಲೆಗೈದು (Murder), ಪತಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿ ಸಂಭವಿಸಿದೆ.
ಸುಮಾ (38 ವರ್ಷ) ಕೊಲೆಯಾದ ಪತ್ನಿ, ಬಸವರಾಜು @ ಶಾಮ್ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ ಎಂದು ಗುರುತಿಸಲಾಗಿದೆ.
ವಿಜಯಪುರ ಪಟ್ಟಣದ ಅಶೋಕನಗರದ ವಿಜಯನಗರ ಬಡಾವಣೆಯಲ್ಲಿರುವ ಮನೆಯಲ್ಲಿ, ಮಲಗಿದ್ದಲ್ಲೇ ಪತ್ನಿ ತಲೆಗೆ ಕಬ್ಬಿಣದ ಡೆಂಬಲ್ಸ್ ನಿಂದ ಹೊಡೆದು ಭೀಕರ ಕೊಲೆಗೈದ ಪತಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆಗೈದು ನಂತರ ಪತ್ನಿಯ ಸೀರೆಯಿಂದ ನೇಣು ಹಾಕಿಕೊಂಡ ಪತಿ ಬಸವಾಚಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ .
ಸ್ಥಳಕ್ಕೆ ವಿಜಯಪುರ ಠಾಣೆ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದಾರೆ.