ಹೈದರಾಬಾದ್: ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನು ಊಟಕ್ಕೆ ಕರೆದ ಕಿರಾತಕನೋರ್ವ ಮಾದಕ ವಸ್ತುವನ್ನು ನೀಡಿ, ಅತ್ಯಾಚಾರ (Rape) ನಡೆಸಿರುವ ಘಟನೆ ನೆರೆಯ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನಗರದ ಬಂಜಾರ ಹಿಲ್ಸ್‌ನಲ್ಲಿ ನಡೆದಿದೆ.
ಬಂಜಾರ ಹಿಲ್ಸ್‌ನಲ್ಲಿ ವಾಸಿಸುವ 24 ವರ್ಷದ ಮಹಿಳೆಗೆ ಫೆಬ್ರವರಿ 2023 ರಲ್ಲಿ ಫೇಸ್‌ಬುಕ್ ಮೂಲಕ ಮಹೇಂದ್ರವರ್ಧನ್ ಎಂಬ ವ್ಯಕ್ತಿ ಪರಿಚಯವಾಯಿತು.
ಸ್ವಲ್ಪ ದಿನಗಳ ಕಾಲ ಮೊಬೈಲ್‌ನಲ್ಲಿ ಮಾತನಾಡಿದ ನಂತರ, ಮಹೇಂದ್ರವರ್ಧನ್ ಅದೇ ವರ್ಷದ ಆಗಸ್ಟ್ 15 ರಂದು ಅವಳನ್ನು ಊಟಕ್ಕೆ ತನ್ನ ಮನೆಗೆ ಆಹ್ವಾನಿಸಿದ್ದನಂತೆ
ಆಕೆಯ ಮನೆಗೆ ಬಂದ ನಂತರ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂಬುದು ಯುವತಿಯ ಆರೋಪ.
ಅಲ್ಲದೆ ಆಕೆಯ ಮೇಲಿನ ಲೈಂಗಿಕ ದೌರ್ಜನ್ಯದ ಫೋಟೋ ಮತ್ತು ವಿಡಿಯೋಗಳನ್ನು ತೆಗೆದಿದ್ದಾನೆ. ಮರುದಿನ ಬೆಳಿಗ್ಗೆ, ಆಕೆ ನಿದ್ರೆಯಿಂದ ಎದ್ದಾಗ, ಆ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ, 20 ಲಕ್ಷ ರೂಪಾಯಿ ನೀಡಬೇಕು, ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಯುವತಿ ಕೇಳಿದಷ್ಟು ಹಣ ಕೊಟ್ಟಿದ್ದಾಳೆ. ಆದರೆ, ಕೆಲವು ದಿನಗಳ ಬಳಿಕ ಸಂತ್ರಸ್ತೆಯಿಂದ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಮಹೇಂದ್ರವರ್ಧನ್, ಹಣ ಕೊಡದೆ ಇದ್ದರೆ ಫೋಟೋಗಳು ಮತ್ತು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಮತ್ತೆ ಬೆದರಿಸಿದ್ದಾನೆ.
ಈ ಕುರಿತಂತೆ ಸಂತ್ರಸ್ತೆ ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾಳೆಂದು ವರದಿಯಾಗಿದೆ.