ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಹೆಂಡತಿ (wife) ಕಾಟಕ್ಕೆ ಗಂಡಂದಿರು ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗಿದೆ. ಕೆಲ ದಿನಗಳ ಹಿಂದಷ್ಟೇ ಹೆಂಡತಿಯ ಕಿರುಕುಳದ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಬಳಿ ಹೇಳಿಕೊಂಡು ಗಂಡ ಕಣ್ಣೀರು ಹಾಕಿದ್ದು ಕೂಡ ವರದಿಯಾಗಿತ್ತು.
ಇದೀಗ ಮತ್ತೆ ಹೆಂಡತಿ ಕಾಟಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಗಂಡ ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ಬೆಳಗಾವಿಯ ಅನಗೋಳದ ದುರ್ಗಾ ಕಾಲೋನಿಯಲ್ಲಿ ನಡೆದಿದೆ.
ಮೃತನನ್ನು ಸುನೀಲ್ ಮೂಲಿಮನಿ (33 ವರ್ಷ) ಎಂದು ಗುರುತಿಸಲಾಗಿದೆ.
ತನ್ನದೇ ಕಂಪ್ಯೂಟರ್ ಶಾಪ್ನಲ್ಲಿ ವೈಯರ್ದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೂ ಮುನ್ನ ತನ್ನ ಸಾವಿಗೆ ಹೆಂಡತಿ ಕಾರಣ ಅಂತಾ ಡೆತ್ ನೋಟ್ ಬರೆದಿಟ್ಟಿದ್ದಾರೆ.
ನಾಲ್ಕು ವರ್ಷದ ಹಿಂದೆ ಪೂಜಾ ಎಂಬುವವರನ್ನು ಸುನೀಲ್ ಮದುವೆಯಾಗಿದ್ದರು. ಮೂರು ವರ್ಷದ ಮಗು ಕೂಡ ಇದೆ.
ಈ ಕುರಿತಂತೆ ಉದ್ಯಮಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.