ತಿರಿಪತಿ: ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ (Tirumal) ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಸುತ್ತಲೂ ಮತ್ತೊಮ್ಮೆ ವಿಮಾನವೊಂದು ಸುತ್ತು ಹಾಕಿದೆ.
ದೇವಾಲಯದ ಗೋಪುರದ ಮೇಲೆ ವಿಮಾನವೊಂದು ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದೆ.
ಆಗಮ ಶಾಸ್ತ್ರದ ನಿಯಮಗಳ ಪ್ರಕಾರ, ದೇವಸ್ಥಾನದ ಮೇಲೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂಬ ನಿಯಮಗಳಿದ್ದರೂ, ಶ್ರೀವಾರಿ ದೇವಸ್ಥಾನದ ಮೇಲೆ ಆಗಾಗ್ಗೆ ಹಾರಾಟಗಳು ನಡೆಯುತ್ತಿರುವುದಕ್ಕೆ ಭಕ್ತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ತಿರುಮಲವನ್ನು ಹಾರಾಟ ನಿಷೇಧಿತ ವಲಯ ಎಂದು ಘೋಷಿಸಬೇಕೆಂಬ ಟಿಟಿಡಿಯ ಮನವಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿರುವುದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.