ನೆಲಮಂಗಲ: ಪ್ರೀತಿಸಿದ ಹುಡುಗಿಗಾಗಿ ಇಬ್ಬರು ಯುವಕರ ನಡುವೆ ನಡೆದ ಜಗಳ ಕೊಲೆಯಲ್ಲಿ (Murder) ಅಂತ್ಯಗೊಂಡ ಘಟನೆ ತಾಲೂಕಿನ ಗೊಲ್ಲಹಳ್ಳಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ದರ್ಶನ್ ಎಂದು ಗುರುತಿಸಲಾಗಿದ್ದು, ಹತ್ಯೆ ಆರೋಪಿ ಯುವತಿಯ ಪ್ರೇಮಿ ವೇಣುಗೋಪಾಲನನ್ನು ಪೊಲೀಸರು ಬಂಧಿಸಿದ್ದಾರೆ.
ವೇಣುಗೋಪಾಲ ಹಿಂದೆ ರೈಲಿನಲ್ಲಿ ಚುರುಮುರಿ ಮಾರಿಕೊಂಡಿದ್ದು ಎಂಟು ವರ್ಷದ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಆದರೆ ಮನೆಯವರು ಇದಕ್ಕೆ ಒಪ್ಪಿರಲಿಲ್ಲ. ಬಳಿಕ ಹುಡುಗಿಗೆ ದರ್ಶನ್ ಜೊತೆಗೆ ಮದುವೆ ನಿಶ್ಚಯವಾಗಿತ್ತು.
ಶುಕ್ರವಾರ ಮಾತುಕತೆಗೆಂದು ವೇಣುಗೋಪಾಲ, ದರ್ಶನ್ ನನ್ನು ಕರೆದಿದ್ದನಂತೆ, ಈ ಮಾತನನ್ನು ನಂಬಿ ದರ್ಶನ್ ಹೋಗಿದ್ದಾಗ ಇಬ್ಬರ ನಡುವೆ ಜಗಳ ಶುರವಾಗಿತ್ತು. ಆಗ ತನ್ನ ಬಳಿಯಿದ್ದ ಚಾಕುವಿನಿಂದ ವೇಣುಗೋಪಾಲ್ 21 ಬಾರಿ ದರ್ಶನ್ ಗೆ ಇರಿದು ಹತ್ಯೆಗೈದಿದ್ದ, ಸಾಯುವ ಮುನ್ನ ದರ್ಶನ್ ಹುಡುಗಿಗೆ ಫೋನ್ ಮಾಡಿ ಈ ವಿಷಯ ಹೇಳಿದ್ದ.
ಬಳಿಕ ವೇಣುಗೋಪಾಲ ತಿರುಪತಿಗೆ ಹೋಗಿ ತಲೆಮರೆಸಿಕೊಂಡಿದ್ದನಂತೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವೇಣುಗೋಪಾಲನನ್ನು ಬಂಧಿಸಿದ್ದಾರೆ.