ಬೆಂಗಳೂರು; ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂದೆ ಮಂಗಳವಾರ ಆಯೋಜಿಸಿದ್ದ ಮ್ಯಾರಥಾನ್ ಅನ್ನು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಉದ್ಘಾಟಿಸಿದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ ಎಂ ನರೇಂದ್ರಸ್ವಾಮಿ, ಎಂಎಲ್ಸಿ ಸುಧಾಮದಾಸ್ ಮತ್ತಿತರರು ಭಾಗವಹಿಸಿದ್ದರು.
ಆದರೆ ಕಾರ್ಯಕ್ರಮದ ಬಳಿಕ ಸೈಕಲ್ ಜಾಥಾ ವೇಳೆ ನಿಯಂತ್ರಣ ತಪ್ಪಿದ ಡಿಕೆ ಶಿವಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಿದ್ದಿದ್ದಾರೆ.
ಕೂಡಲೇ ಅಲ್ಲಿದ್ದವರು ಡಿಕೆ ಶಿವಕುಮಾರ್ ಅವರನ್ನು ಮೇಲಕ್ಕೆ ಎಬ್ಬರಿಸಿ ಉಪಚರಿಸಿದರು. ಸದ್ಯ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಗಾಯಗಳಾಗಿಲ್ಲ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಅಂತೆಯೇ ಕಾರ್ಯಕ್ರಮದ ಸುದ್ದಿ ಮಾಡದ ಅನೇಕ ಸುದ್ದಿ ಮಾಧ್ಯಮಗಳು ಡಿಸಿಎಂ ನಿಯಂತ್ರಣ ತಪ್ಪಿ ಬಿದ್ದ ವಿಡಿಯೋ ಕುರಿತು ಹೆಚ್ಚಿನ ಪೋಕಸ್ ನೀಡುತ್ತಿವೆ.