ಟೆಹ್ರಾನ್: ಇರಾನ್ (Iran) ಮೇಲೆ ಇಸ್ರೇಲ್ (Israel) ಬಾಂಬ್ ದಾಳಿ ಮುಂದುವರೆದಿದೆ. ಸೂಪರ್ಸಾನಿಕ್ ಕ್ಷಿಪಣಿಗಳೊಂದಿಗೆ ದಾಳಿಗಳನ್ನು ನಡೆಸಲಾಗುತ್ತಿದೆ. ಹಲವು ರೀತಿಯ ಚಿತ್ರಗಳು, ವಿಡಿಯೋಗಳು ಹೊರಬಂದಿವೆ.
ಎರಡು ದೇಶಗಳು ದಾಳಿಗೆ ಪ್ರತಿದಾಳಿ, ಏಟಿಗೆ ಎದಿರೇಟು ಎಂಬಂತೆ ಇಸ್ರೇಲ್ ಮತ್ತು ಇರಾನ್ ಪರಸ್ಪರ ಕ್ಷಿಪಣಿ ದಾಳಿಗಳಿದಿವೆ. ಇದರಿಂದ ಸಂಘರ್ಷ ತಾರಕಕ್ಕೇರಿದೆ.
ಇಸ್ರೇಲ್ ಮತ್ತು ಇರಾನ್ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಹಾಗೂ ಕುಟುಂಬ ಸದಸ್ಯರನ್ನು ಈಶಾನ್ಯ ಟೆಹ್ರಾನ್ ನಲ್ಲಿರುವ ಬಂಕರ್ ಗೆ ಸ್ಥಳಾಂತರಿಸಲಾಗಿದೆ ಎಂದು ಇರಾನ್ ಇಂಟರ್ ನ್ಯಾಷನಲ್ ವರದಿ ಮಾಡಿದೆ.
ಖಮೇನಿ ಪುತ್ರ ಮೋಜ್ ಟಬಾ ಖಮೇನಿ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಬಂಕರ್ ನಲ್ಲಿ ಆಶ್ರಯ ಪಡೆದಿರುವುದಾಗಿ ವರದಿ ವಿವರಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ದಾಳಿ, ಪ್ರತಿದಾಳಿ ತೀವ್ರಗೊಳ್ಳುವ ಮೂಲಕ ಯುದ್ಧಭೀತಿ ಹುಟ್ಟಿಸಿರುವ ನಡುವೆ ಈ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇರಾನ್ ನ ಪರಮಾಣು ಘಟಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶ ಮಾಡುವುದಾಗಿ ಪಣ ತೊಟ್ಟಿರುವ ಇಸ್ರೇಲ್, ಇರಾನ್ ನಡುವೆ 4ನೇ ದಿನವೂ ದಾಳಿ ಮುಂದುರಿಸಿದ್ದು, ಕನಿಷ್ಠ 220ಕ್ಕೂ ಅಧಿಕ ಇರಾನ್ ನಾಗರಿಕರು, ಹಿರಿಯ ವಿಜ್ಞಾನಿಗಳು, ಕಮಾಂಡರ್ ಗಳು ಸಾವನ್ನಪ್ಪಿರುವುದಾಗಿ ಇರಾನ್ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಇರಾನ್ ನ್ಯೂಸ್ ಚಾನಲ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ
🔴BREAKING
— Goldie Ghamari, JD | گلسا قمری (@gghamari) June 16, 2025
Live footage of Islamic Regime state TV broadcaster, IRIB, being hit by Israel.
This is a huge blow to the terrorist Islamic Republic's propaganda network in Iran.
pic.twitter.com/mfecea6P5B
ಇರಾನ್ನ ಕ್ಷಿಪಣಿ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲೆ ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಕ್ಷಿಪಣಿ ದಾಳಿಯನ್ನು ಭೀಕರಗೊಳಿಸಿದೆ. ಸರ್ಕಾರಿ ನ್ಯೂಸ್ ಚಾನೆಲ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ.
ಲೇವ್ನಲ್ಲಿ ವೀರಾ ವೇಷದಿಂದ ನ್ಯೂಸ್ ಓದೋವಾಗ ಇಸ್ರೇಲ್ನ ಕ್ಷಿಪಣಿಗಳು ಅಪ್ಪಳಿವೆ.
ಈ ಸಮಯದಲ್ಲಿ ಸುದ್ದಿ ಓದುತ್ತಿದ್ದ ನಿರೂಪಕಿ ಸಹಾರ್ ಇಮಾಮಿ, ಜೀವ ಉಳಿಸಿಕೊಳ್ಳಲು ಓಡಿದ್ದಾರೆ. ಇಸ್ರೇಲ್ ದಾಳಿಗೆ ಇರಾನ್ನ ಸರ್ಕಾರಿ ಟಿವಿ ಮಾಧ್ಯಮದ ಕಟ್ಟಡಕ್ಕೆ ಹಾನಿಯಾಗಿದೆ.
ಈ ದಾಳಿಯಲ್ಲಿ 11 ಜನ ಮೃತಪಟ್ಟಿರುವ ವರದಿಯಾಗಿದ್ದು, ತಾತ್ಕಾಲಿಕವಾಗಿ ಟಿವಿ ಚಾನಲ್ ಪ್ರಸಾರ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.