ತುಮಕೂರು (ಪಾವಗಡ); ಕರ್ನಾಟಕ ಮತ್ತು ಆಂಧ್ರ ಗಡಿಭಾಗದಲ್ಲಿರುವ ಪಾವಗಡ ಕ್ಷೇತ್ರಕ್ಕೆ ಕಮಾರಣ್ಣನ ಕೊಡುಗೆ ಅಪಾರ. ಹತ್ತು ಪ್ರೌಢ ಶಾಲೆ, ಬಸ್ ಡಿಪೋ ಮತ್ತು ನೀರಾವರಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಶಾಶ್ವತವಾಗಿ ನೀರಾವರಿ ಹಾಗೂ ಸುವರ್ಣ ಗ್ರಾಮ ಹಲವಾರು ಯೋಜನೆಗಳು ಕುಮಾರಣ್ಣ ಅವಧಿಯಲ್ಲಿ ಆಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದರು.
ಪಾವಗಡದಲ್ಲಿ ನಡೆದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಾವಗಡ ಕ್ಷೇತ್ರಕ್ಕೆ ಕಮಾರಣ್ಣನ ಕೊಡುಗೆ ಅಪಾರವಾಗಿದೆ. ಆದರೆ ಇವತ್ತು ಪಾವಗಡದ ತಾಲ್ಲೂಕಿನಲ್ಲಿ ಏನಾಗಿದೆ ಪರಿಸ್ಥಿತಿ.
ಇಲ್ಲಿರುವ ಶಾಸಕರು ಕ್ಷೇತ್ರಕ್ಕೆ ಎಷ್ಟು ಅನುಧಾನ ತಂದಿದ್ದಾರೆ. ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ. ಕುಮಾರಣ್ಣ ಕಾಲದಲ್ಲಿ ಆಗಿರುವ ಕೆಲಸದಲ್ಲಿ ಶೇ 10% ಆಗಿಲ್ಲ ಕಳೆದ ಎರಡು ವರ್ಷದಲ್ಲಿ ಒಂದು ರೂಪಾಯಿ ಅನುಧಾನ ತಂದಿಲ್ಲ ಎಂದು ಕಿಡಿಕಾರಿದರು.
ಎಸ್ಇಪಿ, ಟಿಎಸ್ಪಿ ಹಣವನ್ನ ತೆಲಂಗಾಣ ಚುನಾವಣೆಗೆ ಬಳಸಿದ್ದಾರೆ
ಇವತ್ತು ಬಾಯಿಬಿಟ್ರೆ ನಾನು ಹಿಂದುಳಿದ ವರ್ಗಕ್ಕೆ ನಾನು ಸಮಾಜವಾದಿ ನಾಯಕ, ಚಾಂಪಿಯನ್ ಲೀಡರ್ ಅಂತ ಕೊಚ್ಚಿಕೊಳ್ಳುತ್ತಾರೆ ರಾಜ್ಯದ ಮುಖ್ಯಮಂತ್ರಿಗಳು. ಆದ್ರೆ ಎಸ್ಇಪಿ, ಟಿಎಸ್ಪಿ ಹಣವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಅಭಿವೃದ್ಧಿಗೆ ಮಿಸಲಿಟ್ಟಿದ್ದ ಸಾವಿರಾರು ಕೋಟಿಯನ್ನ ಹಣವನ್ನು ಲೂಟಿ ಮಾಡಿದ್ರು ಎಂದು ಅವರು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.
ನನ್ನ ಪ್ರವಾಸ ಕಾರ್ಯಕರ್ತರ ಜೊತೆ ನಾನಿದ್ದೇನೆ ಎಂದು ಹೇಳುವುದ್ದಕ್ಕೆ
ನಾನು ಮಾಡುತ್ತಿರುವುದು ಒಂದು ದಿನದ ಪ್ರವಾಸ ಅಲ್ಲ, ನನ್ನ ಪ್ರವಾಸ 58 ದಿನಗಳ ಕಾಲ ಇಡೀ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ. ನಾನು ಹೋಗುತ್ತಿರುವುದು ಮುಖಂಡರು ಮತ್ತು ಕಾರ್ಯಕರ್ತರ ಜೊತೆ ನಾನಿದ್ದೇನೆ ಎಂದು ಹೇಳುವುದ್ದಕ್ಕೆ. ಮತ್ತು ಯಾವ ಯಾವ ಜಿಲ್ಲೆಗಳಲ್ಲಿ ಏನೇನು ಸಮಸ್ಯೆಗಳಿದೆ, ಸ್ಥಳೀಯರ ಸಮಸ್ಯೆ ಏನು.? ಅದಕ್ಕೆ ಉತ್ತರ ಏನು ಪಡೆದುಕೊಳ್ಳುವುದಕ್ಕೆ ಎಂದು ತಿಳಿಸಿದರು.
2028ರ ವರೆಗೆ ಹಾರಾ- ತುರಾಯಿ ತರಬೇಡಿ
ಕಾರ್ಯಕರ್ತ ಬಂಧುಗಳಿಗೆ ನನ್ನ ಮನವಿ. ಹಾರಾ- ತುರಾಯಿ, ಹೂ ಗುಚ್ಛವನ್ನ ಹಣವನ್ನು ಖರ್ಚು ಮಾಡಿಕೊಂಡು ದಯವಿಟ್ಟು ತರಬೇಡಿ. ನಿಮ್ಮ ಮನಸಿನಲ್ಲಿ ಪ್ರೀತಿ ಇಟ್ಟುಕೊಳ್ಳಿ. ನಿಮ್ಮ ವಿಶ್ವಾಸಕ್ಕೆ ತಕಂತೆ ಹೆಜ್ಜೆ ಹಾಕುತ್ತೇನೆ. ಇಷ್ಟು ಹಣ ಖರ್ಚು ಮಾಡಿ ತರಬೇಡಿ ಇದು ಯಾವಾಗ ತಗೊಂಡು ಬರಬೇಕು ಅಂದರೆ ನಮ್ಮ ಹೋರಾಟ ದಡ ಮುಟ್ಟಿ ಕುಮಾರಣ್ಣನ ಸಿಎಂ ಮಾಡುವ ವರೆಗೂ ತರಬೇಡಿ ಎಂದ ಮನವಿ ಮಾಡಿದರು.
ಒಂದು ದಟ್ಟವಾದ ದೊಡ್ಡ ಹೆಜ್ಜೆ ಹಿಟ್ಟಿದ್ದೇನೆ. ನಿಮ್ಮ ಪ್ರೀತಿ ಸಹಕಾರ ನನ್ನ ಮೇಲೆ ಇರಲಿ ದೇವೇಗೌಡರು ಮತ್ತು ಕುಮಾರಣ್ಣನವರ ಮೇಲೆ ನೀವು ಇಟ್ಟಿರುವ ಅಭಿಮಾನ ನನಗೂ ಅದೇ ರೀತಿ ನಿಮ್ಮ ಹೃದಯಲ್ಲಿ ಕೊಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷವನ್ನು ಪಾವಗಡ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಲು ಮನವಿ ಮಾಡಿದರು. ನನ್ನ ಮನವಿಗೆ ಸ್ಪಂದಿಸಿದ ಕಾರ್ಯಕರ್ತ ಬಂಧುಗಳು ಬೂತ್ ಮಟ್ಟದಲ್ಲಿ ತಂಡಗಳನ್ನು ಕಟ್ಟಿಕೊಂಡು ಪಕ್ಷ ಸಂಘಟಿಸುವ ಭರವಸೆ ನೀಡಿದರು.
ನಾವೆಲ್ಲರೂ ಹಗಲಿರುಳು ಶ್ರಮಿಸುವ ಮೂಲಕ 2028 ಕ್ಕೆ ಕುಮಾರಣ್ಣನವರಿಗೆ ಅಧಿಕಾರ ಕೊಡಿಸುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆರಶ್ಮಿ ರಾಮೇಗೌಡ್ರು, ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ, ತಾಲ್ಲೂಕು ಅಧ್ಯಕ್ಷ ಈರಣ್ಣ ಸೇರಿದಂತೆ ಪ್ರಮುಖ ಮುಖಂಡರು, ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.