ಚಿತ್ತೂರು; ಗಂಡ ಪಡೆದ 80,000 ರೂ. ಸಾಲವನ್ನು (loan) ಮರುಪಾವತಿಸದ ಕಾರಣಕ್ಕೆ ಟಿಡಿಪಿ (TDP) ಕಾರ್ಯಕರ್ತನೋರ್ವ ಮಹಿಳೆಯನ್ನು ಹಗ್ಗದಿಂದ ಮರಕ್ಕೆ ಕಟ್ಟಿ ದೌರ್ಜನ್ಯ ನಡೆಸಿರುವ ಘಟನೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ಅವರ ಸ್ವಕ್ಷೇತ್ರ ಕುಪ್ಪಂನಲ್ಲಿ ವರದಿಯಾಗಿದೆ.
ಚಿತ್ತೂರು ಜಿಲ್ಲೆಯ ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮದಲ್ಲಿ ಬೆಳಕಿಗೆ ಬಂದ ದೌರ್ಜನ್ಯ ಇದಾಗಿದ್ದು, ನಾರಾಯಣಪುರಂ ಗ್ರಾಮದ 25 ವರ್ಷದ ಸಿರಿಷಾ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಎಂದು ಗುರುತಿಸಲಾಗಿದೆ.
ಆಕೆಯ ಪತಿ ತಿಮ್ಮರಾಯಪ್ಪ 3 ವರ್ಷಗಳ ಹಿಂದೆ ಅದೇ ಗ್ರಾಮದ ಮುನಿಕಣ್ಣಪ್ಪ ಅವರಿಂದ 80,000 ರೂ.ಗಳನ್ನು ಸಾಲವಾಗಿ ಪಡೆದಿದ್ದರಂತೆ.
ಸಾಲ ತೀರಿಸಲು ಸಾಧ್ಯವಾಗದೆ ಪತಿ ತಿಮ್ಮರಾಯಪ್ಪ ಪತ್ನಿ ಸಿರಿಷಾ (25), ಮಕ್ಕಳು ಊರನ್ನು ತೊರೆದಿದ್ದರು ಎನ್ನಲಾಗಿದೆ.
ದಿನನಿತ್ಯದ ಕೆಲಸಗಳನ್ನು ಮಾಡುತ್ತಾ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಾ ಸಾಲ ತೀರಿಸುತ್ತಿ ಸಿರಿಷಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಸಾಲ ಮರುಪಾವತಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.
ಅಲ್ಲದೆ ಆಕೆಯನ್ನು ಎಳೆದುಕೊಂಡು ಹೋಗಿ ಬಲವಂತವಾಗಿ ಬೇವಿನ ಮರಕ್ಕೆ ಹಗ್ಗದಿಂದ ಕಟ್ಟಿ ಮಟಿಡಿಪಿ ಕಾರ್ಯಕರ್ತ ಮುನಿಕಣ್ಣಪ್ಪ ಹಾಗೂ ಅವರ ಕುಟುಂಬ ಹಲ್ಲೆ ನಡೆಸಿರುವುದು ವರದಿಯಾಗಿದೆ.
Shocking ! In CM #ChandrababuNaidu's own constituency Kuppam an alleged #TDP worker tied a 25-year-old woman to a tree and publicly humiliated her over an unpaid loan of ₹80,000. Victim Sirisha has been raising her two children on her own since her husband abandoned them. After… pic.twitter.com/UI0Xft63Lh
— Ashish (@KP_Aashish) June 17, 2025
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋ ವೈರಲ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.