ದೊಡ್ಡಬಳ್ಳಾಪುರ; ನಗರ ಮತ್ತು ದೊಡ್ಡಬೆಳವಂಗಲ, ಸಾಸಲು, ಗುಂಡಮಗೆರೆ ಬೆಸ್ಕಾಂ ಉಪ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ಇಂದು ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ (Power Cut).
ನಗರದಲ್ಲಿನ 66/116ವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಪೂರೈಕೆಯಾಗುವ DF10-Vasavi, DF16-Kantanakunte NJY ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಯನ್ನು ಇಂದು (ಜೂ.19) ರಂದು ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.
ಈ ಕುರಿತಂತೆ ಬೆಸ್ಕಾಂ ನಗರ ಎಇಇ ವಿನಯ್ ಕುಮಾರ್ ಅವರು ಪ್ರಕಟಣೆ ನೀಡಿದ್ದು, DF10-Vasavi, DF16-Kantanakunte NJY ಫೀಡರ್‌ನ ಮಾರ್ಗದಲ್ಲಿ ಕವಿಪ್ರನಿನಿ ವತಿಯಿಂದ ಈ.ಹೆಚ್.ಟಿ ಮಾರ್ಗಗಳಲ್ಲಿ ಹೆಚ್ಚುವರಿ ಮಾರ್ಗದ ವಿದ್ಯುತ್ ಕಾಮಗಾರಿ ನಡೆಯುವುದರಿಂದ ಈ ವ್ಯಾಪ್ತಿಯಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಿದ್ದಾರೆ.
ಹಾಗೆಯೇ ದೊಡ್ಡಬಳ್ಳಾಪುರ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ಬರುವ ಸಾಸಲು ಶಾಖೆಯ ಸಾಸಲು 66/11 ಕೆ.ವಿ, ಗುಂಡಮಗೆರೆ 66/11 ಕೆ.ವಿ ಹಾಗೂ ದೊಡ್ಡಬೆಳವಂಗಲ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ಇಂದು ಈ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.
ಈ ಕುರಿತಂತೆ ಬೆಸ್ಕಾಂ ದೊಡ್ಡಬಳ್ಳಾಪುರ ಗ್ರಾಮಾಂತರ ಎಇಇ ಮಂಜುನಾಥ್ ಅವರು ಪ್ರಕಟಣೆ ನೀಡಿದ್ದು ಸಾಸಲು, ಗುಂಡಮಗೆರೆ ಮತ್ತು ದೊಡ್ಡಬೆಳವಂಗಲ ವ್ಯಾಪ್ತಿಯ ಪ್ರದೇಶಗಳಿಂದ ಸರಬರಾಜುಗುತ್ತಿರುವ 11 ಕೆ.ವಿ ಮಾರ್ಗಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು (ಜೂ. 19) ಗುರುವಾರ ಬೆಳ್ಳಿಗೆ 10:00 ಘಂಟೆಯಿಂದ ಸಂಜೆ 6:00 ಘಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ವಿದ್ಯುತ್ ಅಡಚಣೆ ಬಗ್ಗೆ ಎಚ್.ಟಿ ಮತ್ತು ಎಲ್,ಟಿ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಲು ಕೋರಿದ್ದಾರೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ದೊಡ್ಡಬಳ್ಳಾಪುರ ತಾಲ್ಲೂಕಿನ ಗಂಗಾಧರಪುರ, ಪಾಲನಜೋಗಿಹಳ್ಳಿ, ಹಾಲಿನಡೈರಿ ಸುತ್ತಮುತ್ತಲು, ಆರ್.ಎಮ್.ಸಿ ಮಾರ್ಕೆಟ್, ಟಿ.ಬಿ.ಸರ್ಕಲ್, ಮಾದಗೊಂಡನಹಳ್ಳಿ ರಸ್ತೆಯ ರಾಜೀವ್ ಗಾಂಧೀ ಕಾಲೋನಿ, ಚಂದ್ರಮೌಳೇಶ್ವರ ಬಡಾವಣೆ, ಸುಭಾಷ್ ನಗರ, ಕುವೆಂಪು ನಗರ, ಬಸವೇಶ್ವರನಗರ, ಪ್ರಿಯಾದರ್ಶಿನಿ ಬಡಾವಣೆ.
ಹಸನ್ ಘಟ್ಟ, ಕಂಟನಕುಂಟೆ, ಅಂತರಹಳ್ಳಿ, ತಪಸೀಹಳ್ಳಿ, ಅಳ್ಳಾಲಸಂದ್ರ, ಬಚ್ಚಹಳ್ಳಿ, ಗೊಲ್ಲಹಳ್ಳಿ, ಗೊಲ್ಲಹಳ್ಳಿ,ತಾಂಡ, ಮೇಲಿನ ನಾಯಕರಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ಕಮಲೂರು, ಕಮಲೂರು ಪಾಳ್ಯ, ನೆಲ್ಲುಕುಂಟೆ, ಕರೇನಹಳ್ಳಿ, ಹೊಸಹಳ್ಳಿ, ನಾಗಶೆಟ್ಟಿಹಳ್ಳಿ, ಚೊಕ್ಕನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು.
ಸಾಸಲು- ಗುಂಡಮಗೆರೆ ಕೇಂದ್ರದ ವ್ಯಾಪ್ತಿ
ಗುಂಡಮಗೆರೆ, ಹೊಸಕೋಟೆ, ಸೊನ್ನೆನಹಳ್ಳಿ, ಬಂಕೆನಹಳ್ಳಿ, ಮಾಕಳಿ, ವಾಬಸಂದ್ರ ಕಾಮನಹಳ್ಳಿ, ಪಚ್ಚರ್ಲಹಳ್ಳಿ, ಗುಟ್ಟೆಪಾಳ್ಯ, ಹಾರೊಹಳ್ಳಿ, ಚಿಲೇನಹಳ್ಳಿ, ಚೊಕ್ಕಹಳ್ಳಿ, ನೆಲ್ಲುಕುಂಟೆ, ಪಾಳ್ಯ ಕಮಲೂರು, ಪಾಳ್ಯ, ದಿಣ್ಣೆತಾಂಡ, ಹೊಸಹಳ್ಳಿ, ನಾಗಶೆಟ್ಟಿಹಳ್ಳಿ, ಕರೇನಹಳ್ಳಿ, ಮಜರಹೊಸಹಳ್ಳಿ, ತಾಂಡ, ಸೂಲ್ಕುಂಟೆ, ಚನ್ನವೀರನಹಳ್ಳಿ, ನಾಗಲಪುರ.
ಕೊಟ್ಟಿಗೆಮಾಚಿನಹಳ್ಳಿ, ಕುಕ್ಕಲಹಳ್ಳಿ, ಯಕಾರಲಹಳ್ಳಿ, ಹೊಸಹಳ್ಳಿ, ಜಕ್ಕೇನಹಳ್ಳಿ, ತೇಕಲಹಳ್ಳಿ, ಕಲ್ಲುಕುಂಟೆ, ಮಲ್ಲಸಂದ್ರ, ಕಟ್ಟೆಯಿಂದಲಹಳ್ಳಿ, ಬಂಡಮ್ಮನಹಳ್ಳಿ, ಉಜ್ಜನಿ, ಓಜೇನಹಳ್ಳಿ, ಹೊಸಹಳ್ಳಿ ಕಾಲೋನಿ, ಬನವತಿ, ಆರೂಢಿ, ದೊಡ್ಡಗುಂಡಪ್ಪನಾಯಕನಹಳ್ಳಿ, ಚಿಕ್ಕಗುಂಡಪ್ಪನಯಕನಹಳ್ಳಿ, ಲಿಂಗದವೀರನಹಳ್ಳಿ, ಮಗಲಹಳ್ಳಿ, ವಡ್ಡನಹಳ್ಳಿ, ಗರಿಕೇನಹಳ್ಳಿ, ಪಾಲನಹಳ್ಳಿ, ಅಮಲಗುಂಟೆ, ನರಸಾಪುರ ಲಕ್ಕೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ದೊಡ್ಡಬೆಳವಂಗಲ ವ್ಯಾಪ್ತಿ
ಹಾದ್ರಿಪುರ, ಅಜ್ಜನಕಟ್ಟೆ, ಮಧುರನಹೊಸಹಳ್ಳಿ, ನಾರನಹಳ್ಳಿ, ರಾಮೇಶ್ವರ, ಚಿಕ್ಕಹೆಚ್ಚಾಜಿ, ಕತ್ತತ್ತಳೆಪಾಳ್ಯ, ದೊಡ್ಡಬೆಳವಂಗಲ, ದೊಡ್ಡಹೆಜ್ಜಾಜ್ಞೆ, ಪುಟ್ಟಯ್ಯನ ಅಗ್ರಹಾರ, ಶಾಕಲದೇವನಪುರ, ರಾಂಪುರ, ಭಕ್ತರಹಳ್ಳಿ, ಮಲ್ಲನಾಯಕ, ವಡೇರಹಳ್ಳಿ.
ಜೋಡಿಕನರೇಪುರ, ಲಿಂಗಾಪುರ ಕಾಲೋನಿ, ಹುಲಿಕುಂಟೆ, ಚಿಕ್ಕಬೆಳವಂಗಲ, ಕತ್ತಿಹೊಸಹಳ್ಳಿ, ಕಸಘಟ್ಟ, ತರಬನಹಳ್ಳಿ, ಮುತುಗದಹಳ್ಳಿ, ತೂಬಕುಂಟೆ, ಅಪ್ಪಕಾರನಹಳ್ಳಿ, ಹುಣಸೆಪಾಳ್ಯ, ಮರಿಹೆಗ್ಗಯ್ಯನಪಾಳ್ಯ, ಮೂಗೇನಹಳ್ಳಿ, ಐಯ್ಯನಹಳ್ಳಿ, ಕೂಗೆನಹಳ್ಳಿ, ಚುಂಚೇಗೌಡನ ಹೊಸಹಳ್ಳಿ.
ಹುಸ್ಕೂರು, ಮೆಣಸಿ, ಕುಂಟನಹಳ್ಳಿ, ಅನಗಲಪುರ, ಬೋಕಿಪುರ, ಕಲ್ಲುದೇವನಹಳ್ಳಿ, ನರಸಯ್ಯನ ಅಗ್ರಹಾರ, ಸಾಸಲು, ಗುಮ್ಮನಹಳ್ಳಿ, ಶ್ರೀರಾಮನಹಳ್ಳಿ, ಮಚ್ಚೇನಹಳ್ಳಿ, ಲಕ್ಕೇನಹಳ್ಳಿ, ದಾಸರಪಾಳ್ಯ, ಕನಕೇನಹಳ್ಳಿ, ಸೊಣ್ಣಿನಹಳ್ಳಿ.
ಅಕ್ಕತಮ್ಮನಹಳ್ಳಿ, ಬೂಚನಹಳ್ಳಿ, ಸಂಕರಸನಹಳ್ಳಿ, ಹಳೆಕೋಟೆ, ಸಕ್ಕರೆ ಗೊಲ್ಲಹಳ್ಳಿ, ಕಾಳಿಪಾಳ್ಯ ಮೂಡಲಕಾಲೆನಹಳ್ಳಿ, ತಣ್ಣೀರನಹಳ್ಳಿ, ಕಾಡಲಪನಹಳ್ಳಿ, ಕೋಲಿಗೆರೆ, ಕರಡಿಪಾಳ್ಯ, ಕಾಮನ ಅಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು,
(ಕೊನೆಯ ಕ್ಷಣದ ಬದಲಾವಣೆ ಹೊರತು ಪಡಿಸಿ)