ತುಮಕೂರು: ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ತಲೆಬಾಗಬೇಕು. ಇವತ್ತಿನ ಕೋರ್ಟ್ ತೀರ್ಪಿನಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡರೇ ಸಾಕು. ಕೇತಗಾನಹಳ್ಳಿ ಜಮೀನು ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದರ ಬಗ್ಗೆ ಚರ್ಚೆ ಮಾಡಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದರು.
ತುಮಕೂರಿನ ಶಿರಾದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ; ಅವರು ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ತಲೆಬಾಗಬೇಕು. ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಕೆಲ ರಾಜಕೀಯ ವ್ಯಕ್ತಿಗಳನ್ನ ರಾಜಕೀಯವಾಗಿ ಬಲಿಪಶು ಮಾಡಲು ಎಸ್ ಐಟಿ ಯನ್ನ ದುರ್ಬಳಕೆ ಮಾಡಿಕೊಳ್ತಿರೋದು ಪ್ರಕರಣ ಬಹಳಷ್ಟು ಇದೆ ಎಂದು ಅವರು ಆರೋಪಿಸಿದರು.
ಎಸ್ ಐಟಿ ಅನ್ನುವುದನ್ನ ರಾಜ್ಯ ಸರ್ಕಾರ ಯಾವ ರೀತಿ ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ತಿದೆ ಅನ್ನುವ ಅನೇಕ ನಿದರ್ಶನ ನಮ್ಮ ಮುಂದೆ ಇದೆ. ಎಸ್ ಐಟಿ ಹಾಗೂ ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡಲು ಸರ್ಕಾರ ಅವಕಾಶ ಕೊಡಬೇಕು. ಪಾರದರ್ಶಕತೆಯಿಂದ ಕೆಲಸ ಮಾಡಲು ಬಿಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇಂತಹ ದ್ವೇಷದ ರಾಜಕಾರಣ ಮೂರು ಪಕ್ಷಕ್ಕೂ ಒಳ್ಳೆಯದಲ್ಲ ಬೆಳವಣಿಗೆಯಲ್ಲ. ಇದರಿಂದ ಸಾಧನೆ ಮಾಡುವಂತಹದ್ದು ಏನು ಇಲ್ಲ. ಅವಕಾಶ ಸಿಕ್ಕಾಗ ಜನಪರವಾಗಿ ಒಳ್ಳೆಯ ಕೆಲಸ ಮಾಡಿ. ನೀವು ಈ ರೀತಿ ದ್ವೇಷ ಮಾಡಿಕೊಂಡು ಹೋದರೇ, ನೀವು ಹಾಕಿ ಕೊಟ್ಟ ಹಾದಿಯಲ್ಲೇ ಮುಂಬರುವ ಸರ್ಕಾರ ಮಾಡುತ್ತೆ ಎಂದು ವಾಗ್ದಾಳಿ ನಡೆಸಿದರು.