ಚಿಕ್ಕಬಳ್ಳಾಪುರ: ಜಿಲ್ಲೆಯ ತಾಲೂಕಿನ ಗ್ರಾಮದ ಶಿಡ್ಲಘಟ್ಟ ಬಸವಪಟ್ಟಣ ನಿವಾಸಿ ನವ್ಯಶ್ರೀ ಎಂಬ 20 ವರ್ಷದ ಯುವತಿ (Girl) ಎಂ.ಎಸ್. ರಾಮಯ್ಯ (MS Ramaiah) ಕಾಲೇಜಿನಲ್ಲಿ ಬಿ.ಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು ಜೂನ್ 9 ರಂದು ಮನೆ ಯಿಂದ ಕಾಲೇಜಿಗೆ ಹೋದ ವಳು ಹಿಂತಿರುಗಿಲ್ಲ.
ಈ ಕುರಿತು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ತಾಯಿ ಅನುಸೂಯಮ್ಮ ದೂರು ನೀಡಿದ್ದಾರೆ.
ನವ್ಯಶ್ರೀ 5.2 ಅಡಿ ಎತ್ತರ, ಗೋದಿ ಮೈ ಬಣ್ಣ ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತೆಲುಗು ಮಾತನಾಡುತ್ತಾರೆ.
ಈಕೆಯ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್‌ಪ್ರಕಟಣೆಯಲ್ಲಿ ತಿಳಿಸಿದ್ದಾರೆ.