Indian money in Swiss banks jumps more than three times

ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ ಮೂರು ಪಟ್ಟು ಹೆಚ್ಚಳ.. 2021 ರ ನಂತರದ ಅತ್ಯಧಿಕ ಹಣ

ನವದೆಹಲಿ: ಸ್ವಿಸ್‌ ಬ್ಯಾಂಕ್‌ಗಳಲ್ಲಿ (Swiss banks) ಠೇವಣಿ ಇಡಲಾದ ಭಾರತೀಯ ಹಣ 2024 ರಲ್ಲಿ ಮೂರು ಪಟ್ಟು ಹೆಚ್ಚಳವಾಗಿರುವುದಾಗಿ ವರದಿಯಾಗಿದೆ.

ವರದಿ ಅನ್ವಯ ಸುಮಾರು CHF 346 ಮಿಲಿಯನ್ (ಸುಮಾರು ರೂ. 3,675 ಕೋಟಿ) ತಲುಪಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) ಜೂನ್ 19 ರಂದು ಬಹಿರಂಗಪಡಿಸಿದೆ.

ಹೆಚ್ಚಿನ ಹೆಚ್ಚಳವು ವೈಯಕ್ತಿಕ ಗ್ರಾಹಕರ ಖಾತೆಗಳಿಂದಲ್ಲ ಬದಲಿಗೆ ಬ್ಯಾಂಕ್ ಚಾನೆಲ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲಕ ನಡೆದ ನಿಧಿಯಿಂದ ಬಂದಿದೆ ಎಂದು ವರದಿ ತಿಳಿಸಿದೆ.

ಭಾರತೀಯ ಗ್ರಾಹಕರಿಂದ ನೇರವಾಗಿ ಠೇವಣಿಗಳು ಸಾಧಾರಣವಾಗಿ ಏರಿದ್ದು 11% ರಷ್ಟು ಹೆಚ್ಚಾಗಿ 346 ಮಿಲಿಯನ್ ಸ್ವಿಸ್ ಫ್ರಾಂಕ್‌ಗಳಿಗೆ (ಸುಮಾರು 3,675 ಕೋಟಿ ರೂ) ಏರಿಕೆಯಾಗಿದೆ.

ಈ ಠೇವಣಿಗಳು ಒಟ್ಟು ಭಾರತೀಯ ಸಂಬಂಧಿತ ನಿಧಿಗಳಲ್ಲಿ ಕೇವಲ ಹತ್ತನೇ ಒಂದು ಭಾಗವಾಗಿದೆ.

ಎಸ್‌ಎನ್‌ಬಿ ಪ್ರಕಾರ, ಈ ಅಂಕಿಅಂಶಗಳು ಬ್ಯಾಂಕ್‌ಗಳು ಅಧಿಕೃತವಾಗಿ ವರದಿ ಮಾಡಿರುವಂತದ್ದು ಮತ್ತು ಇದು ಕಪ್ಪು ಹಣವನ್ನು ಪ್ರತಿಬಿಂಬಿಸುವುದಿಲ್ಲ. ಮೂರನೇ ದೇಶಗಳ ಸಂಸ್ಥೆಗಳ ಮೂಲಕ ಭಾರತೀಯರು ಇಟ್ಟಿರುವ ಹಣ ಇದರಲ್ಲಿ ಸೇರಿಲ್ಲ.

ಸ್ವಿಸ್ ಅಧಿಕಾರಿಗಳು ಭಾರತೀಯರು ಸ್ವಿಟ್ಟರ್‌ಲ್ಯಾಂಡ್‌ನಲ್ಲಿ ಇಟ್ಟಿರುವ ಹಣವನ್ನು ಕಪ್ಪು ಹಣ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

2023ರಲ್ಲಿ 70% ಕುಸಿತದ ನಂತರ ಈ ಏರಿಕೆ ಕಂಡುಬಂದಿದೆ. 2023ರಲ್ಲಿ ಭಾರತೀಯರ ಹಣ 70% ಕುಸಿದು 1.04 ಬಿಲಿಯನ್ ಸ್ವಿಸ್ ಫ್ರಾಂಕ್ ಆಗಿತ್ತು. ಹೀಗಾಗಿ 2024ರ ಏರಿಕೆ ಗಮನಾರ್ಹ ಎನಿಸಿಕೊಂಡಿದೆ.

ರಾಜಕೀಯ

2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದಾರೆ: ಆರ್‌.ಅಶೋಕ

2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದಾರೆ: ಆರ್‌.ಅಶೋಕ

2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದು, ಅಪರಾಧಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ; ಆರ್. ಅಶೋಕ (R.AShoka)

[ccc_my_favorite_select_button post_id="118528"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಗಾಳಿಪಟ ಹಾರಿಸುವ ಮಾಂಜಾ ದಾರ (Maanja thread) ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ನಡೆದಿದೆ.

[ccc_my_favorite_select_button post_id="118471"]
ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ಇಂದು ಸಂಭವಿಸಿದ ಎರಡು ಪ್ರತ್ಯೇಕ ಕಾರುಗಳ ಅಪಘಾತದಲ್ಲಿ (Accident) ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

[ccc_my_favorite_select_button post_id="118357"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!