ಲಖನೌ: ಆಡಳಿತ ಅವ್ಯವಸ್ಥೆ, ಇಂಜಿನಿಯರ್‌ಗಳ ಬೇಜವಬ್ದಾರಿ ಎಷ್ಟಿರುತ್ತದೆ ಎಂಬುದಕ್ಕೆ ಉತ್ತರ ಪ್ರದೇಶದಲ್ಲಿ ವಿಚಿತ್ರ ಕಾಮಗಾರಿ (Work) ಸಾಕ್ಷಿಯಾಗಿದೆ.
ಲಖನೌನ ಕೃಷ್ಣನಗರ-ಕೇಸರಿಖೇಡ ಕ್ರಾಸಿಂಗ್‌ನಲ್ಲಿ 74 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ಕ್ರಾಸಿಂಗ್ ಓವರ್ ಬ್ರಿಡ್ಜ್‌ನ ಕಾಮಗಾರಿಗೆ ಎರಡು ಅಂತಸ್ತಿನ ಕಟ್ಟಡ ಅಡ್ಡವಾಗಿ ನಿಂತಿದೆ.
ಇದರಿಂದಾಗಿ ಸೇತುವೆಯ ನಿರ್ಮಾಣವು ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದು, ಎಂಜಿನಿಯರ್‌ಗಳು ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೊಳಗಾಗಿದ್ದಾರೆ.
ಇಂಜಿನಿಯರ್‌ಗಳ ಬೇಜವಬ್ದಾರಿಯಿಂದಾಗಿ ಸೇತುವೆ ಕಟ್ಟಡದ ಒಳಭಾಗದ ಕಡೆಗೆ ತಿರುಗಿದೆ ಎಂಬ ಆರೋಪ ಸ್ಥಳೀಯರದ್ದಾಗಿದ್ದರೆ, ಕಾಮಗಾರಿ ವಿಳಂಬ ಆದ ಕಾರಣ ಸೇತುವೆಗೆ ಅಡ್ಡಲಾಗಿದೆ ಕಟ್ಟಡ ನಿರ್ಮಿಸಲಾಗಿದೆ ಎಂಬ ಆರೋಪ ಅಧಿಕಾರಿಗಳದ್ದಾಗಿದೆ.
ಈಗ ಮೇಲ್ಸೇತುವೆಯ ದಿಕ್ಕು ಬದಲಾಗುತ್ತದೆಯೋ ಅಥವಾ ಕಟ್ಟಡ ಕೆಡವಲಾಗುತ್ತದೆಯೋ ಕಾದು ನೋಡಬೇಕಿದೆ.
