ಹೈದರಾಬಾದ್: ಅಂಬರ್‌ಪೇಟೆಯಲ್ಲಿ HD ಕ್ಯಾಮೆರಾಗಳೊಂದಿಗೆ ದಂಪತಿಗಳು ಲೈವ್ ಬೆತ್ತಲೆ ವಿಡಿಯೋ (Live nude video) ವ್ಯವಹಾರ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.
ರೂ. 2000 ಗೆ ಲೈವ್ ಲಿಂಕ್.. ರೂ. 500 ಗೆ ರೆಕಾರ್ಡ್ ಮಾಡಿದ ವೀಡಿಯೊಗಳ ವ್ಯವಹಾರ ಆಂಧ್ರಪ್ರದೇಶದ ಬಾಗ್ ಅಂಬರ್‌ಪೇಟೆಯಿಂದ ವರದಿಯಾಗಿದೆ.
ಬಾಗ್ ಅಂಬರ್‌ಪೇಟೆ ಸಮೀಪದ ಮಲ್ಲಿಕಾರ್ಜುನನಗರದಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿಯೊಂದಿಗೆ ಲೈವ್ ನ್ಯೂಡ್ ವಿಡಿಯೋ ವ್ಯವಹಾರ ನಡೆಸಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ.
ಈ ವ್ಯವಹಾರವು ಕ್ಯಾಬ್ ಚಾಲನೆ ಮಾಡುವುದಕ್ಕಿಂತ ಹೆಚ್ಚಿನ ಹಣವನ್ನು ಗಳಿಸುವುದರಿಂದ, ಅವನು ಮನೆಯಲ್ಲಿ HD ಕ್ಯಾಮೆರಾಗಳೊಂದಿಗೆ ಪೂರ್ಣ ಸೆಟಪ್ ಹೊಂದಿದ್ದನಂತೆ.
ದಂಪತಿ ಪ್ರತಿದಿನ ಹೊಸ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದು, ಮತ್ತು ಆನ್‌ಲೈನ್‌ನಲ್ಲಿ ಕಾಮಪ್ರಚೋದಕವಾಗಿ ಚಾಟ್ ಮಾಡುವ ಮೂಲಕ ಯುವಕರನ್ನು ಪ್ರಚೋದನೆ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.
ದಿನದಿಂದ ದಿನಕ್ಕೆ ಇವರ ಲೈವ್ ವಿಡಿಯೋಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿರುವಂತೆ, ಲೈವ್ ಬೆತ್ತಲೆ ವಿಡಿಯೋ ವ್ಯವಹಾರ ಪೊಲೀಸರಿಗೂ ಮಾಹಿತಿ ತಲುಪಿದೆ.
ಕೂಡಲೇ ಪೂರ್ವ ವಲಯ ಟಾಸ್ಕ್ ಫೋರ್ಸ್ ಪೊಲೀಸರು ಮನೆ ಮೇಲೆ ದಾಳಿ ಮಾಡಿ, HD ಕ್ಯಾಮೆರಾಗಳು ಮತ್ತು ಉಪಕರಣಗಳನ್ನು ವಶಪಡಿಸಿಕೊಂಡು ದಂಪತಿಗಳನ್ನು ಬಂಧಿಸಿದ್ದಾರೆ.