ದೊಡ್ಡಬಳ್ಳಾಪುರ: ಮಿಲ್ಟ್ರೀ ಹೋಟೆಲ್ಗೆ ರುಚಿಕರವಾದ ಮಾಂಸಾಹಾರ ಸೇವಿಸಲು ಜನ ಬರುವುದು ಸಾಮಾನ್ಯ. ಆದರೆ ನಾಗರಹಾವೊಂದು ಮಿಲ್ಟ್ರೀ ಹೋಟೆಲ್‌ಗೆ ಬಂದು ಆತಂಕ ಸೃಷ್ಟಿದ ಘಟನೆ ತಾಲೂಕಿನ ಆರೂಢಿಯಲ್ಲಿ ನಡೆದಿದೆ.
ಹೌದು ಆರೂಢಿ ಹೊರವಲಯದಲ್ಲಿರುವ ಮಂಜುನಾಥ್ ಎನ್ನುವವರ ಮಿಲ್ಟ್ರೀ ಹೋಟೆಲ್ ಒಳಕ್ಕೆ ನಾಗರ ಹಾವು ಸೇರಿ ಆತಂಕದ ವಾತಾವರಣ ಸೃಷ್ಟಿಸಿತ್ತು.
ಸುಮಾರು 2 ಗಂಟೆಗೂ ಹೆಚ್ಚು ಕಾಲ ಹಾವು ಹೆಡೆ ಬಿಚ್ಚಿಕೂತಿದ್ದು, ಯಾವುದೇ ಶಬ್ದಕ್ಕೂ ಹೆದರದೆ ಗಾಂಭೀರ್ಯದಿಂದ ಕುಳಿತಿತ್ತು.
ಇನ್ನೂ ಈ ವಿಷಯ ತಿಳಿದ ಉರಗ ರಕ್ಷಕ ಶಿವಕುಮಾರ್ (ಕುಮಾರ್) ಎನ್ನುವವರು ಹಾವನ್ನು ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಡುವ ಮೂಲಕ, ಉಂಟಾಗಿದ್ದ ಆತಂಕವನ್ನು ಶಮನಗೊಳಿಸಿದರು.