ದೊಡ್ಡಬಳ್ಳಾಪುರ: ತಾಲೂಕಿನ ಹೆಗ್ಗಡಿಹಳ್ಳಿಯಲ್ಲಿ ಇಂದಿನಿಂದ (ಜೂ.30) ಜುಲೈ 01 ರ ವರೆಗೆ ಜಾತ್ರಾ ಮಹೋತ್ಸವ (Jatra Mahotsava) ನಡೆಯಲಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಯುವ ಮುಖಂಡ ಮನೋಜ್, ಶ್ರೀದೇವಿ ಭೂದೇವಿ ಸಮೇತ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ, ಶ್ರೀ ಕರಗದಮ್ಮ, ಶ್ರೀ ಸಪ್ಪಲಮ್ಮ, ಶ್ರೀ ಗಂಗಮ್ಮ ದೇವರುಗಳ ಜಾತ್ರಾ ಮಹೋತ್ಸವ ಜೂನ್ 30 ಸೋಮವಾರ ಹಾಗೂ ಜುಲೈ 1 ಮಂಗಳವಾರ ಅದ್ಧೂರಿಯಾಗಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ, ದೀಪದ ಅರತಿಗಳು ಮತ್ತು ಜುಲೈ.2 ರಂದು ಬುಧವಾರ ಭೋಜನ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ.