ನವದೆಹಲಿ: ಆಪರೇಷನ್ ಸಿಂಧೂರ (Operation Sindhur) ಬೆನ್ನಲ್ಲೇ ಏಕಾಏಕಿ ಕದನವಿರಾಮದ ಕುರಿತು ಈಗಾಗಲೇ ಇಕ್ಕಟ್ಟಿಗೆ ಸಿಲುಕಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ಭಾರತೀಯ ವಾಯು ಸೇನಾ ಅಧಿಕಾರಿ ಹೇಳಿಕೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ.
ಹೌದು ಆಪರೇಷನ್ ಸಿಂಧೂರ ಕುರಿತು 24 ಗಂಟೆ ಮುಂಚಿತವಾಗಿಯೇ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು ಎಂದು ವಿದೇಶಾಂಗ ಸಚಿವ ಜಯಶಂಕರ್ (JaiShankar) ಹೇಳಿಕೆ, ಪಾಕ್- ಭಾರತ ನಡುವೆ ಕದನ ವಿರಾಮಕ್ಕೆ ನಾನೇ ಕಾರಣ, ವ್ಯಾಪಾರ ಮಾಡುವೆ ಎಂದು ಎರಡು ರಾಷ್ಟ್ರ ಗಳ ನಡುವ ಕದನ ವಿರಾಮ ಘೋಷಣೆ ಮಾಡಿಸಿದೆ ಎಂದು 17 ಬಾರಿ ಅಮೇರಿಕಾ ಅಧ್ಯಕ್ಷ ಟ್ರಂಪ್ (Trump) ಹೇಳಿಕೆಯಿಂದ ಮೋದಿ ಸರ್ಕಾರ (Modi government) ಮುಜುಗರಕ್ಕೆ ಒಳಗಾಗಿದೆ.
ಇದರ ಬೆನ್ನಲ್ಲೇ ಭಾರತೀಯ ಜೆಟ್ ಯುದ್ಧ ವಿಮಾನಗಳನ್ನು ಪಾಕಿಸ್ತಾನ ಧ್ವಂಸಗೊಳಿಸಿದೆ ಎಂಬ ವಿಚಾರದ ಕುರಿತು ವಿಪಕ್ಷಗಳಿಗೆ ವಾಯು ಸೇನಾ ಅಧಿಕಾರಿ ಹೇಳಿಕೆ ಅಸ್ತ್ರ ನೀಡಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಳಿಕ ಭಾರತೀಯ ಸೇನೆಯ ಯುದ್ಧದ ಬಗ್ಗೆ, ಕದನ ವಿರಾಮದ ಬಗ್ಗೆ ಮೋದಿ ಸರ್ಕಾರದ ಹಲವು ಗೊಂದಲದ ಹೇಳಿಕೆಯನ್ನು ಕಾಂಗ್ರೆಸ್ ಪ್ರಶ್ನಿಸಿತ್ತು. ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ದೊಡ್ಡ ಸಂಘರ್ಷ ಏರ್ಪಟ್ಟಿತ್ತು.
ಇದರ ಬೆನ್ನಲ್ಲೇ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯು ಜೆಟ್ ಯುದ್ಧ ವಿಮಾನಗಳನ್ನು ಪಾಕಿಸ್ತಾನ ಧ್ವಂಸಗೊಳಿಸಿದೆ. ರಾಜಕೀಯ ನಾಯಕತ್ವ ನಿರ್ಬಂಧ ಹೇರಿದ್ದರಿಂದಲೇ ನಾವು ವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಇಂಡೋನೇಷ್ಯಾದಲ್ಲಿರುವ ಭಾರತೀಯ ವಾಯುಸೇನೆಯ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್ (Jairam Ramesh) ಸಮಾಜಿಕ ಜಾಲತಾಣದಲ್ಲಿ ಮೋದಿ ಸರ್ಕಾರವನ್ನು ಜಾಡಿಸಿದ್ದಾರೆ.
ಅರೇಷನ್ ಸಿಂಧೂರ ವೇಳೆ ಭಾರತ ಸೇನೆಗಾದ ನಷ್ಟದ ಕುರಿತು ಮೊದಲು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಸಿಂಗಾಪುರದಲ್ಲಿ ಪ್ರಮುಖ ವಿಷಯ ಬಹಿರಂಗ ಮಾಡುತ್ತಾರೆ. ನಂತರ ಇಂಡೋನೇಷ್ಯಾದಿಂದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಅವರನ್ನು ಅನುಸರಿಸುತ್ತಾರೆ.
First the Chief of Defence Staff makes important revelations in Singapore. Then a senior defence official follows up from Indonesia.
— Jairam Ramesh (@Jairam_Ramesh) June 29, 2025
But why is the PM refusing to preside over an all-party meeting and take the Opposition into confidence? Why has the demand for a special session…
ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಲು ಪ್ರಧಾನಿ ನರೇಂದ್ರ ಮೋದಿ ಯಾಕೆ ನಿರಾಕರಿಸುತ್ತಿದ್ದಾರೆ ಮತ್ತು ಸಂಸತ್ತಿನ ವಿಶೇಷ ಅಧಿವೇಶನದ ಬೇಡಿಕೆಯನ್ನು ಏಕೆ ತಿರಸ್ಕರಿಸಲಾಗಿದೆ ಎಂದು ಪೋಸ್ಟ್ ನಲ್ಲಿ ಅವರು ಕೇಳಿದ್ದಾರೆ.
ಇತ್ತೀಚೆಗಷ್ಟೇ ಇಂಡೋನೇಷ್ಯಾದಲ್ಲಿ ನಡೆದ ಸೆಮಿನಾರ್‌ವೊಂದರಲ್ಲಿ ಮಾತನಾಡಿದ ಭಾರತೀಯ ವಾಯುಸೇನೆಯ ಕ್ಯಾಪ್ಟನ್ ಶಿವಕುಮಾರ್, ಪಾಕಿಸ್ತಾನದ ಉಗ್ರರ ತಾಣಗಳನ್ನು ಗುರಿಯಾಗಿಸಿ ಮೇ 7, 2025ರ ರಾತ್ರಿ ನಡೆದ ಯುದ್ಧ ವಿಮಾನಗಳ ದಾಳಿ ವೇಳೆ ಪಾಕಿಸ್ತಾನ, ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿರುವುದು ವರದಿಯಾಗಿದೆ.
ಇದಾದ ಬೆನ್ನಲ್ಲೇ ಕೈ ನಾಯಕರು ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.