Sleeping position

ಹರಿತಲೇಖನಿ ದಿನಕ್ಕೊಂದು ಕಥೆ: ಮಲಗುವ ವಿಧಾನ

Harithalekhani: ದಿನವಿಡೀ ಕಾರ್ಯನಿರತವಾಗಿರುವ ಶರೀರಕ್ಕೆ ವಿಶ್ರಾಂತಿ ಸಿಗಲೆಂದು ನಾವು ಮಲಗುತ್ತೇವೆ. ಆದುದರಿಂದ ‘ಯಾವ ರೀತಿಯಲ್ಲಿ ಅಥವಾ ಭಂಗಿಯಲ್ಲಿ ಮಲಗುವುದರಿಂದ ಶರೀರಕ್ಕೆ ಹೆಚ್ಚಿನ ವಿಶ್ರಾಂತಿ ಸಿಗುತ್ತದೆಯೋ, ಆ ಭಂಗಿಯು ಒಳ್ಳೆಯದು’ ಎಂಬುವುದು ಒಂದು ಸಾಮಾನ್ಯ ನಿಯಮ.

ಪ್ರತಿಯೊಬ್ಬರ ಪ್ರಕೃತಿ ಮತ್ತು ಆ ಸಮಯದ ಸ್ಥಿತಿಗನುಗುಣವಾಗಿ ವಿಶ್ರಾಂತಿ ಸಿಗುವ ಭಂಗಿಯು ಬೇರೆ ಬೇರೆ ಆಗಿರಬಹುದು. ನಾವು ಯಾವ ಭಂಗಿಯಲ್ಲಿ ಮಲಗಬೇಕು ಎಂಬುವುದು ನಮಗೆ ನಿದ್ದೆ ಬರುವ ತನಕ ಮಾತ್ರ ನಾವು ನಿರ್ಧರಿಸಬಹುದು, ಏಕೆಂದರೆ ನಿದ್ದೆ ಬಂದ ನಂತರ ನಮ್ಮ ಶರೀರದ ಸ್ಥಿತಿಯು ನಮ್ಮ ನಿಯಂತ್ರಣದಲ್ಲಿರುವುದಿಲ್ಲ.

ಅ. ಮಗುಚಿ (ಕೆಳಮುಖವಾಗಿ) ಮಲಗುವುದು

ನವಜಾತ ಶಿಶುಗಳನ್ನು ಮತ್ತು ಚಿಕ್ಕ ಮಕ್ಕಳನ್ನು ಈ ರೀತಿ ಮಲಗಿಸಿದರೆ ಅವರಿಗೆ ಶ್ವಾಸ ತೆಗೆದುಕೊಳ್ಳಲು ಅಡಚಣೆಯಾಗಬಹುದು. ಆದುದರಿಂದ ಮಕ್ಕಳನ್ನು ಈ ರೀತಿ ಮಲಗಿಸಬಾರದು. ಹಾಗೆಯೇ ಮಗುಚಿ ಮಲಗುವುದರಿಂದ ಇತರ ವಿಧಾನಗಳ ತುಲನೆಯಲ್ಲಿ ಬೆನ್ನೆಲುಬಿನ ಮೇಲೆ ಹೆಚ್ಚಿನ ಒತ್ತಡ ಬರುತ್ತದೆ.

ಆ. ಅಂಗಾತ (ಬೆನ್ನಿನ ಮೇಲೆ) ಮಲಗುವುದು

ನಾವು ನಿಂತುಕೊಂಡಾಗ ನಮ್ಮ ಬೆನ್ನೆಲುಬಿನ ಮೇಲೆ ಶೇ.100 ರಷ್ಟು ಒತ್ತಡವಿರುತ್ತದೆ ಎಂದುಕೊಳ್ಳೋಣ, ನಾವು ಅಂಗಾತ ಮಲಗಿದಾಗ ಈ ಒತ್ತಡವು ಶೇ. 75 ರಷ್ಟು ಕಡಿಮೆಯಾಗಿ ಕೇವಲ ಶೇ.35 ರಷ್ಟೇ ಉಳಿಯುತ್ತದೆ.

ಈ ರೀತಿ ಮಲಗಿದಾಗ ಬೆನ್ನಿನ ಎಲುಬುಗಳ ಮೇಲಿನ ಒತ್ತಡವು ಇತರ ಭಂಗಿಗಳ ತುಲನೆಯಲ್ಲಿ ಅತ್ಯಂತ ಕಡಿಮೆಯಾಗಿರುತ್ತದೆ. ಆದುದರಿಂದ ಬೆನ್ನೆಲುಬಿನ ತೊಂದರೆಗಳಿರುವವರು ಈ ರೀತಿ ಮಲಗಿದರೆ ಅವರಿಗೆ ಸುಖಕರ ನಿದ್ದೆ ಸಿಗುತ್ತದೆ. ಅಂಗಾತ ಮಲಗುವಾಗ ಮಂಡಿಗಳ ಕೆಳಗೆ ಒಂದು ಚಿಕ್ಕ ದಿಂಬನ್ನು ಇಟ್ಟುಕೊಂಡರೆ ಬೆನ್ನೆಲುಬಿನ ಒತ್ತಡ ಇನ್ನಷ್ಟು ಕಡಿಮೆಯಾಗುತ್ತದೆ.

ಅಂಗಾತ (ಬೆನ್ನಿನ ಮೇಲೆ) ಮಲಗುವುದು ಮತ್ತು ಗೊರಕೆ ಹೊಡೆಯುವುದರ ಸಂಬಂಧವೇನು?

ಯಾರಿಗಾದರೂ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ, ಅವರು ಅಂಗಾತ ಮಲಗಿದರೆ ಅದು ಹೆಚ್ಚಾಗುತ್ತದೆ. ನಿದ್ದೆಯಲ್ಲಿದ್ದಾಗ ಅನೇಕ ಕಾರಣಗಳಿಂದ ಉಸಿರಾಟಕ್ಕೆ ತೊಂದರೆಯಾದಾಗ ಜನರು ಗೊರಕೆ ಹೊಡೆಯುತ್ತಾರೆ.

ಅಂಗಾತ ಮಲಗಿದಾಗ ಶ್ವಾಸನಳಿಕೆಯಲ್ಲಿ ಅಡಚಣೆಗಳು ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದಾದರೊಂದು ಮಗ್ಗುಲಿನಲ್ಲಿ ಮಲಗುವುದರಿಂದ ಶ್ವಾಸನಳಿಕೆಯಲ್ಲಿ ಅಡಚಣೆಯು (ಉದಾಹರಣೆಗೆ ಶಿಥಿಲವಾದ ಸ್ನಾಯುಗಳಿಂದಾಗಿ ಶ್ವಾಸ ನಳಿಕೆಯಲ್ಲಿ ಅಡ್ಡಿ ಬಂದು ಶ್ವಾಸೋಚ್ಛ್ವಾಸಕ್ಕೆ ಆಗುವ ತೊಂದರೆ) ದೂರವಾಗಿ ಗೊರಕೆ ಹೊಡೆಯುವುದನ್ನು ತಡೆಯಬಹುದು. ಈ ರೀತಿ ಮಗ್ಗುಲಿನಲ್ಲಿ ಮಲಗುವ ಅನೇಕರಿಗೆ ಶಾಂತ ನಿದ್ರೆಯ ಅನುಭವವು ಸಿಕ್ಕಿದೆ.

ಇ. ಒಂದು ಮಗ್ಗುಲಿನಲ್ಲಿ ಮಲಗುವುದು

ಮಗ್ಗುಲಿನಲ್ಲಿ ಮಲಗುವುದರಿಂದ ಬೆನ್ನೆಲುಬಿನ ಮೇಲೆ ನಿಂತಿಕೊಂಡಿರುವ ಸ್ಥಿತಿಯ ಶೇ.75 ರಷ್ಟು ಒತ್ತಡವಿರುತ್ತದೆ. ಬಲ ಮಗ್ಗುಲಿನಲ್ಲಿ ಮಲಗುವುದರಿಂದ ಚಂದ್ರನಾಡಿಯು, ಎಡ ಮಗ್ಗುಲಿನಲ್ಲಿ ಮಲಗುವುದರಿಂದ ಸೂರ್ಯನಾಡಿಯು ಸಕ್ರಿಯವಾಗಲು ಸಹಾಯವಾಗುತ್ತದೆ.

ಮಲಗುವಾಗ ಪೂರ್ವ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ತಲೆ ಮಾಡಿ, ಒಂದು ಮಗ್ಗುಲಿನಲ್ಲಿ ಮಲಗಬೇಕು.

ಧರ್ಮಶಾಸ್ತ್ರಗಳಲ್ಲಿ ‘ಮಗ್ಗುಲಿನಲ್ಲಿ ಮಲಗಬೇಕು’ ಎಂದು ಹೇಳಿರುವುದರಿಂದ, ಬೇರೆ ಭಂಗಿಯಲ್ಲಿ ಮಲಗಲು ಯಾವುದೇ ವೈದ್ಯಕೀಯ ಕಾರಣವಿಲ್ಲದಿದ್ದರೆ, ಅಂತಹವರು ಮಗ್ಗುಲಿನಲ್ಲೇ ಮಲಗಲು ಪ್ರಯತ್ನಿಸಬೇಕು.

ನಾವು ಯಾವುದಾದರೊಂದು ಮಗ್ಗುಲಿನಲ್ಲಿ ಮಲಗುವುದರಿಂದ ಕೆಳಗಿನ ದಿಕ್ಕಿನಲ್ಲಿ ಇರುವ ಮೂಗಿನ ಹೊಳ್ಳೆಯು ನಿಧಾನವಾಗಿ ಮುಚ್ಚಿಕೊಳ್ಳುತ್ತದೆ. ಅದು ಸಾಧ್ಯವಾದಷ್ಟು ಮುಚ್ಚಿಕೊಂಡ ಮೇಲೆ ನಾವು ನಿದ್ದೆಯಲ್ಲಿಯೇ ಮಗ್ಗುಲನ್ನು ಬದಲಿಸುತ್ತೇವೆ. ಆಗ ಮೂಗಿನ ಆ ಹೊಳ್ಳೆಯು ನಿಧಾನವಾಗಿ ತೆರೆದು ಇನ್ನೊಂದು ಹೊಳ್ಳೆಯು ಮುಚ್ಚಿಕೊಳ್ಳುತ್ತದೆ.

ಈ ರೀತಿ ಅದಲು-ಬದಲಾಗಿ ಮೂಗಿನ ಹೊಳ್ಳೆಗಳು ಮುಚ್ಚಿಕೊಳ್ಳುವುದರಿಂದ ನಾವು ನಿದ್ದೆಯಲ್ಲಿಯೇ ಸ್ವಲ್ಪ-ಸ್ವಲ್ಪ ಸಮಯದ ನಂತರ ಮಗ್ಗುಲು ಬದಲಿಸುತ್ತೇವೆ.

ನಾವು ದಿನದ ಕಾಲು ಭಾಗದಷ್ಟು ಸಮಯ ನಿದ್ದೆಗೆಂದು ನೀಡುತ್ತೇವೆ. ಪ್ರತಿ ದಿವಸ ಇಷ್ಟು ಕಾಲಾವಧಿಯನ್ನು ಒಂದೇ ಸ್ಥಿತಿಯಲ್ಲಿ ಕಳೆದರೆ ಚರ್ಮದ ಮೇಲೆ ಸತತವಾಗಿ ಒತ್ತಡ ಬೀಳುವುದರಿಂದ ಹಾಸಿಗೆ ಹುಣ್ಣುಗಳು (ಬೆಡ್-ಸೋರ್) ಆಗುವ ಸಾಧ್ಯತೆ ಇದೆ. ನಿದ್ದೆಯಲ್ಲಿ ನಮ್ಮ ಸ್ಥಿತಿಯನ್ನು ಮಧ್ಯ-ಮಧ್ಯದಲ್ಲಿ ಬಸಲಾಯಿಸಿದರೆ ಯಾವುದೇ ಒಂದು ಅವಯವದ ಮೇಲೆ ಹೆಚ್ಚಿನ ಒತ್ತಡ ಬರುವುದಿಲ್ಲ.

ಕೃಪೆ: ವೈದ್ಯ ಮೇಘರಾಜ್ ಪರಾಡ್ಕರ್, ಸನಾತನ ಆಶ್ರಮ.

AI ಚಿತ್ರ ಬಳಸಲಾಗಿದೆ.

ರಾಜಕೀಯ

ದಿನ ಭವಿಷ್ಯ: ಈ ರಾಶಿಯವರಿಗೆ ಕಾರ್ಯಹಾನಿಯ ಸಂಭವವಿದೆ ಎಚ್ಚರ

ದಿನ ಭವಿಷ್ಯ: ಈ ರಾಶಿಯವರಿಗೆ ಕಾರ್ಯಹಾನಿಯ ಸಂಭವವಿದೆ ಎಚ್ಚರ

ರಾಹುಕಾಲ: 01:30PM ರಿಂದ 3:00PM, ಗುಳಿಕಕಾಲ: 09:00AM ರಿಂದ 10:30AM, ಯಮಗಂಡಕಾಲ: 06:00AM ರಿಂದ 07:30AM, Astrology

[ccc_my_favorite_select_button post_id="115027"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಮನೆಯ ಬಾಗಿಲು ಮೀಟಿ ಕಳ್ಳತನ.. ಲಕ್ಷಾಂತರ ರೂ. ಒಡವೆ, ನಗದು ದೋಚಿ ಪರಾರಿ!

ದೊಡ್ಡಬಳ್ಳಾಪುರ: ಮನೆಯ ಬಾಗಿಲು ಮೀಟಿ ಕಳ್ಳತನ.. ಲಕ್ಷಾಂತರ ರೂ. ಒಡವೆ, ನಗದು ದೋಚಿ

ಮೊಮ್ಮಗನ ಜನ್ಮದಿನಕ್ಕೆ ತೆರಳಿದ್ದನ್ನೆ ಹೊಂಚು ಹಾಕಿರುವ ದುಷ್ಕರ್ಮಿಗಳು, ಮನೆಯ ಬಾಗಲು ಮೀಟಿ ಲಕ್ಷಾಂತರ ರೂ. ಒಡವೆ, ನಗದು ದೋಚಿ (Theft) ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ

[ccc_my_favorite_select_button post_id="115029"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!