ದೊಡ್ಡಬಳ್ಳಾಪುರ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 132 ಮಂದಿ ಶಿಕ್ಷಕರ (Teacher) ಹುದ್ದೆ ಖಾಲಿಯಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ತೀವ್ರತರವಾದ ಆತಂಕ ಎದುರಾಗಿದೆ.
ಈ ನಿಟ್ಟಿನಲ್ಲಿ ಹರಿತಲೇಖನಿ (Harithalekhani) ವರದಿಗೆ ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ (Harish Gowda) ಪ್ರತಿಕ್ರಿಯೆ ನೀಡಿದ್ದು, ಶಿಕ್ಷಣ ಇಲಾಖೆ ಹಾಗೂ ದೊಡ್ಡಬಳ್ಳಾಪುರ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಶಾಲೆಗಳನ್ನು ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಿಂಚಿತ್ ಅರಿವು ಅಧಿಕಾರಿಗಳು, ಚುನಾಯಿತರಿಗೆ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಪ್ರಮುಖವಾಗಿ ಇಂಗ್ಲಿಷ್, ಗಣಿತ, ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಸೇರಿದಂತೆ 132 ಶಿಕ್ಷಕರ ಕೊರತೆ ಉಂಟಾಗಿದೆ. ಇದರಿಂದಾಗಿ ಸರ್ಕಾರಿ ಶಾಲೆ ಮಕ್ಕಳಿಗೆ ಯಾವ ಮಟ್ಟದ ಶಿಕ್ಷಣ ದೊರಕುತ್ತದೆ ಎಂಬುದು ಪ್ರಶ್ನೆಯಾಗಿದೆ. ಕೇವಲ ಅತಿಥಿ ಶಿಕ್ಷಕರ ನೇಮಿಸಿ ಜವಬ್ದಾರಿ ಮುಗಿಯಿತು ಎಂದು ತೊಳೆದುಕೊಳ್ಳುವ ನೀತಿ ಎಷ್ಟು ಸರಿ. ಇದರಿಂದ ಎಷ್ಟರ ಮಟ್ಟಿಗೆ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ SSLC ಫಲಿತಾಂಶದಲ್ಲಿ ದೊಡ್ಡಬಳ್ಳಾಪುರ ಕೊನೆಯ ಸ್ಥಾನ ಪಡೆದಿದೆ. ಇದು ದೊಡ್ಡಬಳ್ಳಾಪುರಕ್ಕೆ ನೀಡಿದ ಚುನಾಯಿತ ಜನಪ್ರತಿನಿದಿಗಳ ಕೊಡುಗೆಯೇ ಎಂದು ಹರಿಹಾಯ್ದರು.
ಅಲ್ಲದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಕರ ನೇಮಕ ಎಂದು ಮಾಧ್ಯಮಗಳ ಹೇಳಿಕೆಗೆ ಸೀಮಿತವಾಗಿದ್ದು, ಯಾವುದೇ ನೇಮಕಾತಿ ಆಗುತ್ತಿಲ್ಲ. ಈಗಾದರೆ ಸರ್ಕಾರಿ ಶಾಲೆ ಹಾಗೂ ಮಕ್ಕಳ ಭವಿಷ್ಯ ಏನು..?
ದೊಡ್ಡಬಳ್ಳಾಪುರ ನಗರ, ಸಾಸಲು, ತೂಬಗೆರೆ ಹೋಬಳಿಯಲ್ಲಿ ಶಿಕ್ಷಕರ ಕೊರತೆ ಮಿತಿ ಮೀರಿದೆ ಕೂಡಲೇ ಹೆಚ್ಚುತ್ತು ಸರ್ಕಾರಿ ಶಾಲೆಗಳಿಗೆ ಶಿಕ್ಷರ ಕೊರತೆ ನೀಗಿಸಲು ಮುಂದಾಗಬೇಕು ಇಲ್ಲವಾದಲ್ಲಿ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಸಂಸದರಾದ ಡಾ.ಕೆ.ಸುಧಾಕರ್ ಅವರ ಗಮನಕ್ಕೆ ತಂದು ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಹರೀಶ್ ಗೌಡ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದ ಸರ್ಕಾರಿ ಶಾಲೆಗಳಲ್ಲಿ 132 ಶಿಕ್ಷಕರ ಕೊರತೆ.. ಪೋಷಕರಲ್ಲಿ ಹೆಚ್ಚಾದ ಆತಂಕ