ಗೌರಿಬಿದನೂರು; ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು (Gauribidanur) ನಗರದಲ್ಲಿ ದರೋಡೆ ಗ್ಯಾಂಗ್ ಓಡಾಟ ನಡೆಸಿರುವುದು ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.
ಮಾರಕಾಸ್ತ್ರಗಳನ್ನ ಹಿಡಿದಿರುವ ಮುಸುಕುಧಾರಿಗಳ ತಂಡ ವಿವಿಧೆಡೆ ಸಂಚಾರ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಭಯ ಹುಟ್ಟಿಸುವಂತಿದೆ.
ವಿಡಿಯೋದಲ್ಲಿ ನಾಲ್ವರು ಓಡಾಡಿರುವುದು ಸೆರೆಯಾಗಿದ್ದು, ಇಬ್ಬರು ಚೆಡ್ಡಿ ಹಾಕಿಕೊಂಡಿದ್ದರೆ, ಇಬ್ಬರು ಪ್ಯಾಂಟ್ ಧರಿಸಿದ್ದಾರೆ..
ಈ ಗ್ಯಾಂಗ್ ಗೌರಿಬಿದನೂರಿನ ಹಲವೆಡೆ ದರೋಡೆ ವಿಫಲ ಯತ್ನ ನಡೆಸಿದೆ.
ರಾತ್ರಿ ವೇಳೆ ಗೌರಿಬಿದನೂರಿನ ಹಲವೆಡೆ ನಾಲ್ಕು ಜನ ದರೋಡೆಕೋರರ ಸಂಚಾರದಿಂದ ಆತಂಕಗೊಂಡಿರುವ ಬಗ್ಗೆ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ಪತ್ತೆ ಹಚ್ಚಲು ಮುಂದಾದ ಪೊಲೀಸರು ಮುಂದಾಗಿದ್ದಾರೆ.