ಚಿಕ್ಕಬಳ್ಳಾಪುರ: ಗ್ರಾಮಪಂಚಾಯಿತಿ ಅಧ್ಯಕ್ಷೆಗೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಐ ಲವ್ ಯು (I Love You) ಎಂದು ವಾಟ್ಸಪ್ ಮೂಲಕ ಮೆಸೇಜ್ ಮಾಡಿ ಕಿರುಕುಳ ಆರೋಪ ಹಿನ್ನೆಲೆ, ಮಹಿಳೆಯೋರ್ವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಘಟನೆ ಜಿಲ್ಲೆಯ ಚೇಳೂರು ತಾಲ್ಲೂಕಿನ ರಾಶ್ಚೆರುವು ಗ್ರಾಮದಲ್ಲಿ ನಡೆದಿದೆ.
ರಾಶ್ಚೆರವು ಗ್ರಾಮಪಂಚಾಯಿತಿ ಅದ್ಯಕ್ಷೆ *** ರಾಜೀನಾಮೆ ನೀಡುವುದಾಗಿ ವೀಡಿಯೋ ಹರಿಬಿಟ್ಟಿದ್ದಾರೆ.
ರೇವತಿಗೆ ಐ ಲವ್ ಯೂ ಎಂದು ಮೆಸೇಜ್ ಮಾಡಿದ್ದ ಪಿಡಿಒ ಅಶೋಕ್ ಎನ್ನುವವರು ಸಂದೇಶ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಲ್ಲದ ಖಾಲಿ ಚೆಕ್ ಗಳಿಗೆ ಸಹಿ ಮಾಡುವಂತೆ ಹೇಳಿದ್ದು, ಕೆಲ ಪ್ರಭಾವಿಗಳ
ಅಕ್ರಮಗಳಿಗೆ ಸಹಕರಿಸದಿದ್ದಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂಬುದು ಆರೋಪ.
ಲೈಂಕಿಕ ಕಿರುಕುಳ ಹಾಗೂ ಮಾನಸಿಕ ಕಿರುಕುಳ ನೀಡಿದ್ದವರ ವಿರುದ್ದ ಕಿರುಕುಳದ ಜೊತೆಗೆ ಜಾತಿನಿಂದನೆ ಮಾಡಿದ್ದಾರೆಂದು ಆರೋಪಿಸಿ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಈ ವೇಳೆ ಆರೋಪಿಗಳ ವಿರುದ್ಧ ಎಪ್.ಐ.ಆರ್. ದಾಖಲಾದ್ರೂ ಆರೋಪಿಗಳನ್ನ ಪೊಲೀಸರು ಬಂಧಿಸದ ಕಾರಣ, ಆರೋಪಿಗಳು ಪ್ರಭಾವ ಬಳಿಸಿ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ ಅಂತ ಆರೋಪಿಸಲಾಗಿದೆ.