ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆ (Rajiv Gandhi Layout) ನೂರ್ ಮನೆ ನಂ616 ರ ಪಕ್ಕದಲ್ಲಿರುವ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ನಗರಸಭೆಗೆ (Municipal council) ದೂರು ನೀಡಲಾಗಿದೆ.
ಸ್ಥಳೀಯರಾದ ಅಶೋಕ್ ಹಾಗೂ ಮತ್ತಿತರರು ಈ ಕುರಿತಂತೆ ನಗರಸಭೆ ಪೌರಾಯುಕ್ತರಿಗೆ ದೂರು ನೀಡಿದ್ದು, ರಾಜೀವ್ ಗಾಂಧಿ ಬಡಾವಣೆಯಲ್ಲಿ ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ಗುಡಿಸಲು ನಿರ್ಮಿಸಿದ್ದಾರೆಂದು ಆರೋಪಿಸಿದ್ದಾರೆ.
ಹೈ ಟೆನ್ಷನ್ ವೈರ್ ಕೆಳಗೆ ಗುಡಿಸಲು ಹಾಕಿ ಅಕ್ರಮವಾಗಿ ಹಸು ಶೇಡ್, ಕುರಿ ಶೇಡ್ ನಿರ್ಮಿಸಿ ಸಂಪೂರ್ಣ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ರಸ್ತೆಯನ್ನು ಮುಚ್ಚಿದ್ದಾರೆ.
ಹೈ ಟೆನ್ಷನ್ ವೈರ್ ಹಾದು ಹೋಗಿರುವ ಕೆಳಗೆ ಶೆಡ್ ನಿರ್ಮಿಸಿರುವ ಹಿನ್ನೆಲೆಯಲ್ಲಿ ಮಳೆ ಬಂದ ಸಮಯದಲ್ಲಿ ವಿದ್ಯುತ್ ಅವಘಡ ಉಂಟಾದಲ್ಲಿ ಪ್ರಾಣಕ್ಕೆ ಅಪಾಯವಾಗುವ ಸಂಭವವಿದೆ.
ಈ ಕೂಡಲೇ ಅಧಿಕಾರಿಗಳು ಹೆಚ್ಚೆತ್ತು ಅಕ್ರಮ ಗುಡಿಸಲು, ಶೆಡ್ ತೆರವು ಮಾಡುವಂತೆ ದೂರಿನಲ್ಲಿ ತಿಳಿಸಿದ್ದಾರೆ.