ದೊಡ್ಡಬಳ್ಳಾಪುರ: ಇತ್ತೀಚೆಗೆ ನಡೆದ ಟೈಕಾಂಡೋ ಪಂದ್ಯಾವಳಿಯಲ್ಲಿ ಜಯಶಾಂತಲಿಂಗೇಶ್ವರ ಬಡಾವಣೆಯ 6 ವರ್ಷದ ಬಾಲಕ ಸಿದ್ಧಾಂತ ಗಾರವಾಡ “ಇಂಡಿಯಾ ಬುಕ್ ಆಫ್ ರೆಕಾರ್ಡ್” (India Book of Records) ನಲ್ಲಿ ದಾಖಲೆ ಬರೆದಿದ್ದಾನೆ.
ಟೈಕಾಂಡೋ ಪಂದ್ಯಾವಳಿಯಲ್ಲಿ ಎದುರಾಳಿಗೆ 1 ನಿಮಿಷ 10 ಸೆಂಕಡ್ನಲ್ಲಿ 127 ಕಿಕ್‌ಗಳನ್ನು ನೀಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ತನ್ನದಾಗಿಸಿಕೊಂಡಿದ್ದಾನೆ.
ಈ ದಾಖಲೆ ಬರೆದ ವಿದ್ಯಾರ್ಥಿಗೆ ಪ್ರಶಸ್ತಿ ಪತ್ರ, ಮೆಡಲ್, ಸ್ಟಿಕರ್, ಬ್ಯಾಡ್ಜ್, ಬುಕ್ ಆಫ್ ರೆಕಾರ್ಡ್ ಪ್ರತಿ ಹಾಗೂ ಆಕರ್ಷಕ ಪೆನ್ ನೀಡಿ ಸತ್ಕರಿಸಲಾಗಿದೆ.
ಜಯಶಾಂತಲಿಂಗೇಶ್ವರ ಬಡಾವಣೆಯ ನಿವಾಸಿಗಳಾದ ಶಿವಕುಮಾರ್ ಗಾರವಾಡ ಹಾಗೂ ಜಯಶ್ರೀ ಗಾರವಾಡ ದಂಪತಿಗಳ ಪುತ್ರ 6 ವರ್ಷದ ಸಿದ್ಧಾಂತ ಗಾರವಾಡ ಪ್ರತಿನಿತ್ಯ ಎರಡೂವರೆ ಗಂಟೆಯಿಂದ ಮೂರು ಗಂಟೆವರೆಗೆ ಕಠಿಣ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾನೆಂದು ತಿಳಿದು ಬಂದಿದೆ.