ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿ ತಿಪ್ಪಗಾನಹಳ್ಳಿ ಗ್ರಾಮದಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಇಲಾಖೆಯ ಯೋಜನೆ ಯಡಿಯಲ್ಲಿ ನಿರ್ಮಿಸಿರುವ ನವೀನ ಮಾದರಿಯ ಬಸ್ ನಿಲ್ದಾಣದ ತಂಗುದಾಣವನ್ನು (Rest House) ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮದ ಜನತೆ ಹಲವು ವರ್ಷಗಳಿಂದ ತಂಗುದಾಣದ ಅಗತ್ಯತೆಯನ್ನು ಮುಂದಿಟ್ಟು ಬಂದಿದ್ದರು, ಅದು ಈಗ ನೆರವೇರಿದೆ, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಜೊತೆಗೆ ಸಾರ್ವಜನಿಕರು ತಂಗುದಾಣದಲ್ಲಿ ಸ್ವಚ್ಚತೆ ಕಾಪಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆ.ಕಾಂತರಾಜು, ಎಂ.ಡಿ ನರಸಿಂಹಮೂರ್ತಿ, ಗೋಪಿ, ದೊಡ್ಡಪ್ಪಯ್ಯ,
ಶ್ರೀನಿವಾಸಗೌಡ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಮಾ, ಸದಸ್ಯೆ ಲಾವಣ್ಯ ಹಾಗೂ ಗ್ರಾಮಸ್ಥರಾದ
ನರೇಂದ್ರ, ಕೃಷ್ಣಪ್ಪ, ನಾಗೇಶ್ ಇಂಜಿನಿಯರ್ ಮುನಿಸ್ವಾಮಿ ಗೌಡ, ಪಿಡಿಒ ವಿಜಯ್ ಕುಮಾರ್ ಇದ್ದರು.