PM E-DRIVE: Union Minister H.D. Kumaraswamy announces stimulus scheme

PM E-DRIVE: ಉತ್ತೇಜನ ಯೋಜನೆ ಘೋಷಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ನವದೆಹಲಿ (PM E-DRIVE): ಸರಕು ಸಾಗಾಣೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ನರೇಂದ್ರ ಮೋದಿ ಅವರ ಸರ್ಕಾರ, ಇದೇ ಮೊದಲ ಬಾರಿಗೆ ವಿದ್ಯುತ್ ಚಾಲಿತ ಟ್ರಕ್ ಗಳಿಗೆ (ಇ-ಟ್ರಕ್‌ಗಳು) ಆರ್ಥಿಕ ಉತ್ತೇಜನ ನೀಡುವ ಯೋಜನೆಯನ್ನು ಆರಂಭಿಸಿದೆ.

ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯ ತಮ್ಮ ಸಚಿವಾಲಯದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಈ ಯೋಜನೆಯನ್ನು ಪ್ರಕಟಿಸಿದ್ದು, ಪಿಎಂ ಇ ಡ್ರೈವ್ (PM E-DRIVE) ಯೋಜನೆಯ ಅಡಿಯಲ್ಲಿ ಟ್ರಕ್ ಗಳಿಗೆ ಪ್ರೋತ್ಸಾಹ ಧನ ಕೊಡಲಾಗುವುದು ಎಂದರು.

ದೇಶದಲ್ಲಿ ಸಾಮೂಹಿಕ ಸಾರಿಗೆ ಹಾಗೂ ಸರಕು ಸಾಗಣೆ ವ್ಯವಸ್ಥೆಯಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಪರಿಪೂರ್ಣವಾಗಿ ತಗ್ಗಿಸುವ ನಿಟ್ಟಿನಲ್ಲಿ ಪ್ರಧಾನಿ ಅವರ ಮಹತ್ವಾಕಾಂಕ್ಷೀಯ ಪಿಎಂ ಇ ಡ್ರೈವ್ ಯೋಜನೆಯನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ. ಈ ಮೂಲಕ ಆರ್ಥಿಕ ಪ್ರೋತ್ಸಾಹ ನೀಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸ್ವಚ್ಛ, ದಕ್ಷ ಮತ್ತು ಸುಸ್ಥಿರ ಸರಕು ಸಾಗಣೆಗೆ ಪೂರಕವಾಗಿ ಪರಿವರ್ತನಾತ್ಮಕ ಹೆಜ್ಜೆಗಳನ್ನು ಇಡಲಾಗಿದೆ. ಕೇಂದ್ರ ಸರ್ಕಾರವು ವಿದ್ಯುತ್ ಟ್ರಕ್‌ಗಳಿಗೆ ನೇರ ಆರ್ಥಿಕ ಪ್ರೋತ್ಸಾಹ ನೀಡುತ್ತಿರುವುದು ಇದೇ ಮೊದಲು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಯೋಜನೆಯ ಮಹತ್ವವನ್ನು ವಿವರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; “ಡೀಸೆಲ್ ಟ್ರಕ್‌ಗಳು ಒಟ್ಟು ವಾಹನ ಜನಸಂಖ್ಯೆಯಲ್ಲಿ ಕೇವಲ 3% ರಷ್ಟಿದ್ದರೂ, ಸಾರಿಗೆ ಸಂಬಂಧಿತ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ 42% ರಷ್ಟು ಕೊಡುಗೆ ನೀಡುತ್ತವೆ ಮತ್ತು ವಾಯುಮಾಲಿನ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ವಿದ್ಯುತ್ ಟ್ರಕ್‌ಗಳಿಗೆ ಮೀಸಲಾದ ಮೊತ್ತ ಮೊದಲ ಆರ್ಥಿಕ ಉತ್ತೇಜನ ಕಾರ್ಯಕ್ರಮ ಇದಾಗಿದೆ.

ಈ ಮೂಲಕ ರಾಷ್ಟ್ರವನ್ನು ಸುಸ್ಥಿರ ಸರಕು ಸಾಗಣೆ, ಸ್ವಚ್ಛ ಭವಿಷ್ಯ ಮತ್ತು 2047ರ ವೇಳೆಗೆ ವಿಕಸಿತ ಭಾರತ ಸಾಕಾರದತ್ತ ಕೊಂಡೊಯ್ಯುತ್ತದೆ, 2070ರ ವೇಳೆಗೆ ಇಂಗಾಲದ ನಿವ್ವಳ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಮುಟ್ಟಲಿದ್ದೇವೆ. ಇದು ಪ್ರಧಾನಿಗಳ ಸಂಕಲ್ಪವಾಗಿದೆ ಎಂದು ಕೇಂದ್ರ ಸಚಿವರು ನುಡಿದರು.

ಈ ಯೋಜನೆಯಡಿಯಲ್ಲಿ ಕೇಂದ್ರ ಮೋಟಾರು ವಾಹನ ನಿಯಮಗಳ (CMVR) ಅಡಿಯಲ್ಲಿ ಪ್ರಸ್ತಾಪಿಸಲಾಗಿದೆ.

•N2 ಮತ್ತು N3 ವರ್ಗದ ಎಲೆಕ್ಟ್ರಿಕ್ ಟ್ರಕ್‌ಗಳಿಗೆ ಬೇಡಿಕೆ ಪ್ರೋತ್ಸಾಹವನ್ನು ವಿಸ್ತರಿಸಲಾಗುತ್ತದೆ. N2 ವರ್ಗವು 3.5 ಟನ್‌ಗಳಿಗಿಂತ ಹೆಚ್ಚು ಮತ್ತು 12 ಟನ್‌ಗಳವರೆಗೆ ಒಟ್ಟು ವಾಹನ ತೂಕ (GVW) ಹೊಂದಿರುವ ಟ್ರಕ್‌ಗಳನ್ನು ಒಳಗೊಂಡಿದೆ.

  • N3 ವರ್ಗವು 12 ಟನ್‌ಗಳಿಗಿಂತ ಹೆಚ್ಚು ಮತ್ತು 55 ಟನ್‌ಗಳವರೆಗೆ GVW ಹೊಂದಿರುವ ಟ್ರಕ್‌ಗಳನ್ನು ಒಳಗೊಂಡಿದೆ. ಆರ್ಟಿಕ್ಯುಲೇಟೆಡ್ ವಾಹನಗಳ ಸಂದರ್ಭದಲ್ಲಿ ಆರ್ಥಿಕ ಉತ್ತೇಜನ ಯೋಜನೆ N3 ವರ್ಗದ ಪುಲ್ಲರ್ ಟ್ರಾಕ್ಟರ್‌ಗೆ ಮಾತ್ರ ಅನ್ವಯಿಸುತ್ತವೆ. ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆಯು ಸಮಗ್ರ ತಯಾರಿಕಾ ಬೆಂಬಲಿತ ವಾರಂಟಿಗಳನ್ನು ಕಡ್ಡಾಯಗೊಳಿಸುತ್ತದೆ.
  • ಬ್ಯಾಟರಿಯನ್ನು ಐದು ವರ್ಷಗಳು ಅಥವಾ 5 ಲಕ್ಷ ಕಿಲೋಮೀಟರ್‌ಗಳವರೆಗೆ, ಇದರಲ್ಲಿ ಯಾವುದು ಮೊದಲೋ ಅದು ಖಾತರಿಯಡಿಯಲ್ಲಿ ಒಳಗೊಳ್ಳಬೇಕು.
  • ವಾಹನ ಮತ್ತು ಮೋಟಾರ್ ಐದು ವರ್ಷಗಳು ಅಥವಾ 2.5 ಲಕ್ಷ ಕಿಲೋಮೀಟರ್‌ಗಳ ಖಾತರಿಯನ್ನು ಹೊಂದಿರಬೇಕು, ಇದರಲ್ಲಿ ಕೂಡ ಯಾವುದು ಮೊದಲೋ ಅದನ್ನು ಪರಿಗಣಿಸಲಾಗುತ್ತದೆ.

ಎಲೆಕ್ಟ್ರಿಕ್ ಟ್ರಕ್ ದರವು ಕೈಗೆಟುಕುವ ಹಾಗೆ ಇರಬೇಕು ಎನ್ನುವ ಉದ್ದೇಶದಿಂದ ಈ ಉತ್ತೇಜನ ಯೋಜನೆಯ ಪ್ರೋತ್ಸಾಹಕ ಮೊತ್ತವು ಎಲೆಕ್ಟ್ರಿಕ್ ಟ್ರಕ್‌ನ GVW ಅನ್ನು ಅವಲಂಬಿಸಿರುತ್ತದೆ. ಗರಿಷ್ಠ ಪ್ರೋತ್ಸಾಹಕ ಮೊತ್ತವನ್ನು ಪ್ರತಿ ವಾಹನಕ್ಕೆ ₹9.6 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈ ಪ್ರೋತ್ಸಾಹಕಗಳನ್ನು ಖರೀದಿ ಬೆಲೆಯಲ್ಲಿ ಮುಂಗಡ ಕಡಿತವಾಗಿ ನೀಡಲಾಗುತ್ತದೆ ಮತ್ತು ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ PM E-DRIVE ಪೋರ್ಟಲ್ ಮೂಲಕ OEM ಗಳಿಗೆ ಮರುಪಾವತಿ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ದೇಶಾದ್ಯಂತ ಸುಮಾರು 5,600 ಇ-ಟ್ರಕ್‌ಗಳ ನಿಯೋಜನೆಯನ್ನು ಈ ಯೋಜನೆ ಬೆಂಬಲಿಸುವ ನಿರೀಕ್ಷೆಯಿದೆ. ದೆಹಲಿಯಲ್ಲಿ ನೋಂದಾಯಿಸಲಾದ 1,100 ಇ-ಟ್ರಕ್‌ಗಳಿಗೆ ಮೀಸಲಾದ ನಿಬಂಧನೆಯನ್ನು ರೂಪಿಸಲಾಗಿದೆ. ಇದರ ಅಂದಾಜು ವೆಚ್ಚ ₹100 ಕೋಟಿ. ರಾಜಧಾನಿಯ ಗಂಭೀರ ವಾಯು ಗುಣಮಟ್ಟದ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಇದು ಹೊಂದಿದೆ ಎಂದರು ಕುಮಾರಸ್ವಾಮಿ ಅವರು.

ಸಿಮೆಂಟ್ ಉದ್ಯಮ, ಬಂದರುಗಳು, ಉಕ್ಕು ಮತ್ತು ಇತರ ಸಾಗಾಣಿಕೆ ವಲಯವು ಈ ಯೋಜನೆಯ ಪ್ರಯೋಜನ ಪಡೆಯಲಿರುವ ಪ್ರಮುಖ ಕ್ಷೇತ್ರಗಳಾಗಿವೆ. ವೋಲ್ವೋ, ಐಷರ್, ಟಾಟಾ ಮೋಟಾರ್ಸ್ ಮತ್ತು ಅಶೋಕ್ ಲೇಲ್ಯಾಂಡ್‌ನಂತಹ ಹಲವಾರು ಪ್ರಮುಖ ಕಂಪನಿಗಳು ಈಗಾಗಲೇ ಭಾರತದಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿವೆ. ಆತ್ಮನಿರ್ಭರ ಭಾರತ್ ದೃಷ್ಟಿಕೋನದ ಅಡಿಯಲ್ಲಿ ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ ಎಂದು ಸಚಿವರು ಹೇಳಿದರು.

150 ಇ-ಟ್ರಕ್ ಗಳನ್ನು ನಿಯೋಜಿಸಲಿದೆ ಉಕ್ಕು ಪ್ರಾಧಿಕಾರ

ವಿದ್ಯುತ್ ಚಾಲಿತ ಟ್ರಕ್ ಗಳ ಬಳಕೆಯಲ್ಲಿ ದೊಡ್ಡ ಹೆಜ್ಜೆ ಇರಿಸಿರುವ ಉಕ್ಕು ಸಚಿವಾಲಯದ ಅಧೀನ ಸಂಸ್ಥೆಯಾಗಿರುವ ಭಾರತೀಯ ಉಕ್ಕು ಪ್ರಾಧಿಕಾರ (SAIL) ಮುಂದಿನ ಎರಡು ವರ್ಷಗಳಲ್ಲಿ 150 ಇ-ಟ್ರಕ್‌ಗಳನ್ನು ತನ್ನ ಕಾರ್ಯಾಚರಣೆಯ ವಿವಿಧ ವ್ಯೂಹಾತ್ಮಕ ಸ್ಥಳಗಳಲ್ಲಿ ನಿರ್ಧರಿಸಿದೆ. ಅಲ್ಲದೆ, ವಿವಿಧ ಉದ್ದೇಶಗಳಿಗೆ ತಾನು ಬಳಕೆ ಮಾಡುತ್ತಿರುವ ಒಟ್ಟಾರೆ ಟ್ರಕ್ ಗಳ ಪೈಕಿ ಕನಿಷ್ಠ 15% ವಿದ್ಯುತ್ ಚಾಲಿತ ಟ್ರಕ್ ಗಳನ್ನೇ ಬಳಕೆ ಮಾಡಲು ಪ್ರಾಧಿಕಾರ ನಿರ್ಧರಿಸಿದೆ.

ಇದರ ಜತೆಯಲ್ಲಿ, ಪ್ರೋತ್ಸಾಹ ಧನಕ್ಕೆ ಅರ್ಹತೆ ಪಡೆಯಲು ಹಾಗೂ ತಾನು ಬಳಕೆ ಮಾಡುತ್ತಿರುವ ಅವಧಿ ಮೀರಿದ ಹಳೆಯ ಮಾಲಿನ್ಯಕಾರಕ ಟ್ರಕ್‌ಗಳನ್ನು ವಿಲೇವಾರಿ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ಉಕ್ಕು ಸಚಿವರೂ ಆಗಿರುವ ಕುಮಾರಸ್ವಾಮಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮರನ್ ರಿಜ್ವಿ ಹಾಗೂ ಹೆಚ್ಚುವರಿ ಕಾರ್ಯದರ್ಶಿ ಹನೀಫ್ ಖುರೇಷಿ ಇತರ ಉನ್ನತ ಅಧಿಕಾರಿಗಳು ಹಾಜರಿದ್ದರು.

ರಾಜಕೀಯ

ವಕೀಲರ ಸಂಘಕ್ಕೆ ರೂ.5 ಕೋಟಿ ಅನುದಾನ, ಇಬ್ಬರು ವಕೀಲರಿಗೆ ಕೆಂಪೇಗೌಡ ಪ್ರಶಸ್ತಿ: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

ವಕೀಲರ ಸಂಘಕ್ಕೆ ರೂ.5 ಕೋಟಿ ಅನುದಾನ, ಇಬ್ಬರು ವಕೀಲರಿಗೆ ಕೆಂಪೇಗೌಡ ಪ್ರಶಸ್ತಿ: ಡಿಸಿಎಂ

ಕೆಂಪೇಗೌಡ ಪ್ರಶಸ್ತಿಯನ್ನು ಕಡ್ಡಾಯವಾಗಿ ಇಬ್ಬರು ವಕೀಲರಿಗೆ ಪ್ರತಿವರ್ಷ ನೀಡಲಾಗುವುದು: ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="110965"]
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ. ಪಾಟೀಲ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ.

ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರಕ್ಕೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡುವ ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಎಂ.ಬಿ. ಪಾಟೀಲ (M.B. Patila)

[ccc_my_favorite_select_button post_id="110949"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧನೋರ್ವ ಸಾವನಪ್ಪಿರುವ ಘಟನೆ (Accident) ಡಿಕ್ರಾಸ್ ಬಳಿ ಸಂಭವಿಸಿದೆ.

[ccc_my_favorite_select_button post_id="110927"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!