ಸವದತ್ತಿ: ಕರ್ನಾಟಕದ ಐತಿಹಾಸಿಕ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ (Savadatti Yallamma) ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಸಂಗ್ರವಾದ ಕಾಣಿಕೆ ಈ ಹಿಂದಿನ ದಾಖಲೆ ಮುರಿದಿದ್ದು, ಏಪ್ರಿಲ್ 1 ರಿಂದ ಜೂನ್ 30 ರ ವರೆಗಿನ ಹುಂಡಿಯಲ್ಲಿ ಚಿನ್ನಾಭರಣ ಸೇರಿ 3.39 ಕೋಟಿ ನಗದು ಸಂಗ್ರಹ ಆಗಿದೆ.
32.94 ಲಕ್ಷ ಮೌಲ್ಯದ 340 ಗ್ರಾಂ ಚಿನ್ನಾಭರಣ, 9.79 ಲಕ್ಷದ 8.7 ಕೆಜಿ ಬೆಳ್ಳಿ ಸಂಗ್ರಹ ಆಗಿದೆ. 2023ರಲ್ಲಿ ಇದೇ ಅವಧಿಯಲ್ಲಿ 1.65 ಕೋಟಿ, 2024ರಲ್ಲಿ ಈ ಅವಧಿಯಲ್ಲಿ 1.96 ಕೋಟಿ ಕಾಣಿಕೆ ಸಂಗ್ರಹವಾಗಿತ್ತು.
ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾದ ಬಳಿಕ ಮಾತನಾಡಿದ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ದುಡಗುಂಟಿ, ಈಗಾಗಲೇ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋಟ್ಯಾಂತರ ರೂ. ಅನುದಾನ ನೀಡಿವೆ.
ಹುಂಡಿಯಿಂದ ಬಂದ ಹಣವನ್ನೂ ದೇವಸ್ಥಾನದ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು