ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆಯಲ್ಲಿ ಬಾಬಯ್ಯನ ಜಲ್ದಿ (Babayya Jaldhi) ಅಂಗವಾಗಿ ಕೊಂಡ ಹಾಯಿವುದರಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ಬೆಂಕಿ ಕೊಂಡ ಹಾಯ್ದು, ಬೆಂಕಿ ಕೆಂಡವನ್ನು ಮೇಲೆರಚಿಸಿಕೊಂಡರು.
ಹಿಂದೂ, ಮುಸ್ಲಿಂ ಬಾಂಧವ್ಯದ ಸಂಕೇತವಾಗಿ ಮುಸ್ಲಿಮರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಿದ ಬಳಿಕ, ಒಂದು ವಾರದ ಹಿಂದೆ ನಿರ್ಮಿತವಾದ ಗುಂಡಿಯಲ್ಲಿ ಕೊಂಡ ಹಾಕಲಾಯಿತು.
ಹಲವು ವರ್ಷಗಳಿಂದಲು ತೂಬಗೆರೆಯಲ್ಲಿ ಬಾಬಯ್ಯ ಜಲ್ಲಿ ಹಬ್ಬ ಆಚರಿಸುತ್ತಿರುವ ಬಾಬಯ್ಯ ವಂಶಸ್ಥ ಭಾಷಾ ನೇತೃತ್ವದಲ್ಲಿ ಹಸೇನ್-ಹುಸೇನ್ ದೇವರ ಹಸ್ತಗಳನ್ನು ಹೊತ್ತು, ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯನ್ನು ಗ್ರಾಮದ ಮಧ್ಯದಲ್ಲಿರುವ ಚಾವಡಿ ಚಾವಡಿ ಕರೆತರಲಾಯಿತು. ಅನೇಕರು ಹರಕೆ ಹೊತ್ತು ಕೊಂಡ ಹಾಯಿವುದರಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.