ದೊಡ್ಡಬಳ್ಳಾಪುರ: ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಮೊಹರಂ (Muharram) ಅಂಗವಾಗಿ ಹಸೇನ್ ಹುಸೇನ್ ಆಚರಣೆಯನ್ನು ಭಾನುವಾರ ಶ್ರದ್ಧಾಭಕ್ತಿಗಳಿಂದ ನಡೆಯಿತು.
ಧರ್ಮಗುರುಗಳು ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಮೊಹರಂ ನಂತರದ 07 ದಿನಕ್ಕೆ ನಡೆಯಲಿರುವ ಈ ಆಚರಣೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಶಿಯಾ ಮುಸ್ಲಿಂ ಬಾಂಧವರು ಬ್ಲೇಡು, ಕತ್ತಿ ಮೊದಲಾದ ಹರಿತ ಆಯುಧಗಳಿಂದ ಎದೆ ಚಚ್ಚಿಕೊಳ್ಳುವ ಮೂಲಕ ರಕ್ತಸಿಕ್ತ ದೇಹವನ್ನು ಹುಸೇನ್ ದೇವರಿಗೆ ಅರ್ಪಿಸಿದರು.
ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಅಂಜುಮನ್ ಎ ಹೈದರಿಯ ಸಂಘಟನೆ ನೇತೃತ್ವದಲ್ಲಿ ಮತ್ತು ಹುಸೇನ್ ಕಮಿಟಿ ಸಹಕಾರದಲ್ಲಿ ಮೊಹರಂ ನಡೆಸಲಾಗುತ್ತದೆ. ಇಮಾಮ್ ಹುಸೇನ್ ತ್ಯಾಗ ಬಲಿದಾನಗಳನ್ನು ಅಂದು ಸ್ಮರಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿಯೇ ದೊಡ್ಡಬಳ್ಳಾಪುರ ಈ ಆಚರಣೆ ನಡೆಯುವ ಪ್ರಮುಖ ಸ್ಥಳವಾಗಿದ್ದು ಇದನ್ನು ಸುಮಾರು 268ವರ್ಷಗಳಿಂದ ಆಚರಿಸುತ್ತಾ ಬರಲಾಗುತ್ತಿದೆ.
ದೇಶದ ವಿವಿಧ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಅಬಾಲವೃದ್ದಿಯಾಗಿ ಮುಸ್ಲಿಂಬಾಂಧವರು ಆಗಮಿಸಿ ಈ ಆಚರಣೆಯಲ್ಲಿ ಭಾಗವಹಿಸುವುದು ವಿಶೇಷವಾಗಿದೆ.