Rs. 2 lakh loan facility to encourage milk producers; D.K. Suresh

ಹಾಲು ಉತ್ಪಾದಕರ ಉತ್ತೇಜನಕ್ಕೆ ರೂ. 2 ಲಕ್ಷ ಸಾಲ ಸೌಲಭ್ಯ; ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್

ಮಾಗಡಿ; “ಬಮುಲ್ ರೈತರ ಸಂಸ್ಥೆ ಇದನ್ನು ಬೆಳೆಸುವುದು ನಮ್ಮ ಕರ್ತವ್ಯ. ‌ಈ ಕೆಲಸವನ್ನು ನಾನು ಮಾಡುತ್ತೇನೆ. ಇದಕ್ಕೆ ಎಲ್ಲಾ ನಾಯಕರ ಬೆಂಬಲ ಬೇಕು. ಎಲ್ಲರ ಜೊತೆಯೂ ನಾನು ಚರ್ಚೆ ನಡೆಸುತ್ತೇನೆ” ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ (D.K. Suresh) ತಿಳಿಸಿದರು.

ಮಾಗಡಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸುರೇಶ್ ಅವರು ಭಾನುವಾರ ಮಾತನಾಡಿದರು.

“ನನಗೆ ಡೈರಿಯ ಸಂಬಳ, ಡೈರಿಯ ಅನುಕೂಲಗಳು ಬೇಡ. ನಾನು ಇರುವ ತನಕ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನನ್ನ ಮನವಿ ಎಂದರೆ ನಂದಿನಿ ಉಳಿಸಿ, ಬೆಳೆಸಿ,‌ಉತ್ಪನ್ನಗಳನ್ನು ಬಳಸಿ” ಎಂದರು.

“ನಂದಿನಿ ಉತ್ಪನ್ನಗಳ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ.‌ ಉದಾಹರಣೆಗೆ ಪನ್ನೀರಿನ ಬೇಡಿಕೆಗೆ ಶೇ 5 ರಷ್ಟು ಮಾತ್ರ ನಾವು ಪೂರೈಕೆ ಮಾಡುತ್ತಿದ್ದೇವೆ. ಇದನ್ನು ಹೆಚ್ಚು ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಜನರೇ ನಂದಿನಿ ಉತ್ಪನ್ನಗಳನ್ನು ಹೆಚ್ಚು ಬಳಸುವ ಮೂಲಕ ಮಾರುಕಟ್ಟೆ ಹೆಚ್ಚು ಮಾಡಿಕೊಡಬೇಕು” ಎಂದು ಹೇಳಿದರು.

“ಹೊಸಕೋಟೆಯಲ್ಲಿ 22 ಎಕರೆ ಜಮೀನು, ದೊಡ್ಡಬಳ್ಳಾಪುರದಲ್ಲಿಯೂ 8 ಎಕರೆ ಜಮೀನಿದೆ ಅಲ್ಲಿಯೂ ಹಾಲು ಸಂಸ್ಕರಣ ಕೇಂದ್ರ ತೆರೆಯಬೇಕು ಎಂಬುದು ಅಲ್ಲಿನವರ ಬೇಡಿಕೆ. ಮಾಗಡಿ ತಾಲ್ಲೂಕಿನ ಅಭಿವೃದ್ಧಿಗೆ ನಾನು ಕೈ ಜೋಡಿಸುತ್ತೇನೆ. ಕಾವೇರಿ, ಹೇಮಾವತಿ, ಎತ್ತಿನಹೊಳೆಯಿಂದಲೂ ನೀರು ಬರುವ ಸಂಭವವಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು” ಎಂದರು.

ಸಮಸ್ಯೆ ಬಗೆಹರಿಸಲು ನಾನು ಕೆಟ್ಟವನಾಗಲೇ ಬೇಕು

“ನಾವು ನಿಮ್ಮ ನಿರೀಕ್ಷೆಗೆ ತಕ್ಕಂತೆ ಉತ್ತಮ ಕೆಲಸ ಮಾಡಿದಾಗ ಮಾತ್ರ ಈ ಅಭಿನಂದನೆಗೆ ನಾವು ಅರ್ಹ ಎಂದು ಸಾಬೀತಾಗುತ್ತದೆ. ನನಗೆ ಹಾಲು ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಅನುಭವವಿಲ್ಲ. ಈ ಕ್ಷೇತ್ರದ ಪ್ರಕ್ರಿಯೆ, ಅದರ ಆಡಳಿತ ಬಗ್ಗೆ ನಾನು ಈಗಷ್ಟೇ ಪ್ರಾಮಾಣಿಕವಾಗಿ ಕಲಿಯುತ್ತಿದ್ದೇನೆ. ನಾನು ಕೆಟ್ಟವನಾಗಬೇಕಾ, ಒಳ್ಳೆಯವನಾಗಬೇಕಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಕೆಟ್ಟವನಾಗದೆ ನನಗೆ ಬೇರೆ ವಿಧಿ ಇಲ್ಲ” ಎಂದರು.

“ಅಧಿಕಾರಿಗಳು, ನಿರ್ದೇಶಕರ ಜೊತೆ ಪ್ರತ್ಯೇಕವಾಗಿ ಅನೇಕ ಸಭೆ ಮಾಡಿದ್ದೇನೆ. ರೈತರನ್ನು ಉದ್ಧಾರ ಮಾಡಿ, ಸಂಸ್ಥೆ ಉಳಿಸಲು ನೀವು ಏನೇ ನಿರ್ಧಾರ ಕೈಗೊಂಡರೂ ನಾವು ಬದ್ಧ ಎಂದು ಹೇಳಿದ್ದಾರೆ. ಇದು ನನ್ನ ಸಂಸ್ಥೆ, ನಿರ್ದೇಶಕರ ಸಂಸ್ಥೆ, ಸರ್ಕಾರಿ ಸಂಸ್ಥೆ ಅಲ್ಲ. ಇದು ರೈತರ ಬೆವರಿನಿಂದ ಕಟ್ಟಿರುವ ಸಂಸ್ಥೆ. ಹಾಲು ಸಂಗ್ರಹಿಸುವವರ ಸಂಸ್ಥೆ, ಹಾಲು ಮಾರುವವರ ಸಂಸ್ಥೆ. ಈ ಪ್ರತಿ ವಿಭಾಗದಲ್ಲೂ ಸಮಸ್ಯೆಗಳಿದ್ದು, ಎಲ್ಲವನ್ನು ಬಗೆಹರಿಸಬೇಕು. ರೈತರು, ಮಾರಾಟಗಾರರು, ಗ್ರಾಹಕರು ಎಲ್ಲರೂ ಚೆನ್ನಾಗಿರಬೇಕು” ಎಂದು ಹೇಳಿದರು.

“ಇಲ್ಲಿ ಕೆಲವರು ರೂ.5 ಪ್ರೋತ್ಸಾಹ ಧನ ನೀಡಬೇಕು ಎಂದು ಹೇಳಿದರು, ಮೇವು ಪೂರೈಕೆದಾರರು ತಮ್ಮದೇ ಸಮಸ್ಯೆ ಹೇಳಿಕೊಂಡರು. ಇದನ್ನು ಖಾಸಗಿ ಅವರಿಗೆ ಕೊಟ್ಟಿರುವ ಕಾರಣ ಅವರು ಲಾಭ ನೋಡುತ್ತಿದ್ದಾರೆ. ನಾವು ಕನಕಪುರದಲ್ಲಿ ಸ್ಥಾಪಿಸಿರುವ ಹಾಲು ಕೇಂದ್ರ ಇಡೀ ಏಷ್ಯಾದಲ್ಲೇ ಅತ್ಯುತ್ತಮ ಘಟಕ. ನಾವು ಹೊಸ ಮಾರುಕಟ್ಟೆ ಹುಡುಕಬೇಕು. ಅದಕ್ಕೆ ಗುಣಮಟ್ಟದ ಅವಶ್ಯಕತೆ ಇದೆ. ಹಾಲು ಹಾಕುವವರಿಂದ ಕೊನೆಯದಾಗಿ ಮಾರುವವನವರೆಗೆ ಎಲ್ಲರೂ ಗುಣಮಟ್ಟ ನೋಡುತ್ತಾರೆ” ಎಂದು ಹೇಳಿದರು.

“ಖಾಸಗಿ ಹಾಲು ಸಂಸ್ಥೆಗಳು ರೈತರಿಂದ ಸಂಗ್ರಹಿಸುತ್ತಿರುವ ಹಾಲಿನಲ್ಲಿ ಕೊಬ್ಬಿನಾಂಶದ ಗುಣಮಟ್ಟ ಶೇ.4.5ರಷ್ಟಿದೆ. ನಾವು ಸಂಗ್ರಹಿಸುತ್ತಿರುವ ಹಾಲಿನ ಕೊಬ್ಬಿನಾಂಶದ ಗುಣಮಟ್ಟ ಶೇ.4.1ರಷ್ಟಿದೆ. ಇದನ್ನು ಸರಿಪಡಿಸಲು ನಾನು 1 ತಿಂಗಳು ಸಮಯಾವಕಾಶ ನೀಡಿದ್ದೇನೆ. ಇದಕ್ಕೆ ಸಹಕಾರ ನೀಡುವುದಾಗಿ ಎಲ್ಲರೂ ಹೇಳಿದ್ದಾರೆ. ವ್ಯವಸ್ಥೆಗೆ ತಕ್ಕ ಹಾಲಿನ ಉತ್ಪಾದನೆ ಇಲ್ಲ. ನಮ್ಮಲ್ಲಿ 25 ಲಕ್ಷ ಲೀಟರ್ ಹಾಲು ಪರಿಷ್ಕರಣೆ ಸಾಮರ್ಥ್ಯ ಹೊಂದಿದ್ದು, ನಾವು ಮಾಡುತ್ತಿರುವುದು ಸರಾಸರಿ 15 ಲಕ್ಷ ಲೀಟರ್ ಮಾತ್ರ. ಇನ್ನು 10 ಲಕ್ಷ ಲೀಟರ್ ಹಾಲು ಪರಿಷ್ಕರಿಸುವ ಸಾಮರ್ಥ್ಯ ನಮ್ಮಲ್ಲಿದೆ. ಮುಂದಿನ ಒಂದು ವರ್ಷದಲ್ಲಿ ಬಮೂಲ್ ಸಂಸ್ಥೆಯಲ್ಲಿ 25 ಲಕ್ಷ ಹಾಲು ಉತ್ಪಾದನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಗುರಿ ನೀಡಿದ್ದೇನೆ” ಎಂದು ತಿಳಿಸಿದರು.

“ಕಳೆದ ಎರಡು ತಿಂಗಳಿಂದ ಸಂಸ್ಥೆ ನಷ್ಟ ಅನುಭವಿಸಿದೆ. ರೈತರ ಮೇಲೆ ಹೊರೆ ಹಾಕಿ ಈ ನಷ್ಟ ಭರಿಸಲು ನನಗೆ ಇಷ್ಟವಿಲ್ಲ. ಹಾಲು ಉತ್ಪಾದನೆ ಜಾಸ್ತಿ ಮಾಡಿ 2 ರೂ. ಕಡಿಮೆ ಮಾಡಿ ಲಾಭಾಂಶ ತೋರಿಸಬಹುದು. ಆದರೆ ಅದು ಸರಿಯಲ್ಲ. ಈಗಿರುವ ವ್ಯವಸ್ಥೆ ಸರಿಪಡಿಸಿ, ಹಸುಗಳು ಹೆಣ್ಣು ಕರುಗಳನ್ನು ಹಾಕಬೇಕು. ನಾವು ಅವುಗಳ ಬಗ್ಗೆ ಗಮನ ಹರಿಸಿಡಿದ್ದೇವೆ. ಹೆಚ್ಚು ಪಶು ವೈದ್ಯರು, ನಾಯಿ ಬೆಕ್ಕು ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಡೈರಿ ಹಾಗೂ ಸರ್ಕಾರದಲ್ಲೂ ಪಶು ವೈದ್ಯರಿಲ್ಲ. ಇರುವವರು ವೈದ್ಯ ಕೆಲಸ ಬಿಟ್ಟು ಆಡಳಿತ ಮಂಡಳಿ ಸೇರಿದ್ದಾರೆ” ಎಂದರು.

“ಇದೆಲ್ಲದಕ್ಕೂ ಪರಿಹಾರ ಹುಡುಕಬೇಕಾದರೆ ನಾನು ಕೆಟ್ಟವನಾಗಲೇ ಬೇಕು. ನಾನು ನಿಮ್ಮ ಮೇಲೆ ಹೊರೆ ಹಾಕಲು ಇಷ್ಟವಿಲ್ಲ. ನಾನು ಅಧ್ಯಕ್ಷನಾದ ಮೂರೇ ದಿನಕ್ಕೆ ಎಂ.ಡಿ ಅವರು ಕರೆ ಮಾಡಿ ಮೇವಿನ ಬೆಲೆ ₹500 ಜಾಸ್ತಿ ಮಾಡಿದ್ದೇವೆ ಎಂದು ಹೇಳಿದರು. ನಾನು ಅದನ್ನು ತಡೆದು, ಮರು ದಿನ ಸಭೆ ನಡೆಸಿ ಹೊಸ ಆಡಳಿತ ಮಂಡಳಿ ಬರುವವರೆಗೂ ಇದನ್ನು ತಡೆಹಿಡಿಯುವಂತೆ ಮಾಡಿದ್ದೇನೆ” ಎಂದರು.

ಹಾಲು ಉತ್ಪಾದಕರ ಉತ್ತೇಜನಕ್ಕೆ 2 ಲಕ್ಷ ರೂ. ಸಾಲ

ನಮ್ಮ ಒಕ್ಕೂಟದಲ್ಲಿ 1.28 ಲಕ್ಷ ರೈತರು ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಮಾಗಡಿಯಲ್ಲಿ 12 ಸಾವಿರ ರೈತರು ಹಾಲು ಉತ್ಪಾದನೆ ಮಾಡುತ್ತಿದ್ದು, ನೀವು ಹೆಚ್ಚು ಹಸುಗಳನ್ನು ಕಟ್ಟಿ ನಮಗೆ ಸಹಕಾರ ನೀಡಬೇಕು. ನಿಮಗೆ ಅಗತ್ಯವಿರುವ ಆರ್ಥಿಕ ನೆರವಿಗಾಗಿ 3% ಬಡ್ಡಿದರದಲ್ಲಿ 2 ಹಸು ಖರೀದಿ ಮಾಡಲು 2 ಲಕ್ಷವರೆಗೂ ಸಾಲ ನೀಡಲಿ ಜಿಲ್ಲಾ ಸಹಕಾರಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಹಾಲು ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ, ರೈತರ ಹಾಲಿನ ಗುಣಮಟ್ಟ ಎಷ್ಟಿದೆ ಎಂದು ಸ್ಥಳದಲ್ಲೇ ತಿಳಿಸಲು ಅಗತ್ಯ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಇದರ ಮಾಹಿತಿಯನ್ನು ಪ್ರತಿ ನಿತ್ಯ ನಿಮಗೆ ನೀಡಲಾಗುವುದು ಎಂದು ತಿಳಿಸಿದರು.

ನಮ್ಮಲ್ಲೇ ಮಾರುಕಟ್ಟೆ ವಿಸ್ತರಣೆಗೆ ಅವಕಾಶವಿದೆ

“ಹಾಲು ಮಾರುಕಟ್ಟೆ ಸರಿಪಡಿಸಲು ಚರ್ಚೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ 2995 ಹಾಲು ಸಹಕಾರಿ ಸಂಘಗಳಿವೆ. ಈ ಸಂಘಗಳ ಕಾರ್ಯದರ್ಶಿಗಳು ತಮ್ಮ ಊರಿನಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ನಂದಿನಿ ಹಾಲು ಬಳಸುವ ಕಾರ್ಯಕ್ರಮ ರೂಪಿಸಿದರೆ. ನಾವು ನಮ್ಮ ಹಾಲನ್ನು ಹೊರ ರಾಜ್ಯದಲ್ಲಿ ಹಾಲನ್ನು ಮಾರುವ ಅಗತ್ಯವಿಲ್ಲ. ನಮ್ಮಲ್ಲೇ ಮಾರುಕಟ್ಟೆ ಕಂಡುಕೊಳ್ಳಬಹುದು” ಎಂದರು.

ಒಟ್ಟಾಗಿ ಹೋರಾಟ ಮಾಡಬೇಕು

“ಶ್ರೀರಂಗ ನೀರಾವರಿ ಯೋಜನೆ ಬಗ್ಗೆ ತುಮಕೂರಿನವರು ಕೇವಲವಾಗಿ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ಎಲ್ಲರು ಪಕ್ಷಾತೀತವಾಗಿ ಹೋರಾಟ ಮಾಡಬೇಕು. ನೀವು ಕಾವೇರಿ ಜಲಾನಯನ ಪ್ರದೇಶದ ಒಳಗೆ ಬರುವವರು. ನೀವು ತಮಿಳುನಾಡಿಗೆ ಸೇರಿದವರಲ್ಲ. ನೀವು ವ್ಯವಸಾಯಕ್ಕೆ ನೀರು ಕೇಳುತ್ತಿಲ್ಲ. ಕುಡಿಯುವುದಕ್ಕೆ ಕೇಳುತ್ತಿರುವುದು” ಎಂದು ಹೇಳಿದರು.

“ಲಿಂಕ್‌ಕೆನಾಲ್ ಮಾಡಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಾಗೂ ಸರ್ಕಾರ ಬದ್ದವಾಗಿದೆ. ಕುಣಿಗಲ್ ಗೆ 2.5 ಟಿಎಂಸಿ ನೀರು ನಿಗಧಿಯಾಗಿದೆ. ಆದರೆ 25 ವರ್ಷಗಳಿಂದ ನೀರೇ ಬಂದಿಲ್ಲ. ನಾನು ಸಂಸದನಾಗಿದ್ದಾಗ ಇದಕ್ಕೆ ಒಪ್ಪಿಗೆ ಕೊಡಿಸಿದೆ. ಆದರೆ ರಾಜಕೀಯ ಕಾರಣಗಳಿಂದ ನೀರು ಹರಿಸುತ್ತಿಲ್ಲ. ಲಿಂಕ್ ಕೆನಾಲ್ ಮಾಡುವುದಕ್ಕೂ ಬಿಡುತ್ತಿಲ್ಲ. ನಾವು ಮಾಗಡಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಬದ್ದವಾಗಿದ್ದೇವೆ.‌ ಇಲ್ಲಿನ ರೈತರಿಗೆ ನಿಮ್ಮ ನೀರನ್ನು ಕೇಳಲು ಹಕ್ಕಿದೆ. ತುಮಕೂರು ಜಿಲ್ಲೆಯ ನೀರಾವರಿ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಬದ್ದವಾಗಿದೆ” ಎಂದು ಸ್ಪಷ್ಟಪಡಿಸಿದರು.

ನನಗೆ ಅಧಿಕಾರ ಇಲ್ಲದಿದ್ದರೂ ನಿಮ್ಮ ಕೆಲಸ ಮಾಡುವೆ

“ಜನ ನನಗೆ ವಿಶ್ರಾಂತಿ ನೀಡಿದ್ದು, ನನಗೆ ಯಾವುದೇ ಒತ್ತಡವಿಲ್ಲ. ನನಗೆ ಅಧಿಕಾರ ಇಲ್ಲದಿದ್ದರೂ ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ. 2028ರಲ್ಲಿ ನಿಮ್ಮನ್ನು ಮತ್ತೆ ಶಾಸಕರನ್ನಾಗಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ನಾನು ಮಾಡುತ್ತೇನೆ.ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಮ್ಮದೇ ಸರ್ಕಾರ ಇದೆ. ನಾನು ಹಾಗೂ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಮಾದರಿ ಜಿಲ್ಲೆ ಮಾಡುವ ಮಾತು ಕೊಟ್ಟಿದ್ದೇವೆ. ನಾವು ಅದನ್ನು ಮಾಡುತ್ತೇವೆ” ಎಂದರು.

“ಇದು ಕೂಡ ಬೆಂಗಳೂರು ಜಿಲ್ಲೆ. ಇದು ಈಗ ಬೆಂಗಳೂರು ಆಗಿದ್ದಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇದು ಬೆಂಗಳೂರು. ಈ ಹೆಸರು ಉಳಿಸಿಕೊಳ್ಳಲು ಪ್ರಯತ್ನಿಸಿದಾಗ ಬಿಜೆಪಿ, ಜೆಡಿಎಸ್ ನಾಯಕರು ಟೀಕೆ ಮಾಡಿದರು. ಈ ಹೆಸರು ಬದಲಾವಣೆಯಿಂದ ಅಭಿವೃದ್ಧಿ ಖಂಡಿತಾ ಆಗುತ್ತದೆ. ಇದರಿಂದ ನಮ್ಮ ಗುರುತು ಮತ್ತಷ್ಟು ಬಲಿಷ್ಠವಾಗುತ್ತದೆ” ಎಂದರು.

“ಎರಡನೇ ವಿಮಾನ ನಿಲ್ದಾಣ ಎಲ್ಲಿ ಬರುತ್ತದೆಯೋ ಗೊತ್ತಿಲ್ಲ. ಒಟ್ಟು ಮಾಗಡಿ ಸುತ್ತಮುತ್ತಲೇ ಬರುತ್ತದೆ. ಬೆಂಗಳೂರು ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶದ ಜನರ ರೈತರ ಮಕ್ಕಳು ರೈತರಾಗಿ ಇರಲು ಒಪ್ಪುತ್ತಿಲ್ಲ. ಈ ಚಿಂತನೆಯೇ ನಮ್ಮಲ್ಲಿದೆ. ನಿಮ್ಮ ಮನೆಗೆ ಸೊಸೆ ಬಂದು ಸಗಣಿ ಎತ್ತು ಎಂದರೆ ಎತ್ತುತ್ತಾರೆಯೇ? ನಿಮ್ಮ ಮಕ್ಕಳು ಎತ್ತುತ್ತಾರೆಯೇ? ಇದಕ್ಕೆ ಏನು ಮಾಡಬೇಕು ಎಂಬುದೇ ನನ್ನ ಚಿಂತೆಯಾಗಿದೆ” ಎಂದು ತಿಳಿಸಿದರು.

ರಾಜಕೀಯ

ಆ.31 ರಂದು “ಧರ್ಮಸ್ಥಳ ಸತ್ಯ ಯಾತ್ರೆ: ಜೆಡಿಎಸ್ ಕಾರ್ಯಕರ್ತರಿಗೆ ಬಿ.ಮುನೇಗೌಡ ಕರೆ

ಆ.31 ರಂದು “ಧರ್ಮಸ್ಥಳ ಸತ್ಯ ಯಾತ್ರೆ: ಜೆಡಿಎಸ್ ಕಾರ್ಯಕರ್ತರಿಗೆ ಬಿ.ಮುನೇಗೌಡ ಕರೆ

"ಧರ್ಮಸ್ಥಳ ಸತ್ಯ ಯಾತ್ರೆಗೆ" (Dharmasthala Satya Yatre) ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ (JDS) ಅಧ್ಯಕ್ಷ ಬಿ.ಮುನೇಗೌಡ ಕರೆ ನೀಡಿದ್ದಾರೆ.

[ccc_my_favorite_select_button post_id="113258"]
RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

ವಿಧಾನಸಭೆಯಲ್ಲಿ ಆರ್ ಎಸ್ಎಸ್ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸುತ್ತಿರುವವರಿಗೂ ಡಿ.ಕೆ.ಶಿವಕುಮಾರ್ (D.K. Shivakumar) ತಿರುಗೇಟು ನೀಡಿದರು.

[ccc_my_favorite_select_button post_id="113124"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ನಗದು ಪುರಸ್ಕಾರದ ಮೊತ್ತ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ನಗದು ಪುರಸ್ಕಾರದ ಮೊತ್ತ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ಒಲಂಪಿಕ್ಸ್ , ಏಷ್ಯನ್ ಗೇಮ್ಸ್, ಹಾಗೂ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದವರಿಗೆ 5 ಕೋಟಿ, ಬೆಳ್ಳಿ ಗೆದ್ದವರಿಗೆ 3 ಹಾಗೂ ಕಂಚು ಗೆದ್ದವರಿಗೆ 2 ಕೋಟಿ ರೂ.ಗಳ ಬಹುಮಾನ: Cmsiddaramaiah

[ccc_my_favorite_select_button post_id="113214"]
ದೊಡ್ಡಬಳ್ಳಾಪುರ: ಗಣೇಶ ಚತುರ್ಥಿ ದಿನ ತಪ್ಪಿದ ಅನಾಹುತ.. ಟೋಲ್ ಸಂಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ!| Video ನೋಡಿ

ದೊಡ್ಡಬಳ್ಳಾಪುರ: ಗಣೇಶ ಚತುರ್ಥಿ ದಿನ ತಪ್ಪಿದ ಅನಾಹುತ.. ಟೋಲ್ ಸಂಸ್ಥೆ ವಿರುದ್ಧ ಸಾರ್ವಜನಿಕರ

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ರಸ್ತೆ ಬದಿಯಲ್ಲಿನ ಚರಂಡಿ ನುಗ್ಗಿರುವ ಘಟನೆ ನಗರದ ಹೊರವಲಯದಲ್ಲಿನ Doddaballapura ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.

[ccc_my_favorite_select_button post_id="113161"]
ದೊಡ್ಡಬಳ್ಳಾಪುರ: ಹಿಟ್ & ರನ್.. ವ್ಯಕ್ತಿ ಸಾವು..!

ದೊಡ್ಡಬಳ್ಳಾಪುರ: ಹಿಟ್ & ರನ್.. ವ್ಯಕ್ತಿ ಸಾವು..!

ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ (Hit & Run) ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ- ದಾಬಸ್‌ಪೇಟೆ ನಡುವಿನ

[ccc_my_favorite_select_button post_id="113236"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!