ಹೈದರಾಬಾದ್: ತೆಲುಗು ಚಿತ್ರರಂಗ ಮತ್ತೊಮ್ಮೆ ದುಃಖದಲ್ಲಿ ಮುಳುಗಿದೆ. ಕಳೆದ ನಾಲ್ಕು ದಶಕಗಳಿಂದ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ (Kota Srinivasa Rao) ಅವರು ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಫಿಲ್ಮ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
ಕೋಟಾ ಶ್ರೀನಿವಾಸ ರಾವ್ ಅವರು ಪತ್ನಿ ರುಕ್ಕಿಣಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ఓం శాంతి 🪔💔🙏#KotaSrinivasRao pic.twitter.com/1uYSq60PRU
— 🆂🅴🆂🅷🆄✨️ (@Sesh1999_) July 13, 2025
ಕೋಟಾ ಶ್ರೀನಿವಾಸ ರಾವ್ ಅವರ ಅಗಲಿಕೆಯಿಂದ ತೆಲುಗು ಚಿತ್ರರಂಗದಲ್ಲಿ ಶೂನ್ಯತೆ ಮೂಡಿದೆ.
ವಯಸ್ಸಾದ ಕಾರಣ ನಡೆಯಲು ಕಷ್ಟವಾಗುತ್ತಿದ್ದರೂ, ಅವರು ಎರಡು ವರ್ಷಗಳ ಹಿಂದಿನವರೆಗೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದರು. 2023ರಲ್ಲಿ ತೆರೆಕಂಡ ‘ಸುವರ್ಣ ಸುಂದರಿ’ ಅವರ ಕೊನೆಯ ಸಿನಿಮಾ.
ತಮ್ಮ ಸುದೀರ್ಘ ಸಿನಿ ಪಯಣದಲ್ಲಿ ಕೋಟಾ ಶ್ರೀನಿವಾಸ ರಾವ್ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೇವಲ ವಿಭಿನ್ನ ಪಾತ್ರಗಳನ್ನು ನಿರ್ವಹಿಸಲಿಲ್ಲ, ಬದಲಿಗೆ ಆ ಪಾತ್ರಗಳಲ್ಲಿ ಜೀವಿಸಿದರು ಎಂದರೆ ತಪ್ಪಾಗಲಾರದು.
U died as a old man but not an actor 💙
— 𝐂𝐇𝐈𝐓𝐓𝐈🗡️ (@chittionline) July 13, 2025
Emotion .. villain.. comedy..what not ..u rocked everything sirrr..🔥
We praying for ur soul 😭🥺 we miss u legend #KotaSrinivasRao Gaaru 💐
"OM SHANTI" pic.twitter.com/TWkeNtxYPq
ಅವರ ನಟನೆ ಹಾಸ್ಯ ಮತ್ತು ವಿಲನ್ ಪಾತ್ರದ ವಿಶಿಷ್ಟ ಮಿಶ್ರಣವಾಗಿತ್ತು. ವಿಲನ್ ಪಾತ್ರಗಳಲ್ಲೂ ಹಾಸ್ಯವನ್ನು ತರುವುದು ಅವರ ವಿಶೇಷತೆಯಾಗಿತ್ತು.
‘ಆಡವಾರಿ ಮಾಟಲಕು ಅರ್ಥಾಲೇ ವೇರು ಲೇ ಸಿನಿಮಾದಲ್ಲಿನ ತಂದೆಯ ಪಾತ್ರ, ಆಹ ನಾ ಪೆಳ್ಳಂಟ’ದಲ್ಲಿ ಕಂಜೂಸ್ ಪಾತ್ರವಿರಲಿ, ‘ಗಣೇಶ್’ ಚಿತ್ರದಲ್ಲಿ ರಾಜಕಾರಣಿಯ ಪಾತ್ರವಿರಲಿ, ನುವ್ವು ವಸ್ತಾವನಿ ಚಿತ್ರದ ಮದ್ಯವ್ಯಸನಿ ಪೋಷಕ ಪಾತ್ರ ಸೇರಿದಂತೆ ಪ್ರತಿಯೊಂದು ಪಾತ್ರಕ್ಕೂ ಅವರು ತಮ್ಮದೇ ಆದ ವಿಶಿಷ್ಟ ಸ್ಪರ್ಶವನ್ನು ನೀಡುತ್ತಿದ್ದರು.
ಕೋಟಾ ಶ್ರೀನಿವಾಸ ರಾವ್ ಅವರು 1942ರ ಜುಲೈ 10ರಂದು ಕೃಷ್ಣಾ ಜಿಲ್ಲೆಯ ಕಂಕಿಪಡು ಎಂಬಲ್ಲಿ ಜನಿಸಿದರು. ಅವರ ತಂದೆ ಸೀತಾರಾಮಾಂಜನೇಯಲು ವೈದ್ಯರಾಗಿದ್ದರು.
ಕೋಟಾ ಅವರು ಚಿಕ್ಕ ವಯಸ್ಸಿನಲ್ಲಿ ವೈದ್ಯರಾಗಬೇಕೆಂದು ಕನಸು ಕಂಡರೂ, ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಸಕ್ರಿಯರಾದ ನಂತರ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಪದವಿ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಸಿಕ್ಕರೂ, ನಟನೆಯನ್ನೇ ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡರು.
ಅವರು ಕೇವಲ ತೆಲುಗು ಮಾತ್ರವಲ್ಲದೆ, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ‘ಲೇಡಿ ಕಮಿಷನರ್’, ‘ರಕ್ತ ಕಣ್ಣೀರು’, ‘ಲವ್’, ‘ನಮ್ಮ ಬಸವ’, ‘ನಮ್ಮಣ್ಣ’, ‘ಶ್ರೀಮತಿ’, ‘ಕಬ್ಬಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೋಟಾ ಶ್ರೀನಿವಾಸ ರಾವ್ ಅವರು ನಟನೆಯ ಜೊತೆಗೆ ರಾಜಕೀಯದಲ್ಲೂ ತೊಡಗಿಕೊಂಡಿದ್ದರು. 1999ರಿಂದ 2004ರವರೆಗೆ ವಿಜಯವಾಡ ಪೂರ್ವ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
ಅವರ ಮಗ ಕೋಟಾ ವೆಂಕಟ ಆಂಜನೇಯ ಪ್ರಸಾದ್ ತಂದೆಯ ಹೆಜ್ಜೆ ಹಿಡಿದು ಚಿತ್ರರಂಗಕ್ಕೆ ಬಂದಿದ್ದರೂ, ದುರದೃಷ್ಟವಶಾತ್ ಅಪಘಾತವೊಂದರಲ್ಲಿ ಅಕಾಲಿಕವಾಗಿ ನಿಧನರಾದರು. ಮಗನ ಸಾವಿನಿಂದ ಕೋಟಾ ಅವರು ತೀವ್ರವಾಗಿ ನೊಂದಿದ್ದರು.
ಅವರ ಸಹೋದರ ಶಂಕರ್ ರಾವ್ ಕೂಡ ನಟರಾಗಿದ್ದಾರೆ. ಕೋಟಾ ಶ್ರೀನಿವಾಸ ರಾವ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಮತ್ತು ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.