Daily Astrology| Astrology

ದಿನ ಭವಿಷ್ಯ: ಈ ರಾಶಿಯವರಿಗೆ ಕೆಲ ಬೇಸರಗಳು ಎದುರಾಗಬಹುದು ಕುಗ್ಗದಿರಿ

Astrology: ಗುರುವಾರ, ಜುಲೈ 17, 2025, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ: ಉತ್ತಮ ಆರಂಭಕ್ಕಾಗಿ ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ದೃಢ ನಿರ್ಧಾರ ಕೈಗೊಳ್ಳಿ. ದೀರ್ಘಾವಧಿಯ ಪಾಲುದಾರಿಕೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ. (ಭಕ್ತಿಯಿಂದ ಶ್ರೀ ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಷಭ ರಾಶಿ: ಹೊಸ ವ್ಯಾಪಾರ- ವಹಿವಾಟುಗಳ ಕುರಿತು ಭಯ ಬೇಡ. ಮುಂದೆ ಹೆಜ್ಜೆ ಇಡಿ. ನಿಮ್ಮ ಸಹಾಯವನ್ನು ಅರಸಿ ಬರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ: ಇತರರ ಹಿತಾಸಕ್ತಿ ಗಳಂತೆ ನೀವು ಕೆಲಸ ಮಾಡಲು ಸಾಧ್ಯವಿಲ್ಲ. ವೃತ್ತಿಯಲ್ಲಿ ಕೆಲ ಬೇಸರಗಳು ಎದುರಾಗಬಹುದು ಕುಗ್ಗದಿರಿ. ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿ. (ಭಕ್ತಿಯಿಂದ ಸಾಲಿ ಗ್ರಾಮ ಸ್ವರೂಪ ಶ್ರೀ ಮಹಾ ವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ: ವೃತ್ತಿಪರ ವ್ಯವಹಾರಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಜವಾಬ್ದಾರಿಗಳ ಉತ್ತಮ ನಿಭಾವಣೆಯಿಂದಾಗಿ ಇತರರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. (ಭಕ್ತಿಯಿಂದ ಶ್ರೀ ಕಾರ್ಯಸಿದ್ಧಿ ಮಹಾಗಣಪತಿ ಪ್ರಾರ್ಥನೆ ಮಾಡಿ ಶುಭ ವಾಗುವುದು.)

ಸಿಂಹ ರಾಶಿ: ಇತರರನ್ನು ಮೆಚ್ಚಿಸುವ ನಿಮ್ಮ ಸಾಮರ್ಥ್ಯವು ಪ್ರತಿಫಲವನ್ನು ತರುತ್ತದೆ. ಸ್ಪರ್ಧೆ ಹೆಚ್ಚಾದಂತೆ ಕೆಲಸದ ವೇಳಾಪಟ್ಟಿಯು ತೀವ್ರವಾಗಿರುತ್ತದೆ. ತಾಳ್ಮೆಯಿಂದಿರಲು ಪ್ರಯತ್ನಿಸಿ. ನಿಮ್ಮ ತುಟಿಗಳಲ್ಲಿ ಕಿರುನಗೆ ಇರಲಿ. ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.)

ಕನ್ಯಾ ರಾಶಿ: ವೈಯಕ್ತಿಕ ಜೀವನದ ಕಡೆಗೂ ಗಮನವಿರಲಿ. ಸದಾಕಾಲ ವ್ಯಾಪಾರ ವಹಿವಾಟುಗಳಲ್ಲೇ ಕಾರ್ಯನಿರತ ರಾಗಿರುತ್ತೀರಿ. ಕುಟುಂಬಸ್ಥರೊಂದಿಗೂ ಕಾಲ ಕಳೆಯಲು ಪ್ರಯತ್ನ ಮಾಡಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ: ತಪ್ಪುಗಳನ್ನು ಒಪ್ಪಿಕೊಂಡು ಬಿಡಿ ಶಾಂತಿಯುತ ಜೀವನ ನಿಮ್ಮದಾಗಲಿದೆ. ಹಿಂಜರಿಕೆ ಬೇಡ, ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. (ಭಕ್ತಿಯಿಂದ ಶ್ರೀ ಕಾರ್ಯಸಿದ್ಧಿ ಗಣಪತಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ: ಸ್ಥಾನಮಾನದ ಬಯಕೆ ಈಡೇರಲಿದೆ.ಆದರೆ, ಅದೃಷ್ಟದಿಂದ ಎಲ್ಲವೂ ಸಾಧ್ಯವಿಲ್ಲ. ನಿಮ್ಮ ಪರಿಶ್ರಮ ಕೂಡ ಮುಖ್ಯವಾಗುತ್ತದೆ. (ಭಕ್ತಿಯಿಂದ ಶ್ರೀ ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭವಾಗುವುದು.)

ಧನಸ್ಸು ರಾಶಿ: ಆತ್ಮವಿಶ್ವಾಸ ವಿರಲಿ. ನೀವು ಕೈಹಾಕುವ ಕೆಲಸಗಳು ಕಾರ್ಯಸಾಧ್ಯ ವಾಗಲಿದೆ. ಆದರೆ ಒತ್ತಡ ಜೀವನದಿಂದ ದೂರ ಇರಲು ಪ್ರಯತ್ನಿಸಿ. (ಭಕ್ತಿಯಿಂದ ಶ್ರೀ ಅನಂತ ಪದ್ಮನಾಭ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ: ಈ ದಿನ ನಿಮ್ಮ ಬಹುತೇಕ ಗಮನ ವ್ಯಾಪಾರ ಹಾಗೂ ವ್ಯವಹಾರಗಳ ಮೇಲಿರಲಿದೆ. ಉದ್ಯೋಗಗಳನ್ನು ಹುಡುಕುತ್ತಿರುವವರು ಇಂದು ಕೆಲವು ಒಳ್ಳೆಯ ಸುದ್ದಿಯನ್ನು ಪಡೆಯಬಹುದು.(ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಡಿ ಶುಭವಾಗುವುದು.)

ಕುಂಭ ರಾಶಿ: ಮಕ್ಕಳ ಮೇಲೆ ಹೆಚ್ಚಿನ ಕಾಳಜಿವಹಿಸಿ. ನಿಮ್ಮನ್ನು ಹುಡುಕಿ ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಸಮಯವನ್ನು ಉತ್ತಮವಾಗಿ ಬಳಕೆ ಮಾಡಿ. (ಭಕ್ತಿಯಿಂದ ಶ್ರೀ ಬದರೀನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ: ಹೊಸ ಯೋಜನೆ, ವ್ಯಾಪಾರ ವಹಿವಾಟುಗಳಿಗೆ ನಿಮ್ಮ ಹೆಚ್ಚಿನ ಪ್ರಯತ್ನ ಅಗತ್ಯವಿದೆ. ಪ್ರಗತಿಯ ಕ್ಷೇತ್ರದಲ್ಲಿ ಹಲವು ಮಾರ್ಗಗಳು ತೆರೆದು ಕೊಳ್ಳುತ್ತವೆ ಮತ್ತು ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.)

ತಿಥಿ: ಸಪ್ತಮಿ
ನಕ್ಷತ್ರ: ರೇವತಿ ನಕ್ಷತ್ರ.

ರಾಹುಕಾಲ: 01:30PM ರಿಂದ 3:00PM
ಗುಳಿಕಕಾಲ: 09:00AM ರಿಂದ 10:30AM
ಯಮಗಂಡಕಾಲ: 06:00AM ರಿಂದ 07:30AM

ರಾಜಕೀಯ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ಬೆಂಗಳೂರು: ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ರಣದೀಪ್ ಸುರ್ಜೇವಾಲ (Randeep Surjewala) ಅವರಿಗೆ ಅಭಿನಂದನೆಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="111193"]
ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಲು ಬಯಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ಅವರು ತಿಳಿಸಿದ್ದಾರೆ.

[ccc_my_favorite_select_button post_id="111198"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ..!

ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ..!

ಪೊಲೀಸ್ ಠಾಣೆ ಆವರಣದಲ್ಲಿರುವ ರೆಸ್ಟ್ ರೂಮ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ (Suicide) ಘಟನೆ

[ccc_my_favorite_select_button post_id="111207"]
Accident; ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಲಾರಿ.. ಮಾವಿನ ಕಾಯಿಗಾಗಿ ಮುಗಿಬಿದ್ದ ಜನ

Accident; ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಲಾರಿ.. ಮಾವಿನ ಕಾಯಿಗಾಗಿ ಮುಗಿಬಿದ್ದ ಜನ

ಮಾವಿನ ಕಾಯಿ ತುಂಬಿಕೊಂಡು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪೊ ಮಗುಚಿ ಬಿದ್ದಿರುವ ಘಟನೆ (Accident)

[ccc_my_favorite_select_button post_id="111232"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!