ದೊಡ್ಡಬಳ್ಳಾಪುರ: ನಗರದ ದರ್ಗಾಜೋಗಿಹಳ್ಳಿ ನಿವಾಸಿ ನಂಜಪ್ಪ ಎನ್ನುವವರ ಮೊಮ್ಮಗ ಚೇತನ್ ಎನ್ನುವ 15 ವರ್ಷದ ಬಾಲಕ (Boy) ಜುಲೈ 16 ರಂದು ಕಾಣೆಯಾಗಿದ್ದಾನೆ.
ಶಾಲೆಗೆ ತೆರಳಲು ಸಿದ್ಧವಾದ ಬಾಲಕ, ಯಾರಿಗೂ ತಿಳಿಸದೆ ಏಕಾಏಕಿ ಮನೆಯಿಂದ ತೆರಳಿದ್ದು, ಹಿಂತಿರುಗಿ ಬಂದಿಲ್ಲ. ಈ ಕುರಿತಂತೆ ಪೋಷಕರು ಹುಡುಕಾಟ ನಡೆಸಿ, ಸಿಗದೆ ಇದ್ದ ಕಾರಣ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಾಲಕನ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ತಿಳಿಸಿದ್ದಾರೆ.
ಚಹರೆ: ಅಂದಾಜು 5 ಅಡಿ ಎತ್ತರ, ಗೋದಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಕೆಂಪು ಬಣ್ಣ ಟಿ-ಶರ್ಟ್, ಕಪ್ಪು ಬಣ್ಣದ ಟ್ರಾಕ್ ಪ್ಯಾಂಟ್ ಧರಿಸಿರುತ್ತಾನೆ.
ಮೇಲ್ಕಂಡ ಚಹರೆ ಗುರುತುಗಳುಳ್ಳ ಬಾಲಕ ಬಗ್ಗೆ ಮಾಹಿತಿ ಸಿಕ್ಕಲ್ಲಿ 82779 60670, 94835 01863, 99457 97295 ಸಂಪರ್ಕಿಸುವಂತೆ ಪೋಷಕರು ಮನವಿ ಮಾಡಿದ್ದಾರೆ.