ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ (Dr. K. Sudhakar) ಅವರು ಇಂದು (ಜುಲೈ.17) ದೊಡ್ಡಬಳ್ಳಾಪುರ ತಾಲ್ಲೂಕಿನ ಪರ್ಯಟನೆ ನಡೆಸಲಿದ್ದಾರೆ.
ಹೌದು, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರು ಭಾಗವಹಿಸಿದ್ದಾರೆ.
ಮೊದಲಿಗೆ ಬೆಳಗ್ಗೆ 11ಗಂಟೆಗೆ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದಲ್ಲಿ ಅಮೃತ್ ಭಾರತ್ ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ನಿಲ್ದಾಣ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.
ಬಳಿಕ ರಂಗಪ್ಪ ಸರ್ಕಲ್ ಬಳಿ ಬಸ್ ತಂಗುದಾಣ ಶಂಕುಸ್ಥಾಪನೆ, ಐ.ಬಿ. ಸರ್ಕಲ್ ತುಮಕೂರು ಕಡೆಗೆ ಹೋಗುವ ಬಳಿ ಬಸ್ ತಂಗುದಾಣ ಶಂಕುಸ್ಥಾಪನೆ, ಕೋಡಿಗೆಹಳ್ಳಿ ಗ್ರಾಮದಲ್ಲಿ ಹೈ ಮಾಸ್ಕ್ ವಿದ್ಯುತ್ ದೀಪ ಅಳವಡಿಕೆ ಶಂಕುಸ್ಥಾಪನೆ, ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ನಾಗಸಂದ್ರ ಗ್ರಾಮದಲ್ಲಿ ಹೈ ಮಾನ್ಯ ವಿದ್ಯುತ್ ದೀಪ ಅಳವಡಿಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ..
ನಂತರ ಮತ್ತೆ 3 ಗಂಟೆಗೆ ದೊಡ್ಡಬೆಳವಂಗಲ ಗ್ರಾಮದಲ್ಲಿ ಆರ್.ಸಿ.ಸಿ ಕಟ್ಟಡದೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ದೊಡ್ಡಬೆಳವಂಗಲ ಗ್ರಾಮದ ಕಡೆಗೆ ಹೋಗುವ ಬಳಿ ಬಸ್ ತಂಗುದಾಣ ಶಂಕುಸ್ಥಾಪನೆ, ಹುಲಿಕುಂಟೆ ಗ್ರಾಮದಲ್ಲಿ ಹೈಮಾನ್ಯ ದೀಪ ಅಳವಡಿಕೆ ಶಂಕುಸ್ಥಾಪನೆ.
ಸಂಜೆ 04 ಗಂಟೆಗೆ ಆರೂಢಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನವತಿ ಗ್ರಾಮದಲ್ಲಿ ಆರ್ ಸಿ.ಸಿ ಕಟ್ಟಡದೊಂದಿಗೆ ಶುದ್ದ ಕುಡಿಯುವ ನೀರಿನ ಘಟಕ ಶಂಕುಸ್ಥಾಪನೆ. ಹಾಗೂ ಸಂಜೆ 4.30ಕ್ಕೆ ಗಂಟೆಗೆ ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರಕ್ಕೆ ಹೋಗವ ರಸ್ತೆ ಕಡೆಗೆ ಬೀಡಿಕೆರೆ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಾಣದ ಕಾಮಕಾರಿಯ ಶಂಕುಸ್ಥಾಪನೆಯನ್ನು ಸಂಸದ ಡಾ.ಕೆ.ಸುಧಾಕರ್ ನೆರವೇರಿಸಲಿದ್ದಾರೆ.
(ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)