ನವದೆಹಲಿ: ಯೆಮನ್ ದೇಶದಲ್ಲಿ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಣೆಯಾಗಿ, ಗಲ್ಲು ಶಿಕ್ಷೆ ವಿಧಿಸಲಾಗಿರುವ ಭಾರತದ ಕೇರಳ ಮೂಲದ ಶುಕ್ರೂಷಕಿ ನಿಮಿಷಾ ಪ್ರಿಯಾಗೆ (Nimisha Priya) ಕ್ಷಮಾದಾನ ನೀಡಲು ಯೆಮನ್ ನ ಸಂತ್ರಸ್ತ, ತಲಾಲ್ ಅಬೋ ಮಹಿ ಅವರ ಕುಟುಂಬ ಸ್ಪಷ್ಟವಾಗಿ ನಿರಾಕರಿಸಿದೆ.
ಅಲ್ಲದೇ, ನ್ಯಾಯಾಲಯದಿಂದ ನಿಗದಿಯಾಗಿರುವ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲೇಬೇಕು ಎಂದು ಪಟ್ಟುಹಿಡಿದಿದೆ.
ನಿಮಿಷಾ ಪ್ರಿಯಾ ಅಪರಾಧವನ್ನು ನಮ್ಮ ಕುಟುಂಬವು ಕ್ಷಮಿಸುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಕ್ಷಮಾ ಪರಿಹಾರವನ್ನು (ಬ್ಲಡ್ ಮನಿ) ಸ್ವೀಕರಿಸುವುದಿಲ್ಲ ಎಂದು ನಿಮಿಷಾರಿಂದ ಹತ್ಯೆಯಾದ ಯೆಮನ್ ಪ್ರಜೆ ತಲಾಲ್ ಅಬ್ದು ಮೆಪ್ಪಿ ಸಹೋದರ ಅಬ್ದುಲ್ ಫತ್ತಾಹ್ ಹೇಳಿದ್ದಾರೆ.
ಬಿಬಿಸಿ ಅರೇಬಿಕ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಫತ್ತಾಹ್, ತಡ ಮಾಡದೇ ನಿಮಿಷಾ ಪ್ರಿಯಾರನ್ನು ಗಲ್ಲಿಗೇರಿ ಸಬೇಕು ಎಂದು ಒತ್ತಾಯಿಸಿದ್ದಾರೆ.
ಭಾರತದ ಮಾಧ್ಯಮಗಳು ಅಪರಾಧಿಯನ್ನು ಸಂತ್ರಸ್ತೆ ಎನ್ನುವ ರೀತಿ ಬಿಂಬಿಸುತ್ತಿವೆ. ನಿಮಿಷಾಳಿಗೆ ಮೆಹಿ ಕಿರುಕುಳ ನೀಡಿದ್ದನು ಮತ್ತು ಆಕೆಯ ಪಾಸ್‌ಪೋರ್ಟ್ ಇಟ್ಟುಕೊಂಡಿದ್ದನು ಎಂಬ ಸುಳ್ಳನ್ನು ಹರಡುತ್ತಿವೆ. ಈ ಸುಳ್ಳುಗಳಿಂದ ನಮ್ಮ ಕುಟುಂಬಕ್ಕೆ ಇನ್ನಷ್ಟು ನೋವಾಗಿದೆ ಎಂದು ಹೇಳಿದ್ದಾರೆ.
ಕೊಲೆ ಆರೋಪದ ಮೇಲೆ ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಅದರಂತೆ ಜುಲೈ 16 ರಂದು ಆಕೆಯನ್ನು ಗಲ್ಲಿಗೇರಿಸಬೇಕಿತ್ತು. ಈ ನಡುವೆ ಸುಪ್ರೀಂ ಕೋರ್ಟ್ ನಲ್ಲಿ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆಯ ಅರ್ಜಿ ಕೂಡ ಸಲ್ಲಿಕೆಯಾಗಿತ್ತು.
ಮರಣದಂಡನೆಯನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ಅಲ್ಲಿನ ನ್ಯಾಯಾಲಯ ಮುಂದಿನ ಆದೇಶದ ವರೆಗೆ ಮುಂದೂಡಿದೆ.
ಕೊಲೆ ಕೇಸ್: ಯೆಮೆನ್ ಪ್ರಜೆ ತಲಾಲ್ ಅಯ್ಯೋ ಮೆಹದಿ ಅವರನ್ನು ಕೊಲೆ ಮಾಡಿದ ಆರೋಪ ನಿಮಿಷಾ ಪ್ರಿಯ ಮೇಲಿದೆ. ಆಕೆ 3 ವರ್ಷಗಳಿಂದ ಜೈಲಿನಲ್ಲಿದ್ದಾಳೆ.
2008 ರಲ್ಲಿ ನಿಮಿಷಾ ಪ್ರಿಯಾ ನರ್ಸಿಂಗ್‌ಗಾಗಿ ಯೆಮೆನ್‌ಗೆ ಹೋಗಿದ್ದಳು. 2015 ರಲ್ಲಿ ತಲಾಲ್ ಅಬ್ಬೋ ಮತ್ತೆ ಅವರೊಂದಿಗೆ ಕ್ಲಿನಿಕ್ ಒಂದನ್ನು ಓಪನ್ ಮಾಡಿದಳು. ಬಳಿಕ ಮಹಿ ತನ್ನ ಪಾಸ್‌ಪೋರ್ಟ್ ಅನ್ನು ಕಸಿದುಕೊಂಡು ತನಗೆ ಸಾಕಷ್ಟು ಹಿಂಸೆ ನೀಡಿದರು. ಅಲ್ಲದೇ ಕ್ಲಿನಿಕ್‌ನಿಂದ ಬಂದಂತಹ ಆದಾಯವನ್ನು ಕೂಡ ಕಸಿದುಕೊಂಡರು ಎಂದು ನಿಮಿಷಾ ಆರೋಪಿಸಿದಾಳೆ.
ಇದಾದ ಬಳಿಕ 2017 ರಲ್ಲಿ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯುವ ಸಲುವಾಗಿ ಮಹಿ ಪ್ರಜ್ಞಾಹೀನರಾಗಲು ನಿಮಿಷಾ ಇಂಜೆಕ್ಷನ್ ನೀಡಿದಳು. ಆದರೆ ಓವರ್ ಡೋಸ್‌ನಿಂದಾಗಿ ಮೆಹದಿ ಸಾವನ್ನಪ್ಪಿದರು.