ದೊಡ್ಡಬಳ್ಳಾಪುರ: ಮನೆಯೊಂದಕ್ಕೆ ಬೆಂಕಿ (Fire) ಬಿದ್ದು, ಹೊತ್ತಿ ಉರಿದಿರುವ ಘಟನೆ ನಗರದ ಕೊಂಗಾಡಿಯಪ್ಪ ಕಾಲೇಜು ಹಿಂಭಾಗ ಇಂದು ಸಂಜೆ ಸಂಭವಿಸಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.
ದಿ.ತಿಮ್ಮಪ್ಪಯ್ಯ ಎನ್ನುವವರಿಗೆ ಸೇರಿದ ಮನೆ ಇದು ಎನ್ನಲಾಗುತ್ತಿದ್ದು, ಬೆಂಕಿಗೆ ಹಲವು ಅನುಮಾನಾಸ್ಪದ ಮಾತುಗಳು ಕೇಳಿ ಬರುತ್ತಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ದೌಡಾಯಿಸಿದ್ದಾರೆ. (ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)