ಬೆಂಗಳೂರು: ಗೌರಿಬಿದನೂರಿನಿಂದ ಬೆಂಗಳೂರಿಗೆ ಎರಡು ಪ್ಯಾಸೆಂಜರ್ ರೈಲುಗಳ (Passenger trains) ಸಂಚಾರವನ್ನು ಸ್ಥಗಿತಗೊಳಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಂತೆ ಪ್ರಯಾಣಿಕ ಮೋಹನ್ ದಾಸರಿ ಎನ್ನುವವರು ರೈಲ್ವೇ ರಾಜ್ಯ ಮಂತ್ರಿ ವಿ.ಸೋಮಣ್ಣ ಅವರಿಗೆ ಟ್ಯಾಗ್ ಮಾಡಿ, ಪ್ರಯಾಣಿಕರ ಪರದಾಟದ ವಿಡಿಯೋ ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲ್ವೇ ರಾಜ್ಯ ಮಂತ್ರಿ ವಿ.ಸೋಮಣ್ಣ ರವರೇ, ಪ್ಯಾಸೆಂಜರ್ ರೈಲುಗಳು ಸೇವೆಗಾಗಿ, ಲಾಭಮಾಡಲು ಅಲ್ಲ ಎಂದು ಕುಟುಕಿದ್ದಾರೆ.
ರೈಲ್ವೇ ರಾಜ್ಯ ಮಂತ್ರಿ ಶ್ರೀ @VSOMANNA_BJP ರವರೇ, ಪ್ಯಾಸೆಂಜರ್ ರೈಲುಗಳು ಸೇವೆಗಾಗಿ, ಲಾಭಮಾಡಲು ಅಲ್ಲ. ನೋಡಿ ನಮ್ಮಗಳ ಪರಿಸ್ಥಿತಿ ಗೌರಿಬಿದನೂರು ಇಂದ ಬೆಂಗಳೂರಿಗೆ ಸಂಜೆ 5 ಗಂಟೆಗೆ ಬರುವ ಅನಂತಪುರ – ಬೆಂಗಳೂರು ಪ್ಯಾಸೆಂಜರ್ ರೈಲಿನ ಇರುವ ಪರಿಸ್ಥಿತಿ. ಮೊದಲು ಮೂರ್ನಾಲ್ಕು ತಿಂಗಳುಗಳ ಹಿಂದೆ ಎರಡು ಪ್ಯಾಸೆಂಜರ್ ರೈಲುಗಳಿದ್ದವು, ಎರಡು… pic.twitter.com/ukbbk9qZkV
— ಮೋಹನ್ ದಾಸರಿ – Mohan Dasari (@MohanDasari_) July 21, 2025
ನೋಡಿ ನಮ್ಮಗಳ ಪರಿಸ್ಥಿತಿ ಗೌರಿಬಿದನೂರು ಇಂದ ಬೆಂಗಳೂರಿಗೆ ಸಂಜೆ 5 ಗಂಟೆಗೆ ಬರುವ ಅನಂತಪುರ – ಬೆಂಗಳೂರು ಪ್ಯಾಸೆಂಜರ್ ರೈಲಿನ ಇರುವ ಪರಿಸ್ಥಿತಿ.
ಮೊದಲು ಮೂರ್ನಾಲ್ಕು ತಿಂಗಳುಗಳ ಹಿಂದೆ ಎರಡು ಪ್ಯಾಸೆಂಜರ್ ರೈಲುಗಳಿದ್ದವು, ಎರಡು ಗಂಟೆಗಳ ಅಂತರದಲ್ಲಿ, ಇಷ್ಟೊಂದು ಗಜಿಬಿಜಿ ಇರುತ್ತಿರಲಿಲ್ಲ, ವಾರದ ಎರಡು ಮೂರು ದಿನ ನಿಲ್ಲುವುದಕ್ಕೂ ಜಾಗವಿರುವುದಿಲ್ಲ. ದಯವಿಟ್ಟು ಮೊದಲಿನ ತರಹ ಎರಡು ಪ್ಯಾಸೆಂಜರ್ ರೈಲುಗಳನ್ನ ಬಿಡಿ, ಸಾರ್ವಜನಿಕರಿಗೆ ಸಹಾಯ ಮಾಡಿ ಎಂದು ಮೋಹನ್ ದಾಸರಿ ಒತ್ತಾಯಿಸಿದ್ದಾರೆ.