ನವದೆಹಲಿ: ಇತ್ತೀಚೆಗಷ್ಟೇ ಕನ್ನಡ ಭಾಷೆಯ ಕುರಿತು ಮಾತನಾಡಿ ವಿವಾದ ಸೃಷ್ಟಿಸಿದ್ದ ನಟ, ರಾಜಕಾರಣಿ ಕಮಲ್ ಹಾಸನ್ (Kamal Haasan) ತಮಿಳುನಾಡಿನಿಂದ ರಾಜ್ಯಸಭೆ ಸದಸ್ಯರಾಗಿ ಇಂದು (ಗುರುವಾರ) ತಮಿಳಿನಲ್ಲಿ ಪ್ರಮಾವಚನ ಸ್ವೀಕರಿಸಿದರು.
ಕಮಲ್ ಹಾಸನ್ ಅವರಿಗೆ ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಅವರು ಪ್ರಮಾಣವಚನ ಬೋಧಿಸಿದರು.
கமல்ஹாசன் எனும் நான்🔥🔥🔥#KamalHaasan_MP#கமல்ஹாசன்_எனும்_நான் pic.twitter.com/UtYVe507fi
— SundaR KamaL (@Kamaladdict7) July 25, 2025
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ತನ್ನ ಮಿತ್ರಪಕ್ಷವಾದ ಎಂಎನ್‌ಎಂ ಪಕ್ಷಕ್ಕೆ ಒಂದು ಸ್ಥಾನ ಬಿಟ್ಟುಕೊಟ್ಟಿತ್ತು. ಆ ಮೂಲಕ ರಾಜ್ಯಸಭೆಗೆ ಕಮಲ್ ಹಾಸನ್ ಅವರನ್ನು ಬೆಂಬಲಿಸಿತ್ತು.
ಕಮಲ್ ಹಾಸನ್ ಮಕ್ಕಳ್ ನೀಧಿ ಮೈಯ್ಯಂ (MNM) ಪಕ್ಷದ ಸ್ಥಾಪಕ ಆಗಿದ್ದಾರೆ.
ಈ ಹಿಂದೆ ಕಮಲ್ ಹಾಸನ್ ನೇತೃತ್ವದ MNM ಪಕ್ಷದ ಜೊತೆ 2024ರ ಲೋಕಸಭಾ ಚುನಾವಣೆಗೆ ಮೊದಲು ಮಾಡಿಕೊಂಡ ಒಪ್ಪಂದಕ್ಕೆ ಅನುಗುಣವಾಗಿ ಆ ಪಕ್ಷಕ್ಕೆ ಒಂದು ಸ್ಥಾನ ಬಿಟ್ಟುಕೊಡಲಾಗಿದೆ ಎಂದು ಡಿಎಂಕೆ ಪಕ್ಷದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹೇಳಿದ್ದರು.